31.2 C
ಪುತ್ತೂರು, ಬೆಳ್ತಂಗಡಿ
September 30, 2026
ವರದಿ

ವಿಕಲಚೇತನ ಯುವಕನ ಸ್ವಾವಲಂಬನೆಯ ಹೆಜ್ಜೆ: ರಾಕೇಶ್ ಹೆಗ್ಡೆ ಅವರಿಂದ ಚಿರು ಟೀಮ್’ ಜರ್ಸಿ ಅನಾವರಣ

ಗೇರುಕಟ್ಟೆ: ಆತ್ಮವಿಶ್ವಾಸ ಮತ್ತು ಸಾಧಿಸುವ ಛಲಕ್ಕೆ ಯಾವುದೇ ಮಿತಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿರುವ ಗೇರುಕಟ್ಟೆಯ ಯುವಕ ಚಿರಂಜೀವಿ ಶೆಟ್ಟಿ (ಚಿರು) ಅವರು ‘ಚಿರು ಟೀಮ್’ ಎಂಬ ಹೆಸರಿನಲ್ಲಿ ವಿಡಿಯೋಗ್ರಫಿ ಹಾಗೂ ವಿಡಿಯೋ ಎಡಿಟಿಂಗ್ ಉದ್ಯಮವನ್ನು ಆರಂಭಿಸಿದ್ದಾರೆ. ವಿಕಲಚೇತನರಾಗಿದ್ದರೂ ತಮ್ಮ ದೈಹಿಕ ಸವಾಲುಗಳನ್ನು ಮೆಟ್ಟಿನಿಂತು, ತಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ನಂಬಿ ಸ್ವಂತ ಉದ್ಯಮ ಆರಂಭಿಸಿರುವ ಚಿರಂಜೀವಿ ಶೆಟ್ಟಿ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾಗಿದೆ. ಅವರ ಈ ಸಾಧನೆ ಇತರ ಯುವಕರಿಗೂ ಪ್ರೇರಣೆಯಾಗುವಂತದ್ದು.ಇಂದು ಸತ್ಯ ದೇವತೆ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಚಿರು ಟೀಮ್’ ತಂಡದ ಜರ್ಸಿ ಅನಾವರಣವನ್ನು ಮಾಡಿ, ಈ ಸಂದರ್ಭದಲ್ಲಿ ಚಿರಂಜೀವಿ ಶೆಟ್ಟಿ ಅವರ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿ, ಅವರ ಉದ್ಯಮ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಲಾಯಿತು.

ಅಂಗವಿಕಲರಾಗಿರುವ ಅವರಿಗೆ ವಿಡಿಯೋಗ್ರಫಿ ಮೂಲಕ ಜೀವನ್ ಶೈಲೇಶ್ ಅಳದಂಗಡಿ, ಸೃಜನ್ ವೇಣೂರು , ಇವರು ಸಹಾಯ ಮಾಡುತ್ತಿದ್ದಾರೆ ಇಂದಿನ ಡಿಜಿಟಲ್ ಯುಗದಲ್ಲಿ ವಿಡಿಯೋಗ್ರಫಿ ಮತ್ತು ಎಡಿಟಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಚಿರು ಮುಂದಾಗಿದ್ದಾರೆ. ದೈಹಿಕ ಸವಾಲುಗಳನ್ನು ಮೀರಿ ಸ್ವಂತ ಉದ್ಯಮ ಆರಂಭಿಸಿರುವುದು ಅವರ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಸಾಧಿಸುವ ಛಲಕ್ಕೆ ಸಾಕ್ಷಿಯಾಗಿದೆ.

“ಮನಸ್ಸಿದ್ದರೆ ಮಾರ್ಗ” ಎಂಬ ಮಾತಿನಂತೆ, ಯಾವುದೇ ಸವಾಲು ಎದುರಾದರೂ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದನ್ನು ಚಿರು ಅವರ ಪ್ರಯತ್ನ ತೋರಿಸಿಕೊಡುತ್ತದೆ.‘ಚಿರು ಟೀಮ್’ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಗಳಿಸಿ, ಉತ್ತಮ ಗುಣಮಟ್ಟದ ವಿಡಿಯೋಗ್ರಫಿ ಮತ್ತು ಎಡಿಟಿಂಗ್ ಸೇವೆಯ ಮೂಲಕ ಜನರ ಮೆಚ್ಚುಗೆ ಗಳಿಸಲಿ. ಚಿರಂಜೀವಿ ಶೆಟ್ಟಿ ಅವರ ಕನಸುಗಳು ನನಸಾಗಲಿ ಹಾಗೂ ಅವರ ಈ ಪ್ರಯತ್ನ ಇನ್ನಷ್ಟು ಯುವಕರಿಗೆ ಪ್ರೇರಣೆಯಾಗಲಿ ಎಂದು ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಕೇಶ್ ಹೆಗಡೆ ಅವರು ಹಾರೈಸಿದ್ದಾರೆ.

Related posts

ಮನೆಯಿಂದ ತೆರಳಿದ ವ್ಯಕ್ತಿ ವಾಪಸ್ಸು ಮನೆಗೆ ಬಾರದೆ ನಾಪತ್ತೆ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಗುರು ವಸಂತ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಸ್ಪರ್ಧೆ

Suddi Udaya

ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವುದು ಖಂಡನೀಯ -ಕೆ.ಎಂ. ನಾಗೇಶ್ ಕುಮಾರ್ ಗೌಡ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬದ ಸಲುವಾಗಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ತಂಡದ ಸಹಕಾರದಲ್ಲಿ ಸುಲ್ಕೇರಿ ಶ್ರೀರಾಮ ಶಾಲೆಗೆ ಧನಸಹಾಯ ಹಸ್ತಾoತರ

Suddi Udaya

ಬಳಂಜದಲ್ಲಿ ಎಸ್ ಎನ್ ಮೂಡಬಿದ್ರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

Suddi Udaya

ವೇಣೂರು ನಿಟ್ಟಡೆಯ ಬಾಲಪ್ರತಿಭೆ ಯಶ್ವಿತ್ ಎಚ್.ಗೆ ಲಿಟಲ್ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ

Suddi Udaya
error: Content is protected !!