31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಕೇಳ್ಕರ, ಕಲ್ಲಮೆ – ಮುಂಡೂರು ಕೆಸರುಮಯ; ರಸ್ತೆ ಸಂಚಾರಕ್ಕೆ ಅಡ್ಡಿ

ಬೆಳ್ತಂಗಡಿ: ಕರಂಬಾರು ಗ್ರಾಮದ ಕೇಳ್ಕರದಿಂದ ಕಲ್ಲಮೆಯಾಗಿ ಮುಂಡೂರನ್ನು ಸಂಪರ್ಕಿಸುವ ರಸ್ತೆ ಪೂರ್ತಿ ಕೆಸರುಮಯವಾಗಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ.

ಕಳೆದ 10 ವರ್ಷಗಳಿಂದ ಈ ರಸ್ತೆ ಡಮಾರು ಕಂಡಿಲ್ಲ, ಈ ಭಾಗದಲ್ಲಿ ಸುಮಾರು 40 ಮನೆಗಳಿದ್ದು, ಈ ರಸ್ತೆಯನ್ನು ಅವಲಂಭಿಸಿದ್ದಾರೆ.
ರಸ್ತೆ ಹಾಳಾಗಿದ್ದರಿಂದ ಶಾಲಾ ಬಸ್ ಇದರಲ್ಲಿ ಬರುವುದಿಲ್ಲ. ಹೀಗಾಗಿ ಶಾಲಾ ಮಕ್ಕಳು ಸ್ವಲ್ಪ ದೂರ ನಡೆದುಕೊಂಡು ಬಂದು ಬಸ್‌ನಲ್ಲಿ ಹೋಗಬೇಕಾದ ಪರಿಸ್ಥಿತಿಯಿದೆ.


ಈ ಕೆಸರುಮಯ ರಸ್ತೆಯಲ್ಲಿ ನಡೆಯುವಾಗ ಜಾರಿ ಬಿದ್ದರೆ ಮರಳಿ ಮನೆಗೇ ಬರಬೇಕು. ಪ್ರತೀ ವರ್ಷ ಸ್ಥಳೀಯರೊಬ್ಬರು ತಮ್ಮ ಸ್ವಂತ ಖರ್ಚಿನಲ್ಲಿ ಶ್ರಮದಾನದ ಮೂಲಕ ಮಳೆಗಾಲದಲ್ಲಿ ರಸ್ತೆ ರಿಪೇರಿ ಮಾಡಿಸುತ್ತಿದ್ದರು. ಆದರೆ ಈ ಬಾರಿ ಇದರ ದುರಸ್ತಿ ನಡೆಯದಿರುವುದರಿಂದ ರಸ್ತೆ ಕೆಸರುಮಯವಾಗಿದೆ. ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Related posts

ನ್ಯೂ ರೋಹಿಣಿ ಜ್ಯೂಸ್ ಸೆಂಟರ್ ಮಾಲಕ ಧನಂಜಯ ಹೃದಯಾಘಾತದಿಂದ ನಿಧನ: ಕೊಕ್ಕಡ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ಇದ್ದರೂ ದೊರೆಯದ ಸೌಲಭ್ಯ: ಸಾರ್ವಜನಿಕರ ಆಕ್ರೋಶ

Suddi Udaya

ಲಯನ್ಸ್ ಕ್ಲಬ್ ವತಿಯಿಂದ ಸುಲ್ಕೇರಿ ಕೋಲ್ಯಾಯದಲ್ಲಿ ನದಿಯ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಕಸಕಡ್ಡಿಗಳ ತೆರವು ಕಾರ್ಯ

Suddi Udaya

ಪಡಂಗಡಿ ಯುವಕ, ಎಲೆಕ್ಟ್ರಿಷಿಯನ್ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಧರ್ಮದಕಳ ಚಂದ್ರಶೇಖರ್ ಗೌಡ ಮತ್ತು ಚೋಮ ರವರ ಮನೆಗೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಭೇಟಿ

Suddi Udaya

ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕ ಸಂಘದಿಂದ ಕ್ಷೇಮನಿಧಿ ಯೋಜನೆಯ ಪ್ರಥಮ ಸಹಾಯಧನ ವಿತರಣೆ

Suddi Udaya

ಉಜಿರೆ ಹಳೆಪೇಟೆ ಮಸೀದಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya
error: Content is protected !!