31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಂದ್ಕೂರು 6ನೇ ವರ್ಷದ ಹುಲಿ ಕುಣಿತದ ಪೋಸ್ಟರ್‌ ಬಿಡುಗಡೆ

ಬೆಳ್ತಂಗಡಿ: ಲಾಯಿಲ ಚಂದ್ಕೂರು ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ಪ್ರತಿ ವರ್ಷ ವೈಭವದಿಂದ ಜರಗಲಿದೆ. ಈ ಬಾರಿ ಕೆದ್ದೇಲು ಹೇಮಂತ್‌ ಇವರ ನೇತೃತ್ವದಲ್ಲಿ ನಡೆಯುವ 6ನೇ ವರ್ಷದ ಹುಲಿಕುಣಿತ ಪ್ರದರ್ಶನದ ಪೋಸ್ಟರ್‌ನ್ನು ದೇವಸ್ಥಾನದಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರರಾದ ಧನಂಜಯ ಅಜ್ರಿ ನಡಗುತ್ತು ಇವರು ಅನಾವರಣಗೊಳಿಸಿ, ಹುಲಿಕುಣಿತವನ್ನು ಆಯೋಜಿಸುವ ಹೇಮಂತ್‌ ಕುಮಾರ್‌ ಹಾಗೂ ಶಿವದುರ್ಗಾ ಟೈಗರ್ಸ್‌ ತಂಡಕ್ಕೆ ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿದ ಹೇಮಂತ್‌ ಮಾತನಾಡಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಕಾರಣಿಕದಿಂದ ಈ ಕಲಾಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಕೆಲವರು ಹರಕೆಯ ರೂಪವಾಗಿ ಹುಲಿವೇಷ ಹಾಕುತ್ತಿದ್ದು, ದೇವಿಯನ್ನು ನಂಬಿದ ಎಲ್ಲರಿಗೂ ಒಳಿತಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯೂ ಉತ್ತಮ ಸಹಕಾರ ನೀಡುತ್ತಿದೆ ಎಂದರು.


ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್‌ ಶರ್ಮಾ, ಅಲೋಕ್‌ ಕುಮಾರ್‌ ಜೈನ್‌, ಚಂದ್ರಿಕಾ ಹೊಳ್ಳ ಚಂದ್ಕೂರು, ಹಾಗೂ ಶಿವದುರ್ಗಾ ಟೈಗರ್ಸ್‌ ತಂಡದ ಸದಸ್ಯರು, ಊರವರು ಉಪಸ್ಥಿತರಿದ್ದರು. ಅ.19ರಂದು ಸಂಜೆ ಊದು ಪೂಜೆ ಹಾಗೂ ಅ.20ರಂದು ಸಂಜೆ ಹುಲಿ ಕುಣಿತ ಕಲಾಸೇವೆಯು ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಲಿದೆ.

Related posts

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಜಿತೇಶ್‌ನ ಮನೆಗೆ ಭೇಟಿ ನೀಡಿದ ಕಿರಣ್‌ಚಂದ್ರ ಪುಷ್ಪಗಿರಿ

Suddi Udaya

ರಾಜ ಕೇಸರಿ ಸಂಘಟನೆಯ 541ನೇ ಸೇವಾ ಯೋಜನೆ: ಉಜಿರೆ ದೊಂಪದ ಪಲ್ಕೆ ಕೋಟಪ್ಪ ಪೂಜಾರಿಯವರಿಗೆ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಸಹಾಯ ಹಸ್ತ

Suddi Udaya

ಕಡಮ್ಮಾಜೆ ಫಾರ್ಮ್‌ನ ದೇವಿಪ್ರಸಾದ್‌ರಿಗೆ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ

Suddi Udaya

ಬಿ.ಸಿ.ರೋಡಿನಲ್ಲಿ ಯುವತಿಯ ಬರ್ಬರ ಹತ್ಯೆ ಖಂಡನೀಯ : ರಕ್ಷಿತ್ ಶಿವರಾಂ

Suddi Udaya

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ: ವಾಣಿ ಕಾಲೇಜಿನ ಮೋಹಿತ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!