31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಕ್ಕಡ ಸಂಗಮ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಮಾದರಿ ಒಕ್ಕೂಟದ ವಾರ್ಷಿಕ ಮಹಾಸಭೆ

ಕೊಕ್ಕಡ: ಸಂಗಮ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಮಾದರಿ ಒಕ್ಕೂಟ ಕೊಕ್ಕಡ ಇದರ ವಾರ್ಷಿಕ ಮಹಾಸಭೆಯನ್ನು ಕುಸುಮರವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಒಕ್ಕೂಟದ ಸದಸ್ಯೆ ಯೋಗೀಶ್ವರಿ ಪ್ರಾರ್ಥಿಸಿ, ಎಲ್.ಸಿ.ಆರ್.ಪಿ ಗಾಯತ್ರಿ ಸ್ವಾಗತಿಸಿ, ವಲಯ ಮೇಲ್ವಿಚಾರಕರಾದ ವೀಣಾಶ್ರೀ NRLM ಯೋಜನೆಯ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ನಂತರ ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


2025-26 ನೇ ಸಾಲಿನ ಒಕ್ಕೂಟದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಶ್ವಿನಿ ಓದಿ ಅದರ ಬಗ್ಗೆ ಚರ್ಚಿಸಿ ಸಭೆಯಿಂದ ಅನುಮೋದನೆ ಪಡೆಯಲಾಯಿತು. ಲೆಕ್ಕಪರಿಶೋಧನೆ ವರದಿಯನ್ನು ಎಂ.ಬಿ.ಕೆ ಯಶೋಧ ಮಂಡಿಸಿ ಸಭೆಯಿಂದ ಅನುಮೋದನೆಯನ್ನು ಪಡೆಯಲಾಯಿತು. ಮುಂದಿನ 2026-27 ನೇ ವರ್ಷದ ಕ್ರಿಯಾಯೋಜನೆಯ ಬಗ್ಗೆ ಮಹಾ ಸಭೆಯಲ್ಲಿ ಚರ್ಚಿಸಿ ಮಂಡನೆ ಮಾಡಲಾಯಿತು.
ಹರ್ -ಘರ್ – ತಿರಂಗಾ ಅಭಿಯಾನ 2026 ರ ಪರಿಣಾಮಕಾರಿ ಅನುಷ್ಠಾನ ಮಾಡುವ ಕುರಿತು ಒಕ್ಕೂಟದ ಮಹಾಸಭೆಗೆ ಬಂದಂತಹ ಸಂಘದ ಸದಸ್ಯರುಗಳಿಗೆ ವಿವಿಧ ಚಟುವಟಿಕೆಗಳಲ್ಲಿ ದೇಶಭಕ್ತಿ ಗೀತೆಯನ್ನು ಏರ್ಪಡಿಸಲಾಯಿತು ಇದರಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.


ನಂತರ ಸ್ತನ್ಯಪಾನ ಮತ್ತು ಮಾದಕ ವ್ಯಸನದ ಬಗ್ಗೆ ಸಂಕ್ತಿಪ್ತವಾಗಿ ಮಾಹಿತಿಯನ್ನು BRP- PRI ಶ್ರೀಕಲಾ ರವರು ನೀಡಿದರು.
ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕ ವೀಣಾಶ್ರೀ ನಡೆಸಿಕೊಟ್ಟರು.
ಆರ್ಥಿಕ ಸಾಕ್ಷರತೆ ಸಮಲೋಚಕಿ ಉಷಾ ಕಾಮತ್ ಬ್ಯಾಂಕಿನಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಂಕ್ತಿಪ್ತವಾಗಿ ಮಾಹಿತಿಯನ್ನು ನೀಡಿದರು.

ನಿರ್ಗಮಿತ ಒಕ್ಕೂಟದ ಅಧ್ಯಕ್ಷೆ ಕುಸುಮ ಮತ್ತು ಕಾರ್ಯದರ್ಶಿ ಅಶ್ವಿನಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ನಿರ್ಗಮಿತ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು..
ಒಕ್ಕೂಟ ದ ಸಭೆಯ ಅಧ್ಯಕ್ಷೆ ಕುಸುಮ ರವರು ಮಾತನಾಡಿ ಒಕ್ಕೂಟದ ಅಧ್ಯಕ್ಷರ ಮತ್ತು ಸದಸ್ಯರ ಜವಾಬ್ದಾರಿ ಮತ್ತು ಕರ್ತವ್ಯದ ಬಗ್ಗೆ, ಹಾಗೂ ನೂತನ ಪದಾಧಿಕಾರಿಗಳು ಒಕ್ಕೂಟವನ್ನೂ ಇನ್ನೂ ಒಳ್ಳೆಯ ರೀತಿಯಲ್ಲಿ ಮುಂದುವರಿಸುವಂತೆ, ತಿಳಿಸುತ್ತಾ ಸಂಘದ ಪ್ರತಿ ಸದಸ್ಯರ ಸಹಕಾರವನ್ನು ಬಯಸಿದರು.

ಕಾರ್ಯಕ್ರಮವನ್ನು ನಲ್- ಜಲ್ ಸಿಬ್ಬಂದಿಯಾದ ಶ್ರೀಮತಿ ಅಂಬಿಕಾ ನಿರೂಪಿಸಿದರು .ಸಭೆಯಲ್ಲಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ,ಹಾಗೂ ಸದಸ್ಯರು, SWM ಸಿಬ್ಬಂದಿಗಳು, ಪಂಚಾಯತ್ ನ ಸಿಬ್ಬಂದಿಗಳು ಭಾಗವಹಿಸಿದರು . LCRP ನಮಿತಾ ಧನ್ಯವಾದವಿತ್ತರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಘಟಕದ ಸದಸ್ಯರುಗಳಿಗೆ ತರಬೇತಿ ಕಾರ್ಯಾಗಾರ

Suddi Udaya

ಉಜಿರೆ: ಯುವಕ ನೇಣು ಬಿಗಿದು ಆತ್ಮಹತ್ಯೆ

Suddi Udaya

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಸುಲ್ಕೇರಿಗೆ ಭೇಟಿ

Suddi Udaya

ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ: ನಡ ಕಾಲೇಜಿನ ಹುಡುಗರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ : ಕಂದಾಯ ನಿರೀಕ್ಷಕರಾಗಿ ಮಲ್ಲೇಶ್ ಕರ್ತವ್ಯಕ್ಕೆ ಹಾಜರು

Suddi Udaya

ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಹೇಮಾವತಿ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya
error: Content is protected !!