ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ International Fellowship of Rotarian Musicians (IFRM) ನ ನೂತನ ಅಧ್ಯಾಯವನ್ನು “ಬೆಳ್ತಂಗಡಿ ನಿನಾದ (Belthangady Ninada)” ಎಂಬ ಹೆಸರಿನಲ್ಲಿ IFRM.org ನಲ್ಲಿ ಅಧಿಕೃತವಾಗಿ ನೋಂದಾಯಿಸಲಾಗಿದ್ದು, ಇದರ ಚಾರ್ಟರ್ ಸಮಾರಂಭವು ಸೆ. 19ರಂದು ಉಜಿರೆಯ ಅರಳಿ ರಸ್ತೆಯ ಕಾಶಿಬೆಟ್ಟು, ರೋಟರಿ ಸೇವಾ ಭವನದಲ್ಲಿ ಸಂಭ್ರಮದಿಂದ ನಡೆಯಿತು.

ಸಂಗೀತ, ಸ್ನೇಹ ಮತ್ತು ಸೇವೆ ಎಂಬ ಆಶಯದೊಂದಿಗೆ ಆರಂಭಗೊಂಡಿರುವ ಬೆಳ್ತಂಗಡಿ ನಿನಾದ, ರೋಟರಿ ಕುಟುಂಬದ ಸಂಗೀತಾಸಕ್ತರನ್ನು ಒಂದೆಡೆ ಸೇರಿಸಿ, ಸಂಗೀತದ ಮೂಲಕ ಸ್ನೇಹವನ್ನು ಬೆಳೆಸಿ, ಆ ಸ್ನೇಹವನ್ನು ಸೇವೆಯೊಂದಿಗೆ ಜೋಡಿಸುವ ಒಂದು ವಿಶಿಷ್ಟ ಪ್ರಯತ್ನವಾಗಿದೆ.
ಕಾರ್ಯಕ್ರಮದಲ್ಲಿ ಐ.ಫ್.ಆರ್.ಎಂ ಝೋನ್ 5,7,8 ರ ಚೀಫ್ ಕಾರ್ಡಿನೇಟರ್ ಆದ .ರೊ.ನರಸಿಂಹನ್ ಕಣ್ಣನ್ ಪದಗ್ರಹಣ ಅತಿಥಿಯಾಗಿ ಉಪಸ್ಥಿತರಿದ್ದರು ಹಾಗೂ ಐ.ಎಫ್.ಆರ್.ಎಂ.ನ ರೀಜನಲ್ ಕಾರ್ಡಿನೇಟರ್ ಆದ ರವಿ ಚಕ್ರವರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಎಂ.ಬಿ.ಬಿ.ಸ್ ಸೀಟ್ ಪಡೆದ ಪಹಲ್ ಜೈನ್ ಹಾಗೂ ಶ್ರೀಪ್ರಿಯಾ ಪಡ್ವೆಟ್ನಾಯ, ಮತ್ತು ಬಿ.ಎನ್.ವೈ.ಎಸ್ ಸೀಟ್ ಪಡೆದ ಫಾತಿಮಾ ಇಶಾನಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಬೆಳ್ತಂಗಡಿ ನಿನಾದ ದ ಆರಂಭಿಕ ಸದಸ್ಯರಾಗಿ ಸುಮಾರು 21 ಮಂದಿ ಸದಸ್ಯರು ನೋಂದಾಯಿಸಿಕೊಂಡು, ಈ ಸಂಗೀತಮಯ ಪಯಣಕ್ಕೆ ಶುಭಾರಂಭ ನೀಡಿದರು.
ಚಾರ್ಟರ್ ಸಮಾರಂಭದ ನಂತರ ಖ್ಯಾತ ಗಾಯಕರು ಹಾಗೂ ಸಂಗೀತಾಸಕ್ತರಾದ ನರಸಿಂಹನ್ ಕಣ್ಣನ್ , ದಿವ್ಯಾ ರಾಘವನ್, ರವಿ ಚಕ್ರವರ್ತಿ , ಜಗದೀಶ್ ಮುಗುಳಿ ಸೇರಿದಂತೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಂದ ಸಂಗೀತ ರಸಮಂಜರಿ ನಡೆಯಿತು.
ಐ.ಎಫ್.ಆರ್.ಎಂ.,ನ ಸ್ಥಾಪಕ ಅಧ್ಯಕ್ಷರಾಗಿ ಪೂರನ್ ವರ್ಮ , ಉಪಾಧ್ಯಕ್ಷರಾಗಿ ಬಿ.ಕೆ.ಧನಂಜಯ ರಾವ್ ಹಾಗೂ ಕಾರ್ಯದರ್ಶಿಯಾಗಿ ಸಂದೇಶ್ ರಾವ್ ಆಯ್ಕೆಯಾದರು. ಬೆಳ್ತಂಗಡಿ ನಿನಾದವು ಮುಂದಿನ ದಿನಗಳಲ್ಲಿ ಸಂಗೀತದ ಮೂಲಕ ರೋಟರಿ ಕುಟುಂಬದಲ್ಲಿ ಇನ್ನಷ್ಟು ಸ್ನೇಹ, ಪ್ರತಿಭೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ವೇದಿಕೆಯಾಗುವ ಆಶಯವನ್ನು ಹೊಂದಿದೆ.
ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷ ಶ್ರೀಧರ ಕೆ.ವಿ ಸ್ವಾಗತಿಸಿ, ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ ವಂದಿಸಿದರು.











