31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕರ್ನೋಡಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಣೆ

ಲಾಯಿಲ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕರ್ನೋಡಿ 80 ನೇ ಸ್ವಾತಂತ್ರೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮಕ್ಕಳು ಮತ್ತು ಪೋಷಕರು ಮೆರವಣಿಗೆಯ ಮೂಲಕ ಲಾಯಿಲ ಭಗತ್ ಸಿಂಗ್ ವೃತ್ತಕ್ಕೆ ತೆರಳಿ ಶಾಲೆಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಧ್ವಜಾರೋಹಣವನ್ನು ಭಾರತೀಯ ಸೇನೆಯಲ್ಲಿ 22 ವರುಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಸೈನಿಕ ಅಶೋಕ್ ಕುಮಾರ್ ವಿವೇಕಾನಂದ ನಗರ ಲಾಯಿಲ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷೆ ಶ್ರೀಮತಿ ಸೌಮ್ಯ ವಹಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕರಾದ ಅಶೋಕ್ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಆರ್, ನಿವೃತ ಶಿಕ್ಷಕಿ ಶ್ರೀಮತಿ ಸೆಲಿನ್ ಮಸ್ಕರೇನಸ್, ಶಾಲೆಯಲ್ಲಿ 20 ವರುಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀಮತಿ ಗಂಗಾರಾಣಿ ನಾ ಜೋಷಿ, ಶಾಲಾ ಮುಖ್ಯೋಪಾಧ್ಯಾಯರಾದ ಜಗನ್ನಾಥ. ಎಂ ಭಾಗವಹಿಸಿದರು.

ಸ್ವಾತಂತ್ರೋತ್ಸವದ ಪ್ರಯುಕ್ತ L.K.G – U.K.G ಮಕ್ಕಳ ಸಹಿತ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಜಗನ್ನಾಥ್. ಎಂ ಇವರ ವತಿಯಿಂದ ಶಾಲಾ ಮಕ್ಕಳಿಗೆ 45,000 ಸಾವಿರ ಮೌಲ್ಯದ ಸಮವಸ್ತ್ರವನ್ನು ಶಾಲಾ ಮಕ್ಕಳಿಗೆ ಅತಿಥಿಗಳ ಸಮುಖದಲ್ಲಿ ನೀಡಲಾಯಿತು.

ಶಾಲಾ ಹಳೆ ವಿದ್ಯಾರ್ಥಿ ಸಂಘ ಮತ್ತು ನಿವೃತ್ತ ಶಿಕ್ಷಕಿ ಶ್ರೀಮತಿ ಸೆಲಿನ್ ಮಸ್ಕರೇನಸ್ ಬಹುಮಾನದ ಪ್ರಾಯೋಜಕತ್ವ ವಹಿಸಿದರು. ಮುಖ್ಯ ಶಿಕ್ಷಕರಾದ ಜಗನ್ನಾಥ. ಎಂ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಉಷಾ ಕಾರ್ಯಕ್ರಮವನ್ನು ನಿರೂಪಿಸಿದರು ,ಸಹ ಶಿಕ್ಷಕ ಕೃಷ್ಣ ಕುಮಾರ್ ಧನ್ಯವಾದಗೈದರು. ಅಥಿತಿ ಶಿಕ್ಷಕಿಯರಾದ, ಶ್ರೀಮತಿ ಸುಪ್ರಿಯಾ , ಶ್ರೀಮತಿ ಚಂದ್ರಾವತಿ.ಕೆ, ಶ್ರೀಮತಿ ಸುಮಿತ್ರಾ , ಶ್ರೀಮತಿ ಕೋಮಲ ಸಹಾಯಕಿ ಶ್ರೀಮತಿ ಸುಮಲತಾ ಇವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪೋಷಕರು, ಮತ್ತು ವಿದ್ಯಾಭಿಮಾನಿಗಳು ಭಾಗವಹಿಸಿದರು.

Related posts

ಕನ್ಯಾಡಿ ಸೇವಾನಿಕೇತನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಮಾ.8, ಗುರುವಾಯನಕೆರೆ ಸನ್ಯಾಸಿ ಗುಳಿಗ ದೈವದ ಸನ್ನಿಧಿಯಲ್ಲಿ ದೈವರಾಜ ಗುಳಿಗ ನೇಮೋತ್ಸವ

Suddi Udaya

ರಾಜ್ಯಮಟ್ಟದ ಸ್ಕ್ವೇಯ್ ಮಾರ್ಸಲ್ ಆರ್ಟ್ಸ್ ಸ್ಪರ್ಧೆ: ಶಹೀರ್ ಅನಸ್ ರವರಿಗೆ ಚಿನ್ನದ ಪದಕ

Suddi Udaya

ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆ: ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ರಾಜ್ಯ ಪಠ್ಯಕ್ರಮ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸಾಧನೆ

Suddi Udaya

ಬೆಳ್ತಂಗಡಿ: ಪಂಚ ಗ್ಯಾರಂಟಿ ತಾಲೂಕು ಅನುಷ್ಠಾನ ಸಮಿತಿಯ ಮಾಸಿಕ ಸಭೆ

Suddi Udaya

ಉಜಿರೆ: ಕುಂಟಿನಿ ಮದ್ರಸದಲ್ಲಿ ಸ್ಥಾಪಕ ದಿನಾಚರಣೆ

Suddi Udaya
error: Content is protected !!