31.2 C
ಪುತ್ತೂರು, ಬೆಳ್ತಂಗಡಿ
September 30, 2026
ತಾಲೂಕು ಸುದ್ದಿವರದಿ

ರೋಟರಿ ಸಮುದಾಯ ದಳಗಳ ಪದಗ್ರಹಣ ಸಮಾರಂಭ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ತನ್ನ ಅಂಗ ಸಂಸ್ಥೆಗಳಾದ ನಾಲ್ಕು ರೋಟರಿ ಸಮುದಾಯ ದಳಗಳ ಪದಗ್ರಹಣ ಕಾರ್ಯಕ್ರಮವನ್ನು ನಡೆಸಿತು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ರೊ.ಶ್ರೀಧರ ಕೆ.ವಿ, ಅಸಿಸ್ಟೆಂಟ್ ಗವರ್ನರ್ ರೊ ಡಾ.ಶಶಿಧರ ಡೋಂಗ್ರೆ, ಆರ್.ಸಿ.ಸಿ ಯ ವಲಯ ಸಂಯೋಜಕರಾದ ರೊ ಸಂದೇಶ್ ರಾವ್, ಕಾರ್ಯದರ್ಶಿ ರೊ.ಡಾ.ರಾಘವೇಂದ್ರ ಪಿದಮಲೆ, ಆರ್.ಸಿ.ಸಿ.ಚೇರ್‌ಮೆನ್ ರೊ ವೆಂಕಟೇಶ್ವರ ಭಟ್, ಆರ್.ಸಿ.ಸಿ ಮುಂಡಾಜೆಯ ಅಧ್ಯಕ್ಷರಾದ ಸೆಬೇಸ್ಟಿನ್, ಕಾರ್ಯದರ್ಶಿ ರಾಕೇಶ್ ಕೆ.ಎಸ್, ಆರ್.ಸಿ.ಸಿ ಕಲ್ಮಂಜದ ಅಧ್ಯಕ್ಷರಾದ ನಾಗೇಶ್ ,ಕಾರ್ಯದರ್ಶಿ ದಿನೇಶ್, ಆರ್.ಸಿ.ಸಿ.ಚಾರ್ಮಾಡಿ ಕಕ್ಕಿಂಜೆಯ ಅಧ್ಯಕ್ಷರಾದ ಶ್ರೀಮತಿ ಶಾರದಾ, ಕಾರ್ಯದರ್ಶಿ ಗೋಪಾಲಕೃಷ್ಣ,ಆರ್.ಸಿ.ಸಿ ನೆರಿಯಾ ದ ಅಧ್ಯಕ್ಷರಾದ ರಾಜನ್, ಕಾರ್ಯದರ್ಶಿ ಶರೀಫ್ ಅವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವು ಕುಮಾರಿ ಸಾಕ್ಷಿ ಹೆಬ್ಬಾರ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಓಬಯ್ಯ ಗೌಡ ಅವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಅಯಾ ಆರ್.ಸಿ.ಸಿ.ಗಳ ಅಧ್ಯಕ್ಷರುಗಳು ಕಳೆದ ಸಾಲಿನ ವರದಿ ವಾಚಿಸಿದರು ನಂತರ ಪದಗ್ರಹಣ ಕಾರ್ಯಕ್ರಮ ನಡೆಯಿತು ರೊ.ಕಿರಣ್ ಹೆಬ್ಬಾರ್ ಅವರು ಹೊಸ ಪದಾಧಿಕಾರಿಗಳ ಹೆಸರು ವಾಚಿಸಿದರು.

