September 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾ.28: ಶ್ರೀ ಮಾತಾ ನಾಲ್ಕೂರು ಇವರ ನೇತೃತ್ವದಲ್ಲಿ ತಾಲೂಕು ಮಟ್ಟದ ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಳಂಜ: ಶ್ರೀ ಮಾತಾ ನಾಲ್ಕೂರು ಇವರ ನೇತೃತ್ವದಲ್ಲಿ ಸಹಾಯಾರ್ಥಕ್ಕಾಗಿ ಪಂದ್ಯಾಟ ಖ್ಯಾತ ದೈವರಾಧಕ ದಿ. ಸುರೇಶ್ ಪೂಜಾರಿ ಹುಂಬೇಜೆ ಇವರ ಸ್ಮರಣಾರ್ಥ ಅಂಗವಾಗಿ ತಾಲೂಕು ಮಟ್ಟದ ಬಿಡ್ಡಿಂಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಮಾ.28ರಂದು ಸಂಜೆ ಕೊಡಮಣಿತ್ತಾಯ ದೈವದ ಆವರಣ ಬಳಂಜದಲ್ಲಿ ನಡೆಯಲಿದೆ.

ಕ್ರೀಡಾಂಗಣದ ಉದ್ಘಾಟನೆಯನ್ನು ಗುರುವಾಯನಕೆರೆ ನಿಸರ್ಗ ಕರ್ಟನ್ ಸಂಸ್ಥೆಯ ಮಾಲಕ ನಾಗೇಶ್ ಬರಾಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಗುಜರಾತ್ ಮೇ| ದ್ವಾರಕಾ ರೆಸ್ಟೋರೆಂಟ್ ಮಾಲಕ ಶೇಖರ್ ದೇವಾಡಿಗ ಪಾಲಬೆ ನೆರವೇರಿಸಲಿದ್ದಾರೆ.

ಸಭಾಧ್ಯಕ್ಷತೆಯನ್ನು ಶಾಸಕ ಹರೀಶ್‌ ಪೂಂಜ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ.ಪುಷ್ಪಗಿರಿ, ಶೀತಲ್ ಪಡಿವಾಳ್‌ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಬಹುಮಾನಗಳು: ಪ್ರಥಮ- 12000 ನಗದು ಹಾಗೂ ಶ್ರೀ ಮಾತಾ ಟ್ರೋಫಿ, ದ್ವಿತೀಯ- 7000 ನಗದು ಹಾಗೂ ಶ್ರೀ ಮಾತಾ ಟ್ರೋಫಿ, ತೃತೀಯ- 3000 ನಗದು ಹಾಗೂ ಶ್ರೀ ಮಾತಾ ಟ್ರೋಫಿ, ಚತುರ್ಥ 3000 ನಗದು ಹಾಗೂ ಶ್ರೀ ಮಾತಾ ಟ್ರೋಫಿ ಎಂದು ಸಂಘಟಕರು ತಿಳಿಸಿದ್ದಾರೆ.

Related posts

ಎ.16-21: ಬೆಳ್ತಂಗಡಿ ಮಹಿಳಾ ವೃಂದದ ಆಶ್ರಯದಲ್ಲಿ ಝೇಂಕಾರ ಬೇಸಿಗೆ ಶಿಬಿರ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಮಹೋತ್ಸವ ಸಂಪನ್ನ

Suddi Udaya

ಬೆಳಾಲು: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ

Suddi Udaya

ಅ.3-8: ಕೊಪ್ಪದಲ್ಲಿ 45ನೇ ಬೃಹತ್ ದಸರಾ ಯೋಗ ಕಾರ್ಯಕ್ರಮ, ಪೂರ್ವಭಾವಿ ಸಭೆ

Suddi Udaya

ಭಜನಾ ಪರಿಷತ್ತಿಗೆ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಕೊಯ್ಯೂರು ಪಿ ಚಂದ್ರಶೇಖರ ಸಾಲ್ಯಾನ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಕುವೆಟ್ಟು ಸ.ಉ.ಹಿ. ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya
error: Content is protected !!