30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು ಶ್ರೀ ಧ.ಮಂ.ಅ.ಪ್ರೌಢ ಶಾಲೆಯಲ್ಲಿ ಆಟಿದ ಲೇಸು ಕಾರ್ಯಕ್ರಮ

ಬೆಳಾಲು ಶ್ರೀ ಧ. ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ಆ.11 ರಂದು ಆಟಿದ ಲೇಸು ಕಾರ್ಯಕ್ರಮ ಜರಗಿತು.

ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕರಾದ ಡಾ.ರಜತ ಪಿ ಶೆಟ್ಟಿ ಉದ್ಘಾಟಿಸಿ,ಈ ಕಾರ್ಯಕ್ರಮದಿಂದ ಹಿಂದಿನ ಕೃಷಿ, ಆಹಾರ, ಸಂಸ್ಕೃತಿಯ ಅರಿವು ಮೂಡುತ್ತದೆ , ಮನೆಯ ಹಿರಿಯರು ಗ್ರಂಥಾಲಯವಿದ್ದಂತೆ ಅವರ ಜ್ಞಾನ ಪಡೆದುಕೊಂಡು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ರವೀಂದ್ರ ಶೆಟ್ಟಿ ಬಳಂಜ ಮಾತನಾಡಿ ತುಳುನಾಡಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವ ಒಳ್ಳೆಯ ಕಾರ್ಯಕ್ರಮ ಇದಾಗಿದೆ ತುಳು ಭಾಷೆ ಮಾತನಾಡುವವರು ಮೃದು ಸ್ವಭಾದವರಾಗಿದ್ದು,ಇಲ್ಲಿನ ಅಹಾರ,ಸಂಸ್ಕೃತಿ ವಿಶಿಷ್ಟವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾನಂದ ಮಾತನಾಡಿ ತುಳುನಾಡಿನ ಸಂಪ್ರದಾಯ ಪರಂಪರೆಯನ್ನು ಉಳಿಸಿಕೊಂಡು, ಪಾಲಿಸಿಕೊಂಡು ಬರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕರಾದ ರವಿಚಂದ್ರ ಜೈನ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿದ್ಯಾರ್ಥಿಗಳಾದ ಸೃಜನ್ಯ ಆಟಿ ತಿಂಗಳ ವಿಶೇಷತೆ, ಚರಣ್ ಎದುರು ಕತೆ,ನಿಕ್ಷಿತ್ ಹಳ್ಳಿ ಮದ್ದು,ಕಾರ್ತಿಕ್ ತುಳುನಾಡ ಹಬ್ಬಗಳ ಕುರಿತು ಮಾತನಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ತುಳುನಾಡಿನ ಹಳೆಯ ವಸ್ತುಗಳ ಮತ್ತು ತುಳು ನಾಡಿಗೆ ಸಂಬಂಧಿಸಿದ ಪುಸ್ತಕಗಳನ್ನು ಪ್ರದರ್ಶಿಸಲಾಯಿತು.

ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿಯಾರಾದ ವಾರಿಜ ಎಸ್.ಗೌಡ , ರಾಜಶ್ರೀ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಪ್ರಮೀಳಾ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಆಟಿ ತಿಂಗಳ ವಿಶೇಷ ಖಾದ್ಯಗಳ ಪರಿಚಯವನ್ನು ನೀಡಿ ಸವಿಯಲಾಯಿತು‌. ದೀಪಿಕಾ ಸ್ವಾಗತಿಸಿ, ಆತ್ಮಿ ವಂದಿಸಿದರು. ಸುಷ್ಮಾ ಮತ್ತು ಸೃಜನ್ಯ ಕಾರ್ಯಕ್ರಮ ನಿರೂಪಿಸಿದರು.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

Suddi Udaya

ಎಸ್‌ಡಿಎಂ ಕಾಲೇಜಿನ ಕಲಾಕೇಂದ್ರದ ವಿದ್ಯಾರ್ಥಿ ತಂಡದ ಭೀಷ್ಮಾಸ್ತಮಾನ ನಾಟಕಕ್ಕೆ ರಾಷ್ಟ್ರ ಪ್ರಶಸ್ತಿ

Suddi Udaya

ತಣ್ಣೀರುಪಂಥ : ಬೋಳ್ನಡ್ಕ ಭಾಗದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟರವರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.10 ಲಕ್ಷ ಅನುದಾನ ಕಾಂಕ್ರೀಟ್ ರಸ್ತೆ ನಿರ್ಮಾಣ

Suddi Udaya

ಶಿಬರಾಜೆ-ಪರಪ್ಪು ಶ್ರೀ ದುರ್ಗಾಪರಮೇಶ್ವರಿ ಮಂಡಳಿಯಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ

Suddi Udaya

ಭಾರೀ ಮಳೆ ; ಮೈದುಂಬಿ ಹರಿಯುತ್ತಿರುವ ಕಪಿಲ ನದಿ: ಶಿಶಿಲೇಶ್ವರ ದೇವಸ್ಥಾನ ಹೊರಂಗಣ ಜಲಾವೃತ

Suddi Udaya

ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಸ್ಕೂಟರ್ ಉಜಿರೆಯಲ್ಲಿ ಪತ್ತೆ: ಬೆಳ್ತಂಗಡಿ ಸಂಚಾರಿ ಪೊಲೀಸರಿಂದ ಸ್ಕೂಟರ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರ

Suddi Udaya
error: Content is protected !!