ಆರ್.ಸಿ .ಸಿ ಯ ಹೊಸ ಅಧ್ಯಕ್ಷರಾಗಿ ಮುಂಡಾಜೆಯ ರಂಗನಾಥ ಹೆಬ್ಬಾರ್, ಕಾರ್ಯದರ್ಶಿಯಾಗಿ ಶ್ರೀಮತಿ ಪುಷ್ಪಾ ಬಿ.ಎಂ, , ಆರ್.ಸಿ.ಸಿ.ಕಲ್ಮಂಜದ ಹೊಸ ಅಧ್ಯಕ್ಷರಾಗಿ ಶ್ರೀನಿವಾಸ ರಾವ್ ಕಾರ್ಯದರ್ಶಿಯಾಗಿ ಶ್ರೀಮತಿ ವಸಂತಿ,ಆರ್.ಸಿ.ಸಿ ಚಾರ್ಮಾಡಿ ಕಕ್ಕಿಂಜೆಯ ಹೊಸ ಅಧ್ಯಕ್ಷರಾಗಿ ಗೋಪಾಲಕೃಷ್ಣ ಗೌಡ ಹಾಗೂ ಕಾರ್ಯದರ್ಶಿ ಯಾಗಿ ಪ್ರಿನ್ಸ್ ಥಾಮಸ್, ಆರ್.ಸಿ.ಸಿ ನೆರಿಯಾ ದ ಹೊಸ ಅಧ್ಯಕ್ಷರಾಗಿ ಆನಂದ ಹಾಗೂ ಕಾರ್ಯದರ್ಶಿಯಾಗಿ ಬಾಲಕೃಷ್ಣ ಗೌಡ ಅಧಿಕಾರ ಸ್ವೀಕರಿಸಿದರು.ನಂತರ ಪದಗ್ರಹಣ ಅಧಿಕಾರಿ ಆರ್.ಸಿ.ಸಿ.ಯ ವಲಯ ಸಚಾಲಕರಾದ ರೊ ಸಂದೇಶ ರಾವ್ ಅವರು ಹೊಸ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಅಧ್ಯಕ್ಷರಾದ ರೊ ಶ್ರೀಧರ ಕೆ.ವಿ ಅವರು ತನ್ನ ಅಧ್ಯಕ್ಷೀಯ ಮಾತುಗಳನ್ನು ಆಡಿದರು ಕಾರ್ಯದರ್ಶಿ ರೊ.ಡಾ.ರಾಘವೇಂದ್ರ ಪಿದಮಲೆ ಅವರು ರೋಟರಿ ಕ್ಲಬ್ ಬೆಳ್ರಂಗಡಿ ಸದಾ ಆರ್.ಸಿ.ಸಿ ಯ ಕಾರ್ಯಗಳಿಗೆ ಬೆಂಬಲ ನೀಡುತ್ತದೆ ಎಂದರು .ಬೆಳ್ತಂಗಡಿ ರೋಟರಿಯ ಆರ್.ಸಿ.ಸಿ.ಚೇರ್ ಮೇನ್ ರೊ ವೆಂಕಟೇಶ್ವರ ಭಟ್ ಅವರು ಇಂದಿನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಕಾರ್ಯಕ್ರಮದಲ್ಲಿ ರೊ.ಅಡೂರು ವೆಂಕಟ್ರಾಯ, ರೊ ಮೆ.ಜ.(ರಿ) ಎಂ.ವಿ.ಭಟ್, ರೊ ಅನಂತ ಭಟ್ ಮಚ್ಚಿಮಲೆ, ರೊ ಪ್ರಕಾಶ ಫ್ರಭು ರೊ ಪ್ರಕಾಶ ನಾರಾಯಣ್ , ಆನ್ ಸಂಧ್ಯಾ ಹೆಬ್ಬಾರ್ , ಆನ್ ಅಖಿಲಾ ಪ್ರಕಾಶ್ ಮತ್ತಿತ್ತರು ಉಪಸ್ಥಿತರಿದ್ದರು. ಕು.ಸಹನಾ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸದರೆ. ಕೊನೆಯಲ್ಲಿ ಶ್ರೀಮತಿ ರಂಜನಿ ವಂದಿಸಿದರು

Related posts

ಉದ್ಯಮಿ ಎ.ಸಿ.ಕುರಿಯನ್ ರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ: ಸೇಕ್ರೆಡ್‌ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಮುಂಡಾಜೆ: ಕಂದಕಕ್ಕೆ ಉರುಳಿದ ಕಾರು

Suddi Udaya

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ

Suddi Udaya

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತೋಟತ್ತಾಡಿಯ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಫ್ : 75 ಕೆ.ಜಿ ವಿಭಾಗದಲ್ಲಿ ಹೇಮಚಂದ್ರರಿಗೆ ಕಂಚಿನ‌ ಪದಕ

Suddi Udaya
error: Content is protected !!