32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ನಾಲ್ಕು ರೋಟರಿ ಸಮುದಾಯ ದಳಗಳ ಪದಗ್ರಹಣ

ಬೆಳ್ತಂಗಡಿ : ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗ ಸಂಸ್ಥೆಗಳಾದ ನಾಲ್ಕು ರೋಟರಿ ಸಮುದಾಯ ದಳಗಳ ಪದಗ್ರಹಣ ಕಾರ್ಯಕ್ರಮ‌ ನಡೆಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರೊ.ಶ್ರೀಧರ ಕೆ.ವಿ, ಅಸಿಸ್ಟೆಂಟ್ ಗವರ್ನರ್ ರೊ ಡಾ.ಶಶಿಧರ ಡೋಂಗ್ರೆ, ಆರ್.ಸಿ.ಸಿ ಯ ವಲಯ ಸಂಯೋಜಕರಾದ ರೊ ಸಂದೇಶ್ ರಾವ್, ಕಾರ್ಯದರ್ಶಿ ರೊ.ಡಾ.ರಾಘವೇಂದ್ರ ಪಿದಮಲೆ, ಆರ್.ಸಿ.ಸಿ.ಚೇರ್‌ಮೆನ್ ರೊ ವೆಂಕಟೇಶ್ವರ ಭಟ್, ಆರ್.ಸಿ.ಸಿ ಮುಂಡಾಜೆಯ ಅಧ್ಯಕ್ಷರಾದ ಸೆಬೇಸ್ಟಿನ್, ಕಾರ್ಯದರ್ಶಿ ರಾಕೇಶ್ ಕೆ.ಎಸ್, ಆರ್.ಸಿ.ಸಿ ಕಲ್ಮಂಜದ ಅಧ್ಯಕ್ಷರಾದ ನಾಗೇಶ್ ,ಕಾರ್ಯದರ್ಶಿ ದಿನೇಶ್, ಆರ್.ಸಿ.ಸಿ.ಚಾರ್ಮಾಡಿ ಕಕ್ಕಿಂಜೆಯ ಅಧ್ಯಕ್ಷರಾದ ಶ್ರೀಮತಿ ಶಾರದಾ, ಕಾರ್ಯದರ್ಶಿ ಗೋಪಾಲಕೃಷ್ಣ,ಆರ್.ಸಿ.ಸಿ ನೆರಿಯಾ ದ ಅಧ್ಯಕ್ಷರಾದ ರಾಜನ್, ಕಾರ್ಯದರ್ಶಿ ಶರೀಫ್ ಉಪಸ್ಥಿತರಿದ್ದರು.

ಕಾರ್ಯಕ್ರಮವು ಕುಮಾರಿ ಸಾಕ್ಷಿ ಹೆಬ್ಬಾರ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಓಬಯ್ಯ ಗೌಡ ಸ್ವಾಗತಿಸಿದರು. ಅಯಾ ಆರ್.ಸಿ.ಸಿ.ಗಳ ಅಧ್ಯಕ್ಷರುಗಳು ಕಳೆದ ಸಾಲಿನ ವರದಿ ವಾಚಿಸಿದರು. ನಂತರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ರೊ.ಕಿರಣ್ ಹೆಬ್ಬಾರ್ ಅವರು ಹೊಸ ಪದಾಧಿಕಾರಿಗಳ ಹೆಸರು ವಾಚಿಸಿದರು. ಆರ್.ಸಿ .ಸಿ ಯ ಹೊಸ ಅಧ್ಯಕ್ಷರಾಗಿ ಮುಂಡಾಜೆಯ ರಂಗನಾಥ ಹೆಬ್ಬಾರ್, ಕಾರ್ಯದರ್ಶಿಯಾಗಿ ಶ್ರೀಮತಿ ಪುಷ್ಪಾ ಬಿ.ಎಂ, , ಆರ್.ಸಿ.ಸಿ.ಕಲ್ಮಂಜದ ಹೊಸ ಅಧ್ಯಕ್ಷರಾಗಿ ಶ್ರೀನಿವಾಸ ರಾವ್ ಕಾರ್ಯದರ್ಶಿಯಾಗಿ ಶ್ರೀಮತಿ ವಸಂತಿ,ಆರ್.ಸಿ.ಸಿ ಚಾರ್ಮಾಡಿ ಕಕ್ಕಿಂಜೆಯ ಹೊಸ ಅಧ್ಯಕ್ಷರಾಗಿ ಗೋಪಾಲಕೃಷ್ಣ ಗೌಡ ಹಾಗೂ ಕಾರ್ಯದರ್ಶಿ ಯಾಗಿ ಪ್ರಿನ್ಸ್ ಥಾಮಸ್, ಆರ್.ಸಿ.ಸಿ ನೆರಿಯಾ ದ ಹೊಸ ಅಧ್ಯಕ್ಷರಾಗಿ ಆನಂದ ಹಾಗೂ ಕಾರ್ಯದರ್ಶಿಯಾಗಿ ಬಾಲಕೃಷ್ಣ ಗೌಡ ಅಧಿಕಾರ ಸ್ವೀಕರಿಸಿದರು.

