31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ಲವರ್ ಡೆಕೋರೆಟರ್ಸ್ ಮಾಲಕರ ಸಂಘ ಬೆಳ್ತಂಗಡಿ ವಲಯದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ಪ್ಲವರ್ ಡೆಕೋರೆಟರ್ಸ್ ಮಾಲಕರ ಸಂಘದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಬೆಳ್ತಂಗಡಿಯ ಸಿವಿಸಿ ಹಾಲ್ ನಲ್ಲಿ ಪ್ರಥಮ ವರ್ಷ ಆಚರಿಸಲಾಯಿತು. ದ್ವಜಾರೋಹಣವನ್ನು ನಿವೃತ್ತ ಯೋಧ ದಯಾನಂದ ಬೆಳ್ತಂಗಡಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಿವಿಸಿ ಹಾಲ್ ಮಾಲಕ ಜೇಮ್ಸ್ ಡಿಸೋಜಾ, ಜಗತ್ ಡಿಸೋಜಾ, ಎಲಿಯಂ ಡಿಕುನ್ಹ ಪಾಂಡವರಲ್ಲು, ಬೆಳ್ತಂಗಡಿ ವಲಯ ಅಧ್ಯಕ್ಷ ಸೀತಾರಾಮ್ ಆರ್, ಉಪಾಧ್ಯಕ್ಷ ಸುರೇಂದ್ರ ಕುಡ್ವ ಉಜಿರೆ, ಕಾರ್ಯದರ್ಶಿ ವಿಕ್ರಮ್ ಧರ್ಮಸ್ಥಳ,ಸಂಘಟನಾ ಕಾರ್ಯದರ್ಶಿ ಶಶಿಕಾಂತ್ ಬೆಳ್ತಂಗಡಿ ಹಾಗೂ ವಲಯದ ಸದಸ್ಯರು ಉಪಸ್ಥಿತರಿದ್ದರು.

ಧ್ವಜಾರೋಹಣವನ್ನು ನೆರವೇರಿಸಿದ ನಿವೃತ್ತ ಯೋಧ ದಯಾನಂದ ಇವರನ್ನು ವಲಯದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಾರ್ಯಕ್ರಮದ ಬಗ್ಗೆ ವಿಶೇಷ ಪ್ರಶಾಂಸೆಯನ್ನು ಎಲ್ಲ ಸದಸ್ಯರಿಗೆ ತಿಳಿಸಿ ಅವರು ಜೀವನದಲ್ಲಿ ನಡೆದು ಬಂದ ದಾರಿಯನ್ನು ವಿವರಿಸಿ ಮುಂದೆ ಕೂಡ ಸಮಾಜ ಸೇವೆಯನ್ನು ಮಾಡುವ ಸಲಹೆಯನ್ನು ನೀಡಿದರು ಹಾಗೂ ನಿವೃತ್ತ ಸೈನಿಕರ ಸಂಘ ಸದಾ ನಮ್ಮ ಜೊತೆ ಇದೆ ಎಂದು ಭರವಸೆ ನೀಡಿದರು.

35 ವರ್ಷಗಳ ಡೆಕೋರೆಷನ್ ವೃತ್ತಿಯ ಅನುಭವವಿರುವ ಹಿರಿಯ ಸದಸ್ಯ ವಿಲಿಯಂ ಪಾಂಡವರಕಲ್ಲು ಇವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಸ್ಥಳದ ಮಾಲಕ ಜೇಮ್ಸ್ ಡಿಸೋಜಾ ಮಾತಾನಾಡಿ ದೇಶಕ್ಕೆ ಗೌರವ ಕೊಡುವಂತಹ ಕಾರ್ಯಕ್ರಮವನ್ನು ನಮ್ಮ ಸ್ಥಳದಲ್ಲಿ ಆಯೋಜಿಸಿದ್ದಕ್ಕಾಗಿ ಪ್ಲವರ್ ಡೆಕೋರೆಟರ್ಸ್ ಬೆಳ್ತಂಗಡಿ ವಲಯಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ಇನ್ನು ಮುಂದೆ ಧ್ವಜಸ್ಥಂಬವನ್ನು ನಮ್ಮ ವತಿಯಿಂದಲ್ಲೆ ಹಾಕಿ ಕೋಡುವ ಭರವಸೆಯನ್ನು ನೀಡಿ ಮುಂದೆಯೂ ಇಲ್ಲಿಯೇ ಧ್ವಜಾರೋಹಣ ಮಾಡಬೇಕಾಗಿ ಕೋರಿಕೊಂಡರು ಹಾಗೂ ಡೆಕೋರೆಷನ್ ವೃತ್ತಿ ಸುಲಭದಾಯಕ ವೃತ್ತಿ ಅಲ್ಲ, ಗ್ರಾಹಕರನ್ನು ಸಂತೃಪ್ತಿಗೊಳಿಸಲು ನೀವು ಹರಸಾಹಸ ಪಡಬೇಕು ಎಂದು ಶ್ಲಾಘಿಸಿದರು.

ಕಿರಣ್ ದೊಂಡೊಲೆ ನಿರೂಪಿಸಿ, ಸ್ವಾಗತಿಸಿದರು. ಸೀತಾರಾಮ್ ಆರ್ ವಂದಿಸಿದರು. ಸಂಘಟನ ಕಾರ್ಯದರ್ಶಿ ಶಶಿಕಾಂತ್, ಸಂಘದ ಸದಸ್ಯರು ಸಹಕರಿಸಿದರು.

Related posts

ಪದ್ಮಂಜ ಸಹಕಾರಿ ಸಂಘದ ರೈತ ಸಭಾಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

Suddi Udaya

ಉಜಿರೆಯ ರಕ್ಷಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ಧಾರವಾಹಿಯ ನಟಿ ದೀಪಾ ಕಟ್ಟೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚರ್ಚಾ ಸ್ಪರ್ಧೆ

Suddi Udaya

ಮೂಡುಬಿದಿರೆ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ 35ನೇ ಶಾಖೆ ಉದ್ಘಾಟನೆ

Suddi Udaya

ವಿಶ್ವಕರ್ಮಾಭ್ಯುದಯ ಸಭಾ ಬೆಳ್ತಂಗಡಿ; ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ನಾವೂರು ಪುಣ್ಯಸ್ಟುಡಿಯೋ ಮಾಲಕ ಅಶೋಕ್ ಆಚಾರ್ಯರಿಗೆ ಗೌರರ್ವಾಪಣೆ

Suddi Udaya

ಪೆರ್ನೆಯ ಯುವಕ ಯತೀಶ್ ಗೌಡ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

Suddi Udaya
error: Content is protected !!