31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಧರ್ಮಸ್ಥಳ: ಶ್ರೀ ಧ.ಮಂ.ಆಂ.ಮಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಭಾರತೀಯ ಸೇನೆಯ ಮಾಜಿ ಸೈನಿಕರು, ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿ ಜಯಕುಮಾರ್ ಧ್ವಜಾರೋಹಣವನ್ನು ನೆರವೇರಿಸಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಜೊತೆಗೆ ಸ್ವಾತಂತ್ರ್ಯ ಹೋರಾಟ ವೀರರ ತ್ಯಾಗ ಹಾಗೂ ಅವರಿಂದ ಅಳವಡಿಸಿಕೊಳ್ಳಬೇಕಾದ ಗುಣಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಮುಖ್ಯ ಅತಿಥಿ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ನಿವೃತ್ತ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸೋಮಶೇಖರ್ ಬಿ ಶೆಟ್ಟಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಅಗತ್ಯ ಅದರ ಒಳನೋಟಗಳು ಹಾಗೂ ಅದರ ಇತ್ತೀಚಿನ ಅಗತ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.ಇನ್ನೊಬ್ಬರಿಗೆ ಕೊಡುವ ಗುಣ ನಮಗೆ ಇರಬೇಕು.ಸಂಸ್ಕಾರ ಜೀವನ ರೂಪಿಸುತ್ತದೆ. ವಿದ್ಯಾವಂತರು ಹೃದಯವಂತರಾಗಬೇಕು ಎಂಬಿತ್ಯಾದಿ ವಿಚಾರಗಳನ್ನು ಉದಾಹರಣೆಯೊಂದಿಗೆ ವಿವರಿಸಿದರು.

ದೇಶಪ್ರೇಮವನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ ವಿ ಅವರ ಮಾರ್ಗದರ್ಶನದೊಂದಿಗೆ ಮೂಡಿ ಬಂದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿ ಅಲ್ಬಿನ ಕಾರ್ಯಕ್ರಮ ನಿರ್ವಹಿಸಿ, ಜಸೀನಾ ಸ್ವಾಗತಿಸಿ, ಅಮೀತ್ ಅತಿಥಿಗಳ ಕಿರು ಪರಿಚಯ ಮಾಡಿದರು. ತನುಶ್ರೀ ಧನ್ಯವಾದ ಇತ್ತರು. ಶಾಲೆಯ ಶಿಕ್ಷಕ ಶಿಕ್ಷಕೇತರ ವೃಂದದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಕರಾಯ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ

Suddi Udaya

ಕೊಕ್ಕಡ: ಸಂಕಷ್ಟದಲ್ಲಿರುವ ಕುಟುಂಬದ ಮನೆ ದುರಸ್ತಿಗೊಳಿಸಿ ಕೀಲಿಕೈ ಹಸ್ತಾಂತರ

Suddi Udaya

ಶಿಶಿಲ ಗ್ರಾಮದ ಸೇಸಪ್ಪ ಮಲೆಕುಡಿಯ ರವರ ಮನೆಗೆ ಮರ ಬಿದ್ದು ಅಪಾರ ಹಾನಿ

Suddi Udaya

ಬಳಂಜ: ಶಾಲಾ ಮಟ್ಟದ ‘ಕೋಡ್ ಕ್ರಾಫ್ಟ್ ವಿಜ್ಞಾನ ಮೇಳ’ ಸಂಪನ್ನ

Suddi Udaya

ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಜಿನ ಭಜನಾ ಸ್ಪರ್ಧೆಯ ಸಮಾಲೋಚನಾ ಸಭೆ

Suddi Udaya

ಮೂಡುಕೋಡಿಯಲ್ಲಿ ಕಾರು ಮತ್ತು ಪಿಕಪ್ ನಡುವೆ ಡಿಕ್ಕಿ, ಗಾಯ

Suddi Udaya
error: Content is protected !!