22.3 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಮಾಳವ ಯಾನೆ ಮಲ್ಲವರ ಯುವಕ ಮತ್ತು ಮಹಿಳಾ ಸಂಘದಿಂದ ‘ಕೆಸರಿನಲ್ಲಿ ಒಂದು ದಿನ’ ಕಾರ್ಯಕ್ರಮ

ಬೆಳ್ತಂಗಡಿ : ಮಾಳವ ಯಾನೆ ಮಲ್ಲವರ ಸಮಜಾಭ್ಯುಧಯ ಸಂಘ ( ರಿ) ಬೆಳ್ತಂಗಡಿ ಇದರ ಸಹಕಾರದೊಂದಿಗೆ ಮಾಳವ ಯಾನೆ ಮಲ್ಲವರ ಯುವಕ ಸಂಘ ಬೆಳ್ತಂಗಡಿ ಮತ್ತು ಮಹಿಳಾ ಸಂಘ ಬೆಳ್ತಂಗಡಿ ಇದರ ವತಿಯಿಂದ ನಡೆದ ಪ್ರಥಮ ವರ್ಷದ ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಯ ಅಲ್ಲಾಟಬೈಲು ಎಂಬಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜದ ಹಿರಿಯರು ಲಿಂಗಪ್ಪ ಹೆಗ್ಡೆ ನೆರವೇರಿಸಿದರು. ನಂತರದಲ್ಲಿ ಗದ್ದೆಗೆ ಹಾಲು ಒಯ್ಯುವುದರಿಂದ ಆಟೋಟ ಸ್ಪರ್ಧೆಗಳನ್ನು ಪ್ರಾರಂಭಿಸಲಾಯಿತು. ಸಂಜೆ ಸಮರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶಂಕರ್ ಬೆಳ್ತಂಗಡಿ ಅಧ್ಯಕ್ಷರು ಮಾಳವ ಯಾನೆ ಮಲ್ಲವರ ಸಮಜಾಭ್ಯುಧಯ ಸಂಘ ಬೆಳ್ತಂಗಡಿ ವಹಿಸಿದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಶೆಟ್ಟಿ, ನಿತ್ಯಾನಂದ ಮಾಲಾಡಿ ಮತ್ತು ಕುಶಾಲ ಮಾಧವ ಹಾಗೂ ಮಾಳವ ಯಾನೆ ಮಲ್ಲವರ ಯುವಕ ಸಂಘದ ಅಧ್ಯಕ್ಷ ಮೋಹನ್ ಬೆಳ್ತಂಗಡಿ ಮತ್ತು ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಸತೀಶ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ರವರನ್ನು ಮಾಳವ ಯಾನೆ ಮಲ್ಲವರ ಯುವಕ ಸಂಘ ದಿಂದ ಗೌರವಿಸಲಾಯಿತು. ಮತ್ತು ಅಲ್ಲಾಟಬೈಲು ಈ ಭಾಗಕ್ಕೆ ಶಾಸಕರಿಂದ ವಿಶೇಷ ಅನುದಾನದಲ್ಲಿ ಸಂಪರ್ಕ ರಸ್ತೆಯನ್ನು ಮಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಊರಿನ ಸಮಸ್ತರಿಂದ ಶಾಸಕರನ್ನು ಗೌರವಿಸಲಾಯಿತು.

ಮಾಳವ ಯಾನೆ ಮಲ್ಲವರ ಯುವಕ ಸಂಘ ಅಧ್ಯಕ್ಷ ಮೋಹನ್ ಬೆಳ್ತಂಗಡಿ ಸ್ವಾಗತಿಸಿ, ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಅಶ್ವಿನಿ ದಿನೇಶ್ ಧನ್ಯವಾದವಿತ್ತರು. ಮಾಳವ ಯಾನೆ ಮಲ್ಲವರ ಸಮಜಾಭ್ಯುಧಯ ಸಂಘ ಪ್ರಧಾನ ಕಾರ್ಯದರ್ಶಿ ಸತೀಶ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

Related posts

ಕಲ್ಬೆಟ್ಟು ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

Suddi Udaya

ಉಜಿರೆ ಎಸ್.ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ “ದೀಕ್ಷಾವಿಧಿ” ತರಗತಿ ಪ್ರಾರಂಭೋತ್ಸವ

Suddi Udaya

ಸಿದ್ದಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ, ಪ್ರಗತಿಪರ ಕೃಷಿಕ ಕಿರಣ್ ಕುಮಾರ್ ಮಂಜಿಲ ಆಯ್ಕೆ

Suddi Udaya

ಉಜಿರೆಯಿಂದ ಪೆರಿಯಶಾಂತಿಯ ರಸ್ತೆ ಕಾಮಗಾರಿ ಕೇಂದ್ರದ ಯೋಜನೆ ಮುಗ್ರೋಡಿ ಕನ್ಸ್ ಟ್ರಕ್ಷನ್ ಗೆ ಟೆಂಡರ್

Suddi Udaya

ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ; ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಭಜನಾ ಸಪ್ತಾಹದ ಧಾರ್ಮಿಕ ಸಭೆ

Suddi Udaya
error: Content is protected !!