August 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಯು.ಎಸ್. ಆಟೋ ಚಾಲಕ ಮಾಲಕರ ಸಂಘದಿಂದ ಸ್ವಾತಂತ್ರೋತ್ಸವ ಆಚರಣೆ

ಉಜಿರೆ: ಯು.ಎಸ್. ಆಟೋ ಚಾಲಕ ಮಾಲಕರ ಸಂಘದಿಂದ ಸ್ವಾತಂತ್ರೋತ್ಸವ ಆಚರಣೆಯು ಉಜಿರೆ ಸೌತ್ ಪ್ಯಾಲೇಸ್ ಹೋಟೆಲ್ ಬಳಿ ನಡೆಯಿತು.

ಧ್ವಜಾರೋಹಣವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ತಾಂತ್ರಿಕ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ನೆರವೇರಿಸಿದರು. ಯು.ಎಸ್. ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಲತೀಫ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್. ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮೋಕ್ಷಿತಾ ಮತ್ತು ಅನುಪ್ರಿಯಾ ಹಾಗೂ ಪವರ್ ಮ್ಯಾನ್ ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು ಮಂದಿಗಳನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಯು.ಎಸ್. ಆಟೋ ಚಾಲಕ ಮಾಲಕರ ಸಂಘದ ಉಪಾಧ್ಯಕ್ಷ ಆಸಿಫ್ ಅತ್ತಾಜೆ, ಯು.ಎಸ್. ಆಟೋ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಹರ್ಷೇಂದ್ರ ಕುಲಾಲ್, ಸಬ್ ಇನ್ಸ್‌ಪೆಕ್ಟ‌ರ್ ಸಿಕಂದರ್ ಪಾಷ, ಉದ್ಯಮಿ ರಾಜೇಶ್ ಪೈ, ಬೆನಕ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಗೋಪಾಲಕೃಷ್ಣ, ಉದ್ಯಮಿಗಳಾದ ಶಿವಕಾಂತ, ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ, ಅರವಿಂದ ಕಾರಂತ, ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷ ಅಬುಬಕ್ಕರ್ ಸುಪ್ರಿಮ್ ಪ್ರಭಾಕರ ಹೆಗ್ಡೆ ಮಹಾವೀರ ಗ್ರೂಪ್ಸ್ ಉಜಿರೆ, ಫಾರೂಕ್ ಹೋಟೆಲ್ ಸೌತ್ ಪ್ಯಾಲೇಸ್ ಉಜಿರೆ, ಮೋಹನ್ ಚೌಧರಿ ಶ್ರೀ ದುರ್ಗಾ ಟೆಕ್ಸ್‌ ಟೈಲ್ಸ್ ಉಜಿರೆ, ಪ್ರಶಾಂತ್ ಜೈನ್ ಅಮೃತ್ ಸಿಲ್ಕ್ ಉಜಿರೆ, ಹೆರಾಲ್ಡ್ ಪಿಂಟೊ ಸುದ್ದಿ ಬಿಡುಗಡೆ ವಾರಪತ್ರಿಕೆ ಬೆಳ್ತಂಗಡಿ, ಸಂತೋಷ್ ಪಿ. ಕೋಟ್ಯಾನ್ ಸುದ್ದಿ ಉದಯ ವಾರಪತ್ರಿಕೆ ಬೆಳ್ತಂಗಡಿ, ಯು.ಹೆಚ್. ಆಟೋ ಚಾಲಕ ಮಾಲಕರ ಸಂಘದ ವಲಯಾಧ್ಯಕ್ಷ ಉಮೇಶ್ ಅತ್ತಾಜೆ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ. ಹನೀಫ್ ಉಪಸ್ಥಿತರಿದ್ದರು.

Related posts

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಸಿಸಿ ಕೆಮರಾ ಅಳವಡಿಸುವಿಕೆ ಮತ್ತು ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

Suddi Udaya

ಕೊಯ್ಯೂರು: ಹರ್ಪಳದಲ್ಲಿ ಅಡ್ಡಲಾಗಿ ಬಿದ್ದ ಮರಗಳ ತೆರವು ಕಾರ್ಯ

Suddi Udaya

ರಾಜ್ಯ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ : ಇದು ಬಡಜನರ ಮೇಲಿನ ಮರಣ ಶಾಸನ: ಶೇಖರ ಎಲ್

Suddi Udaya

ಭಾರೀ ಗಾಳಿ ಮಳೆ: ನೆರಿಯ ನೆಕ್ಕರೆಯಲ್ಲಿ ಮನೆಗೆ ಮರ ಬಿದ್ದು ಹಾನಿ

Suddi Udaya

ಬಳ್ಳಮಂಜ ಕ್ಷೇತ್ರದ ಶ್ರೀ ಈಶ್ವರ ದೇವರ ಗರ್ಭಗುಡಿಯ ಪಾದುಕನ್ಯಾಸ

Suddi Udaya

ಲಾಯಿಲದಲ್ಲಿ ಎಸ್.ಎಂ.ಇ.ಗ್ರೂಪ್ಸ್ ನ ಸಹ ಸಂಸ್ಥೆ “ಯುನಿಕ್ ಎಂಟರ್‌ಪ್ರೈಸಸ್” ಶುಭಾರಂಭ

Suddi Udaya
error: Content is protected !!