30.7 C
ಪುತ್ತೂರು, ಬೆಳ್ತಂಗಡಿ
September 27, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಣ್ಣೀರುಪಂತ ಸುಗಮ ಸಂಜೀವಿನಿ ಮಹಿಳಾ ಒಕ್ಕೂಟದಿಂದ ಆಟಿಡೊಂಜಿ ದಿನ

ತಣ್ಣೀರುಪಂತ : ಸುಗಮ ಸಂಜೀವಿನಿ ಮಹಿಳಾ ಒಕ್ಕೂಟ ತಣ್ಣೀರುಪಂತ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾಪೂಜಿ ಸಭಾಭವನ ತಣ್ಣೀರುಪಂತದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಮಮತ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಜಯಾನಂದ ಕಲ್ಲ್ಲಾಪು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಶ್ರೀಮತಿ ಸುಮಯ್ಯ ಹೆಚ್, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಶಶಿಧರ್ ಮತ್ತು ಬೆಳ್ತಂಗಡಿ ತಾಲೂಕು NRLM ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ, ತಣ್ಣೀರುಪಂತ ಪಂಚಾಯತ್ ಕಾರ್ಯದರ್ಶಿ ಆನಂದ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಸಿಬ್ಬಂದಿಗಳು, ತಣ್ಣೀರುಪಂಥ ಗ್ರಾಮ ಪಂಚಾಯತಿನ ಸಿಬ್ಬಂದಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಆಟಿಡೊಂಜಿ ದಿನ ಕಾರ್ಯಕ್ರಮದ ಕುರಿತು ಮುಖ್ಯ ಭಾಷಣಕಾರರಾಗಿ ದೈವ ನರ್ತಕರಾದ ಮೋನಪ್ಪ ಕಲ್ಲಾಪುರವರು ತಮ್ಮ ಹಿತ ನುಡಿಗಳನ್ನು ಸಭೆಗೆ ತಿಳಿಸಿದರು. ಹಾಗೆ ಈ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ವಿವಿಧ ಖಾದ್ಯಗಳ ರುಚಿಯನ್ನು ಸವಿದರು.. ಕಾರ್ಯಕ್ರಮದಲ್ಲಿ ಚೆನ್ನ ಮಣಿ, ಹಗ್ಗ ಜಗ್ಗಾಟ ಮತ್ತು ಹಾಳೆ ಇಳಿಯುವುದು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು . ಅದರಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ತನ್ಯಪಾನ ಮತ್ತು ಅಂಗಾಂಗ ದಾನದ ಬಗ್ಗೆ ಮಾಹಿತಿಯನ್ನು ಬೆಳ್ತಂಗಡಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪುಷ್ಪ ಮತ್ತು ಪದ್ಮಾವತಿ ಕುಟುಂಬ ಕಲ್ಯಾಣ ಇಲಾಖೆ ಸಂಯೋಜಕರು ಮಂಗಳೂರು ನೀಡಿದರು.

ಒಕ್ಕೂಟದ ಸಿಬ್ಬಂದಿಗಳ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಎಮ್.ಬಿ.ಕೆ ಸೌಮ್ಯಶ್ರೀ ಅತಿಥಿಗಳನ್ನು ಸ್ವಾಗತಿಸಿದರು. ಕೃಷಿ ಸಖಿ ಶೋಭಾ ರವರ ಧನ್ಯವಾದವಿತ್ತರು.

Related posts

ಬೆಳಾಲು ಶ್ರೀ ಧ.ಮಂ ಪ್ರೌಢಶಾಲೆಯಲ್ಲಿ ಇಂಜಿನಿಯರ್ಸ್ ದಿನಾಚರಣೆ

Suddi Udaya

ಕೊಯ್ಯೂರು: ಅಕ್ರಮವಾಗಿ ಮದ್ಯ ಮಾರಾಟ: ಬೆಳ್ತಂಗಡಿ ಪೊಲೀಸರಿಂದ ದಾಳಿ

Suddi Udaya

ಮಚ್ಚಿನ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಶ್ರೀ ಈಶ್ವರ ದೇವರ ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ

Suddi Udaya

ಮಾ.28: ಶ್ರೀ ಮಾತಾ ನಾಲ್ಕೂರು ಇವರ ನೇತೃತ್ವದಲ್ಲಿ ತಾಲೂಕು ಮಟ್ಟದ ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ ಮೀಸಲಾತಿ ಪ್ರಕಟ

Suddi Udaya

ಗೇರುಕಟ್ಟೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್: ಖತೀಬರಾದ ತಾಜುದ್ದೀನ್ ಸಖಾಫಿರಿಗೆ ಬೀಳ್ಕೊಡುಗೆ

Suddi Udaya
error: Content is protected !!