23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕನ್ಯಾಡಿ -2 ಸ.ಉ.ಹಿ.ಪ್ರಾ. ಶಾಲೆಯಲ್ಲಿ “ಆಟಿಡೊಂಜಿ ದಿನ”

ಧರ್ಮಸ್ಥಳ : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ -2 ಶಾಲೆಯಲ್ಲಿ “ಆಟಿಡೊಂಜಿ ದಿನ” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಕೆ .ನಂದ ಇವರು ತುಳು ಸಂಪ್ರದಾಯದಂತೆ ಕಲಸದಲ್ಲಿ ತೆಂಗಿನ ಮರದ ಹೊಂಬಾಳೆಯನ್ನು ಅರಳಿಸುವ ಮೂಲಕ ಚಾಲನೆ ನೀಡಿ, ಶುಭವನ್ನು ಹಾರೈಸಿದರು. ವೇದಿಕೆಯಲ್ಲಿದ ಗಣ್ಯರು ಚೆನ್ನೆ ಮಣೆಯ ಆಟದ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಶಾಲೆಯ ಎಸ್ ಡಿ ಎಂ ಸಿ ಯ ಸದಸ್ಯ ರೂಪೇಶ್.ಕೆ “ಆಟಿಡೊಂಜಿ ದಿನ”ದ ವಿಶೇಷತೆಯನ್ನು ಮಕ್ಕಳಿಗೆ ತಿಳಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮನೋಹರ್ ರಾವ್ ಎಸ್. ಡಿ .ಎಂ. ಸಿ . ಯ, ಉಪಾಧ್ಯಕ್ಷೆ ಶ್ರೀಮತಿ ಹೇಮಲತಾ ಮತ್ತು ಸರ್ವ ಸದಸ್ಯರು, ಶಾಲಾ ಶಿಕ್ಷಕ ವೃಂದದವರು, ಅಕ್ಷರದಾಸೋಹ ಸಿಬ್ಬಂದಿ ಪೋಷಕ ವೃಂದ, ಶಾಲೆಯ ಮಕ್ಕಳು ಉಪಸ್ಥಿತರಿದ್ದರು. ತುಳು ಹಾಡುಗಳಿಗೆ ಮಕ್ಕಳು ನೃತ್ಯವನ್ನು ಮಾಡಿ ಮನೋರಂಜಿಸಿದರು. ಪೋಷಕರ ಸಹಕಾರದಿಂದ 38 ಬಗೆಯ ಆಟಿ ತಿಂಗಳಲ್ಲಿ ಮಾಡುವ ವಿಶೇಷ ಖಾದ್ಯಗಳನ್ನು, ಹಳೆಯ ಕಾಲದ ವಸ್ತುಗಳು ಜೊತೆಗೆ ಗಿಡಮೂಲಿಕೆಗಳ ಪ್ರದರ್ಶನವು ಈ ಕಾರ್ಯ ಕ್ರಮದ ವಿಶೇಷ ಆಕರ್ಷಣೆಯಾಗಿತ್ತು.ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಸ್ವಾಗತಿಸಿ, ಅಥಿತಿ ಶಿಕ್ಷಕಿ ಶ್ರೀಮತಿ ಭವ್ಯ ವಂದಿಸಿ, ಸಹ ಶಿಕ್ಷಕಿ ಶ್ರೀಮತಿ ಹೇಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಉಪ್ಪಿನಂಗಡಿ-ಕದಿಕಾರು ಶ್ರೀ ಚಂದ್ರನಾಥ ಸ್ವಾಮಿ ಬಸದಿ ಪಂಚಕಲ್ಯಾಣ ಮಹೋತ್ಸವ

Suddi Udaya

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ – ರಾಜ್ಯ ಸರ್ಕಾರ ಜನರ ಪರವಾಗಿ ದೃಢ ನಿಲುವು ತಾಳಬೇಕು: ಶಾಸಕ ಹರೀಶ್ ಪೂಂಜ

Suddi Udaya

ಧರ್ಮಸ್ಥಳ : ನಡುಗುಡ್ಡೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಧರ್ಮಸ್ಥಳದ ಉರಗ ರಕ್ಷಕ ಸ್ನೇಕ್ ಪ್ರಕಾಶ್

Suddi Udaya

ಬೆಳ್ತಂಗಡಿ ಕೋಟಿ- ಚೆನ್ನಯ ಕ್ರೀಡಾಕೂಟ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುಕ್ಕೇಡಿ ನಿಟ್ಟಡೆ ಸಮಗ್ರ ಚಾಂಪಿಯನ್

Suddi Udaya

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ: ಧ್ವಜಾರೋಹಣ, ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya

ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

Suddi Udaya
error: Content is protected !!