32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶುಭಾರಂಭ

ಆ.23: ಬೆಳ್ತಂಗಡಿಯಲ್ಲಿ ಎಸ್ & ವಿ ಫ್ಯಾಮಿಲಿ ಬ್ಯೂಟಿ ಸೆಲೂನ್ & ಅಕಾಡೆಮಿ ಶುಭಾರಂಭ, ಆಧುನಿಕ ಸೌಲಭ್ಯಗಳೊಂದಿಗೆ ವಿನೂತನ ಬ್ಯೂಟಿ ಸೇವೆ

ಬೆಳ್ತಂಗಡಿ: ಬೆಳ್ತಂಗಡಿ ಸುವರ್ಣ ಆರ್ಕೇಡ್‌ನಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಎಸ್ & ವಿ ಫ್ಯಾಮಿಲಿ ಬ್ಯೂಟಿ ಸೆಲೂನ್ & ಅಕಾಡೆಮಿಯ ಪ್ರಾರಂಭೋತ್ಸವವು ಆ.23ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಸಂಸ್ಥೆಯ ಮಾಲಕರಾದ ಶಾಂತ ಬಂಗೇರ ಮತ್ತು ಶಾಶ್ವಿತ್ ಬಂಗೇರ ತಿಳಿಸಿದ್ದಾರೆ.

ಬ್ಯೂಟಿ ಮತ್ತು ಸೌಂದರ್ಯ ಕ್ಷೇತ್ರದಲ್ಲಿ ಕಳೆದ ಎರಡುವರೆ ದಶಕಗಳಿಂದ ಅನುಭವ ಹೊಂದಿರುವ ಶಾಂತ ಬಂಗೇರ ಅವರ ಕನಸಿನ ಕೂಸಾಗಿರುವ ಈ ನೂತನ ಸಂಸ್ಥೆ ಬೆಳ್ತಂಗಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶದಿಂದ ಆರಂಭವಾಗುತ್ತಿದೆ.

ಹೈಜೆನಿಕ್ ವಾತಾವರಣ, ಆಧುನಿಕ ತಂತ್ರಜ್ಞಾನ ಹಾಗೂ ನುರಿತ ಸಿಬ್ಬಂದಿಗಳ ಮೂಲಕ ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸುವ ದೃಷ್ಟಿಯಿಂದ ವಿಶಾಲವಾದ ವ್ಯವಸ್ಥೆಯೊಂದಿಗೆ ಸೆಲೂನ್ ಸಿದ್ಧಗೊಂಡಿದೆ. ಬೆಳ್ತಂಗಡಿ ಭಾಗದ ಗ್ರಾಹಕರು ಉತ್ತಮ ಬ್ಯೂಟಿ ಸೇವೆಗಳಿಗಾಗಿ ದೂರದ ನಗರಗಳಿಗೆ ತೆರಳುವ ಅಗತ್ಯವಿಲ್ಲ ಎಂಬ ನಿಟ್ಟಿನಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡುತ್ತಿದೆ.

ಶಾಂತ ಬಂಗೇರ ಅವರು ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆಯಾಗಿ, ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷೆಯಾಗಿ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನೂತನ ಸಂಸ್ಥೆಯ ಉದ್ಘಾಟನೆಯನ್ನು ಸಚಿವ ಯು.ಟಿ. ಖಾದರ್ ನೆರವೇರಿಸಲಿದ್ದು, ಶಾಸಕ ಹರೀಶ್ ಪೂಂಜ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬೆಂಗಳೂರಿನ ದೀಕ್ಷಿತ್ ಅಕಾಡೆಮಿಯ ಸಿಇಓ ಭವಾನಿ ಶ್ರೀಧರ್ ಅವರು ಅಕಾಡೆಮಿ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಎಂಎಲ್ಸಿ ಕೆ. ಪ್ರತಾಪಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಅಭಿವೃದ್ಧಿ ಅಧಿಕಾರಿ ಟಿ.ಡಿ. ರಾಘವೇಂದ್ರ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಸುವರ್ಣ ಆರ್ಕೇಡ್ ಮಾಲಕ ವೈ. ನಾಣ್ಯಪ್ಪ ಪೂಜಾರಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ. ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಗ್ರಾಹಕರ ನಗುಮೊಗವೇ ನಮ್ಮ ಸೇವೆಯ ಯಶಸ್ಸು: ಶಾಂತ ಬಂಗೇರ

