ಬೆಳ್ತಂಗಡಿ: ಉಜಿರೆ ಗ್ರಾಮದ ಕೊಡಂಗೆಯ ಬಿ.ಕೆ. ಶಂಕರ ಮೊಗೆರಾಯ (71) ಹೃದಯಾಘಾತದಿಂದ ಸೆ.25 ರಂದು ಮೂಡಬಿದಿರೆಯ ಕರಿಂಜೆಯಲ್ಲಿ ನಿಧನ ಹೊಂದಿದರು.
ಅವಿವಾಹಿತರಾಗಿದ್ದ ಅವರು ಪೂಜಾ ಕಾರ್ಯ, ಪೌರೋಹಿತ್ಯ,ಅಡುಗೆ ಸುಧಾರಣೆ ಕಾರ್ಯಕ್ರಮಗಳಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿ ವ್ಯಕ್ತಿಯಾಗಿದ್ದರು. ಅವರಿಗೆ ಸಹೋದರ ಸಹೋದರಿಯರು ಇದ್ದಾರೆ.












