28.4 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರತ್ನಮಾನಸದಲ್ಲಿ ಆಟಿದ ಅಟಿಲ್ ಕಾರ್ಯಕ್ರಮ

ಉಜಿರೆ: ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಆಟಿದ ಅಟಿಲ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಧಾರ್ಮಿಕ ಚಿಂತಾಕರಾಗಿರುವ ವೇದಮೂರ್ತಿ ಡಾ ಶ್ರೀ ಕೃಷ್ಣ ಉಪಾಧ್ಯಾಯ ಇವರು ಮಾತನಾಡಿ ಹಿಂದಿನ ಕಾಲದಲ್ಲಿ ಜನರು ಆಟಿ ತಿಂಗಳಿಗೆ ವಿಶೇಷ ಗಮನ ಇಟ್ಟು ವಿವಿಧ ಬಗೆಯ ಸೊಪ್ಪುಗಳ ತಿನಿಸುಗಳನ್ನು ಮಾಡಿ ಆಚರಣೆ ಮಾಡುತ್ತಿದ್ದರು. ಆಟಿ ತಿಂಗಳಲ್ಲಿ ಮಾಡುವಂತಹ ಆಹಾರಗಳು ಮನುಷ್ಯನಿಗೆ ಬಹಳ ಉಪಯುಕ್ತವಾಗಿದೆ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ ಎಂದು ತಿಳಿಸಿದರು .ಇಂತಹ ಸಂಸ್ಕೃತಿಯನ್ನು ಬೆಳೆಸಬೇಕು ಮತ್ತು ಮುಂದಿನ ಪೀಳಿಗೆಗೆ ಕಲಿಸಬೇಕು ಎಂದು ಹೇಳಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ರತ್ನಮಾನಸ ನಿಲಯದ ಪಾಲಕ ಯತೀಶ್ ಕೆ ಬಳಂಜ ಇವರು ಪೂರ್ವಜರು ತಿನ್ನುತ್ತಿದ್ದ ಆಹಾರ ಪದ್ದತಿಯನ್ನು ಇಂದಿನ ಮಕ್ಕಳು ಉಪಯೋಗಿಸಬೇಕು. ಅದರ ಬಗೆಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಾಗೂ ಪ್ರಕೃತಿ ಕೊಡುವಂತಹ ಆಹಾರಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು. ನಿಲಯದ ವಿದ್ಯಾರ್ಥಿ ಮಣಿ ಎಸ್ ಆರ್ ಸ್ವಾಗತಿಸಿದರು. ವಿದ್ಯಾರ್ಥಿ ಚಿರಂತ್ ಧನ್ಯವಾದ ಸಲ್ಲಿಸಿದರು. ಸುಮಾರು 21 ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಲಾಗಿರುತ್ತದೆ. ವಿದ್ಯಾರ್ಥಿಗಳು ,ಪೋಷಕರು ಮತ್ತು ಶಾಲಾ ಸಿಬ್ಬಂದಿಗಳು ಮತ್ತು ಊರ ಗಣ್ಯರು ಭಾಗವಹಿಸಿದ್ದರು ಹಾಗೂ ರತ್ನಮಾನಸ ನಿಲಯದ ಅಧ್ಯಾಪಕರಾದ ರವಿಚಂದ್ರ, ಉದಯರಾಜ್ ಹಾಗೂ ದೀಪಕ್ ಉಪಸ್ಥಿತರಿದ್ದರು .

Related posts

ಜೆಸಿಐ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ತರಬೇತಿ ಸಮ್ಮೇಳನ: ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಪ್ರಶಸ್ತಿ ಹಾಗೂ ಮನ್ನಣೆಗಳು

Suddi Udaya

ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರಿಂದ ಮತದಾನ

Suddi Udaya

ಉರುವಾಲು: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ – ಧಾರ್ಮಿಕ ಸಭೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಸರ್ವಜ್ಞ ಜಯಂತಿ ಆಚರಣೆ:

Suddi Udaya

ಕನ್ಯಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿ ರಚನೆ

Suddi Udaya

ಬೆಳ್ತಂಗಡಿ ತಾಲೂಕಿನಲ್ಲಿ ಶೇ. 62.6 ಮತದಾನ

Suddi Udaya
error: Content is protected !!