September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಶಿರ್ಡಿ,ಶನಿ ಶಿಂಗಣಾಪುರ, ಭೀಮಾಶಂಕರ ಕ್ಷೇತ್ರ ದರ್ಶನ: ಶ್ರೀ ಕಾಳಿದಾಸ ಬಾಬಾ ಮಹಾಸ್ವಾಮೀಜಿಯವರಿಂದ ಬೆಳ್ತಂಗಡಿ ಯಾತ್ರಾರ್ಥಿಗಳಿಗೆ ಆಶೀರ್ವಾದ

ಬೆಳ್ತಂಗಡಿ: ಬೆಳ್ತಂಗಡಿಯಿಂದ ತೆರಳಿದ್ದ ಯಾತ್ರಾರ್ಥಿಗಳ ತಂಡವು ಕಳೆದ ನಾಲ್ಕು ದಿನಗಳಲ್ಲಿ ಶಿರ್ಡಿ ಸಾಯಿಬಾಬಾ ಕ್ಷೇತ್ರ, ಶನಿ ಶಿಂಗಣಾಪುರ, ಭೀಮಾಶಂಕರ ಜ್ಯೋತಿರ್ಲಿಂಗ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದರ್ಶನ ಪಡೆದರು.

ಶಿರ್ಡಿಯಲ್ಲಿ ಸಾಯಿಬಾಬಾ ಅವರ ಸಮಾಧಿ ಮಂದಿರದಲ್ಲಿ ದರ್ಶನ ಪಡೆದ ಯಾತ್ರಾರ್ಥಿಗಳು, ಸಾಯಿಬಾಬಾ ಅವರ ತಪೋಭೂಮಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಿದರು.
ಬಳಿಕ ಶನಿ ಶಿಂಗಣಾಪುರ ಹಾಗೂ ಭೀಮಾಶಂಕರ ಜ್ಯೋತಿರ್ಲಿಂಗ ಕ್ಷೇತ್ರಗಳಿಗೆ ತೆರಳಿ ವಿಶೇಷ ಪೂಜೆ ಹಾಗೂ ದರ್ಶನ ನೆರವೇರಿಸಿದರು.

ಈ ಸಂದರ್ಭದಲ್ಲಿ ಹರಿಯಾಣದ ಪ್ರಸಿದ್ಧ ನಿತ್ಯಾನಂದ ಧಾಮ, ಸಾಂಪ್ಲಾದ ಶ್ರೀ ಶ್ರೀ ಶ್ರೀ 1008 ಕಾಳಿದಾಸ ಬಾಬಾ ಮಹಾಸ್ವಾಮೀಜಿಯವರನ್ನು ಶನಿ ಶಿಂಗಣಾಪುರ ಕ್ಷೇತ್ರದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗುರುಗಳೆಂದು ಪ್ರಸಿದ್ಧರಾಗಿರುವ ಕಾಳಿದಾಸ ಬಾಬಾ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆಯುವ ಅವಕಾಶ ಯಾತ್ರಾರ್ಥಿಗಳಿಗೆ ವಿಶೇಷ ಅನುಭವವಾಯಿತು.

ನಾಲ್ಕೂರು ಮಜ್ಜೇನಿಬೈಲು ಅನಂತರಾಮ ಹೊಳ್ಳ ಅವರ ನೇತೃತ್ವದಲ್ಲಿ ಈ ಯಾತ್ರೆ ಕೈಗೊಳ್ಳಲಾಗಿತ್ತು.ಯಾತ್ರೆಯಲ್ಲಿ ವಿಶ್ವನಾಥ ಹೊಳ್ಳ, ಪ್ರವೀಣ್ ಕುಮಾರ್ ಎಚ್.ಎಸ್., ಮನೋಹರ್ ಬಳಂಜ, ಸಂತೋಷ್ ಪಿ. ಕೋಟ್ಯಾನ್ ಬಳಂಜ, ರಾಜೇಶ್ ಪೂಜಾರಿ ಮೂಡುಕೋಡಿ, ಚಿದಾನಂದ ಇಡ್ಯ, ಜಯ ಪೂಜಾರಿ ಮಂಗಳೂರು, ಲೋಹಿತ್ ಕುಮಾರ್, ಶೇಖರ್ ಶೆಟ್ಟಿ ಕರ್ಮಿತ್ತಿಲ್,ನವೀನ್,ವಿನಯ್ ಶೆಟ್ಟಿ, ನಾಗರಾಜ್ ಸೇರಿದಂತೆ ಹಲವು ಯಾತ್ರಾರ್ಥಿಗಳು ಉಪಸ್ಥಿತರಿದ್ದರು.

Related posts

ಮೇ 26: ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಉಚಿತ ಚರ್ಮರೋಗ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ: ಮಾತೃ ವೃಂದ ಶಿಶುಪಾಲನ ಕೇಂದ್ರ ಉದ್ಘಾಟನೆ

Suddi Udaya

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಅಮಾನವೀಯ ದಾಳಿಯನ್ನು ಖಂಡಿಸಿ ಧರ್ಮಪ್ರೇಮಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಮೌನ ಪ್ರತಿಭಟನೆ

Suddi Udaya

ಕಳೆಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಉಚಿತ ಯಕ್ಷ ಶಿಕ್ಷಣ ತರಬೇತಿ ಉದ್ಘಾಟನೆ

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಜೆಸಿ ಜಯೇಶ್ ಬರೆಟ್ಟೊ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಉರುವಾಲು : ಮುಹಮ್ಮದ್ ರಾಝಿಖ್ ದುಬೈನಲ್ಲಿ ಅನುಮಾನಸ್ಪದವಾಗಿ ಸಾವು

Suddi Udaya
error: Content is protected !!