ಬ್ಯೂಟಿಷಿಯನ್ ಕ್ಷೇತ್ರದಲ್ಲಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಾಂತ ಬಂಗೇರ ಅವರು ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಇವರಲ್ಲಿ 10 ಮಂದಿ ಸ್ವಂತ ಬ್ಯೂಟಿ ಪಾರ್ಲರ್ ಆರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.2002ರಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಹಭಾಗಿತ್ವದಲ್ಲಿ ಉಜಿರೆಯಲ್ಲಿ ಮೂರು ತಿಂಗಳ ಬ್ಯೂಟಿಷಿಯನ್ ತರಬೇತಿ ಪಡೆದಿರುವ ಅವರು, ಬಳಿಕ ಹಲವು ಸೆಮಿನಾರ್‌ಗಳಲ್ಲಿ ಭಾಗವಹಿಸಿ ಕ್ಷೇತ್ರದ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ.
ಎಸ್ & ವಿ ಫ್ಯಾಮಿಲಿ ಬ್ಯೂಟಿ ಸೆಲೂನ್ & ಅಕಾಡೆಮಿಯಲ್ಲಿ ಬ್ಯೂಟಿಷಿಯನ್ ತರಬೇತಿ, ಟೈಲರಿಂಗ್ ತರಬೇತಿ, ಫ್ಯಾಷನ್ ಡಿಸೈನಿಂಗ್ ಕ್ಲಾಸ್, ಜುಂಬಾ ಕ್ಲಾಸ್, ಸಾರಿ ಬಾಕ್ಸ್ ಫೋಲ್ಡಿಂಗ್, ಸಾರಿ ಗೊಂಬೆ ತರಬೇತಿ ಸೇರಿದಂತೆ ವಿವಿಧ ತರಬೇತಿಗಳು ಲಭ್ಯವಿವೆ. ಯುವಕರಿಗಾಗಿ ಪ್ರತ್ಯೇಕ ಸೆಲೂನ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಗ್ರಾಹಕರಿಗೆ ನಗುಮೊಗದ ಸೇವೆ ನೀಡುವುದು ನಮ್ಮ ಮೊದಲ ಆದ್ಯತೆ. ಬೆಳ್ತಂಗಡಿಯ ಜನರು ಈ ನೂತನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ ಸಂಸ್ಥೆಯನ್ನು ಬೆಳೆಸಬೇಕು ಎಂದು ಶಾಂತ ಬಂಗೇರ ಮನವಿ ಮಾಡಿದ್ದಾರೆ.

Related posts

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಉದ್ಯಮಿ ಸತೀಶ್ ಪೂಜಾರಿ ಬೆಳಪು ಮತ್ತು ಪ್ರಭಾಕರ ಸುವರ್ಣ ಕರ್ನಿರೆ ಭೇಟಿ

Suddi Udaya

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ಪಟು ಕು. ತನುಶ್ರೀ ರವರಿಂದ ಯೋಗ ಪ್ರದರ್ಶನ

Suddi Udaya

ಅಳದಂಗಡಿ: ಸತತ ಪರಿಶ್ರಮವಿದ್ದರೆ ಅಸಾಧ್ಯವಾದ್ದದ್ದು ಯಾವುದು ಇಲ್ಲ: ಸಿ. ಎ. ನಿರೀಕ್ಷಾ ಎನ್

Suddi Udaya

ರಾಜ್ಯಮಟ್ಟದ ‘ಎಸ್.ಡಿ.ಎಂ ಉದ್ಯೋಗಂ – 2026’ ಗೆ ಚಾಲನೆ

Suddi Udaya

20 ವರ್ಷಗಳ ಯಶಸ್ವಿ ಪಯಣ: ಜು.10- ಮಡಂತ್ಯಾರಿನಲ್ಲಿ ಲುಕ್ ಆಪ್ಟಿಕ್ಸ್ ಮರು ಉದ್ಘಾಟನೆ:

Suddi Udaya
error: Content is protected !!