ನಂತರ ಪದಗ್ರಹಣ ಅಧಿಕಾರಿ ಆರ್.ಸಿ.ಸಿ.ಯ ವಲಯ ಸಚಾಲಕರಾದ ರೊ ಸಂದೇಶ ರಾವ್ ಅವರು ಹೊಸ ಪದಾಧಿಕಾರಿಗಳಿಗೆ ಶುಭ ಹಾರೈಸಿದರು ಅಧ್ಯಕ್ಷರಾದ ರೊ ಶ್ರೀಧರ ಕೆ.ವಿ ಅವರು ತನ್ನ ಅಧ್ಯಕ್ಷೀಯ ಮಾತುಗಳನ್ನು ಆಡಿದರು. ಕಾರ್ಯದರ್ಶಿ ರೊ.ಡಾ.ರಾಘವೇಂದ್ರ ಪಿದಮಲೆ ಅವರು ರೋಟರಿ ಕ್ಲಬ್ ಬೆಳ್ರಂಗಡಿ ಸದಾ ಆರ್.ಸಿ.ಸಿ ಯ ಕಾರ್ಯಗಳಿಗೆ ಬೆಂಬಲ ನೀಡುತ್ತದೆ ಎಂದರು .ಬೆಳ್ತಂಗಡಿ ರೋಟರಿಯ ಆರ್.ಸಿ.ಸಿ.ಚೇರ್ ಮೇನ್ ರೊ ವೆಂಕಟೇಶ್ವರ ಭಟ್ ಅವರು ಇಂದಿನ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರೊ.ಅಡೂರು ವೆಂಕಟ್ರಾಯ, ರೊ ಮೆ.ಜ.(ರಿ) ಎಂ.ವಿ.ಭಟ್, ರೊ ಅನಂತ ಭಟ್ ಮಚ್ಚಿಮಲೆ, ರೊ ಪ್ರಕಾಶ ಫ್ರಭು ರೊ. ಪ್ರಕಾಶ ನಾರಾಯಣ್ , ಆನ್ ಸಂಧ್ಯಾ ಹೆಬ್ಬಾರ್ , ಆನ್ ಅಖಿಲಾ ಪ್ರಕಾಶ್ ಮತ್ತಿತ್ತರು ಉಪಸ್ಥಿತರಿದ್ದರು. ಕು.ಸಹನಾ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿ ಶ್ರೀಮತಿ ರಂಜನಿ ವಂದಿಸಿದರು.

Related posts

ಹಿರಿಯ ಯಕ್ಷಗಾನ ಭಾಗವತ ಧರ್ಣಪ್ಪ ಆಚಾರ್ಯ ಅಳದಂಗಡಿ ನಿಧನ

Suddi Udaya

ಪೃಥ್ವಿ ಜುವೆಲ್ಸ್ ನಿಂದ ಜ್ಯುವೆಲ್ಲರಿ ಪ್ರದರ್ಶನಕ್ಕೆ ಮೂಡಬಿದ್ರೆಯಲ್ಲಿ ಚಾಲನೆ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ, ಯುವ ಬಂಟರ ಹಾಗೂ ಮಹಿಳಾ ವಿಭಾಗದ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ರಾಜ್ಯಮಟ್ಟದ ಸೋಲೋ‌ ಡ್ಯಾನ್ಸ್ ಸ್ಪರ್ಧೆ, ಬೆಳ್ತಂಗಡಿಯ ರಿತ್ವಿಕ್ ಕೆಪಿ ಪ್ರಥಮ

Suddi Udaya

ಶ್ರೀ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಹಾಲಿ ವ್ಯವಸ್ಥಪನಾ ಸಮಿತಿ ರದ್ದು ಹಿನ್ನಲೆ; ಹೊಸ ಹಣಕಾಸಿನ ವ್ಯವಹಾರ ನಡೆಸದಂತೆ ನ್ಯಾಯಾಲಯ ಆದೇಶ

Suddi Udaya

ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಖಂಡಿಸಿ ಪಡಂಗಡಿ ಗರ್ಡಾಡಿ ಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ

Suddi Udaya
error: Content is protected !!