32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾವೂರು ಬಡೆಕ್ಕಾವುಗುತ್ತು ಚಾರಿಟೇಬಲ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ವಿತರಣೆ : ದೈವಗಳಿಗೆ ದೊಂದಿ ಕೋಲ

ನಾವೂರು: ನಾವೂರು ಗ್ರಾಮದ ದೈವ ಕ್ಷೇತ್ರ ಬಡೆಕ್ಕಾವುನಲ್ಲಿ ಬಡೆಕ್ಕಾವುಗುತ್ತು ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಾವೂರು ಗ್ರಾಮದ ಹತ್ತನೆ ತರಗತಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಗ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಪ್ಪೆ ಕಲ್ಲುರ್ಟಿ ಮತ್ತು ಕೊರಗಜ್ಜ ದೈವದ ದೊಂದಿ ಕೋಲ ಆ.೧೭ರಂದು ವಿಜೃಂಭಣೆಯಿAದ ಜರುಗಿತು.


ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಬೆಳ್ತಂಗಡಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಗುಪ್ತಚರ ಇ¯ Áಖೆ ನವದೆಹಲಿಯ ಡಿಸಿಪಿ ಡಾ| ಶಂಕರ್ ಭಾಗವಹಿಸಿದರು. ಅಧ್ಯಕ್ಷತೆಯನ್ನು ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್ ವಹಿಸಿದ್ದರು. ರಕ್ಷಿತ್ ಅಜಿಲ ಅವರು ಮಾತನಾಡಿ, ಬಡೆಕ್ಕಾವುನಲ್ಲಿ ನಿರ್ಮಾಣವಾಗುತ್ತಿರುವ ನೂತನ ದೇವಸ್ಥಾನ, ಮುಂದೆ ಕ್ಷೇತ್ರದಲ್ಲಿ ಯಾತ್ರಿನಿವಾಸ, ಅನ್ನಛತ್ರ ನಿರ್ಮಾಣವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ, ವಿದ್ಯಾರ್ಥಿ ವೇತನ ವಿತರಿಸಲಾಯಿತು.


ವೇದಿಕೆಯಲ್ಲಿ ಬಡೆಕ್ಕಾವುಗುತ್ತಿನ ಹಿರಿಯರಾದ ರವಿರಾಜ್ ಜೈನ್, ಗಣ್ಯರಾದ ಅಚ್ಚುತ ನಾಯಕ್, ಜಿನ್ನಪ್ಪ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆ ಬಳಿಕ ರತ್ನಾಕರ ಬಿ. ನಾವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಬಡೆಕ್ಕಾವುಗುತ್ತು ಗುತ್ತಿನ ಇತಿಹಾಸದ ಬಗ್ಗೆ ಸಮಗ್ರ ಮಾಹಿತಿ ನೀಡಿ ಸ್ವಾಗತಿಸಿದರು. ಅರುಣ್‌ಕುಮಾರ್ ನಾವೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ದೊಂದಿಕೋಲ: ಬಳಿಕ ಅಪ್ಪೆ ಕಲ್ಲುರ್ಟಿ ಹಾಗೂ ಕೊರಗಜ್ಜ ದೈವಕ್ಕೆ ದೊಂದಿ ಕೋಲ ಸೇವೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಊರ ಹಾಗೂ ಪರವೂರಿನ ಭಕ್ತರು ಭಾಗವಹಿಸಿ ಧನ್ಯತೆಯನ್ನು ಪಡೆದರು. ಬಡೆಕ್ಕಾವು ಗುತ್ತುವಿನ ಹಿರಿಯರು, ಊರಿನ ಮತ್ತು ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಉಪಸ್ಥಿತರಿದ್ದರು.

Related posts

ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಜೇಸಿಂತಾ ಮೋನಿಸ್ ನಿಧನ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುರಕ್ಷಿತ ಹಾಗೂ ಅಸುರಕ್ಷಿತ ಸ್ಪರ್ಶದ ಕುರಿತು ಮಾಹಿತಿ

Suddi Udaya

ಪೆರಿಂಜೆ: ಗೀತಾ ನಿಧನ

Suddi Udaya

ಉರುವಾಲು ಕಾರಿಂಜ ಶ್ರೀ ವನಶಾಸ್ತಾರ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ನೂತನ ಬಾವಿ ನಿರ್ಮಾಣಕ್ಕೆ ಮುಹೂರ್ತ

Suddi Udaya

ಎಸ್ಸೆಸ್ಸೆಲ್ಸಿ ಫಲಿತಾಂಶ: ಮರೋಡಿಯ ಝೊಹಾ ಫಾತಿಮಾಗೆ 597 ಅಂಕ

Suddi Udaya

ಆ.23: ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!