32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆಸರ್ಕಾರಿ ಇಲಾಖಾ ಸುದ್ದಿ

ಅನ್ನಭಾಗ್ಯ ಯೋಜನೆ: ನಿಡ್ಲೆ ಸೊಸೈಟಿಗೆ ಎರಡು ವರ್ಷದ ಹಿಂದಿನ ಕಳಪೆ ಗುಣಮಟ್ಟದ ಅಕ್ಕಿ ಪೂರೈಕೆ ಗ್ರಾಹಕರ ಆಕ್ರೋಶ : ಬದಲಿ ವ್ಯವಸ್ಥೆಗೆ ಅಧಿಕಾರಿಗಳ ಭರವಸೆ

ಬೆಳ್ತಂಗಡಿ: ಸರಕಾರ ಅನ್ನಭಾಗ್ಯ ಯೋಜನೆಯ ಮೂಲಕ ಬಡವರ ಹಸಿವು ನೀಗಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಪ್ರತಿ ತಿಂಗಳು ಪಡಿತರ ವಿತರಣೆಯನ್ನು ಮಾಡುವ ಯೋಜನೆಯನ್ನು ಮಾಡಿದೆ, ಆದರೆ ಅನ್ನಭಾಗ್ಯಕ್ಕೆ ಪೂರೈಕೆ ಮಾಡುವ ಅಕ್ಕಿ ಯಾವ ರೀತಿ ಇದೆ ಎಂಬುದನ್ನು ನೋಡುವರಿಲ್ಲದ ಸ್ಥಿತಿಯಾಗಿದೆ. ಇದಕ್ಕೆ ತಾಜಾ ಉದಾರಣೆ ನಿಡ್ಲೆ ಸೊಸೈಟಿಗೆ ಪೂರೈಕೆ ಮಾಡಲಾದ ಅಕ್ಕಿ ಸುಮಾರು ಎರಡು ವರ್ಷದ ಹಿಂದಿನ ಕಳಪೆ ಅಕ್ಕಿಯನ್ನು ಪೂರೈಕೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಬೆಳ್ತಂಗಡಿ ತಾಲೂಕಿನ ನಿಡ್ಲೆ, ಪಟ್ರಮೆ ಲೈನಿಗೆ ಆಗಸ್ಟ್ 19ರಂದು ಬೆಳಗ್ಗೆ ಲಾರಿ ಪೂರ್ತಿ ಪಡಿತರ ಅಕ್ಕಿ ಬಂದಿದ್ದು ನಿಡ್ಲೆ ಪಡಿತರ ಕೇಂದ್ರದಲ್ಲಿ ಅಂದಾಜು 50 ರಿಂದ 100 ಗೋಣಿ ಅಕ್ಕಿಯನ್ನು ಅನ್‌ಲೋಡ್ ಮಾಡಿ ತೆರಳಿದ್ದಾರೆ. ನಿಡ್ಲೆ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ನಾಗರಿಕರು ಅಕ್ಕಿ ಬಂದ ಖುಷಿಯಲ್ಲಿ ಸ್ಥಳಕ್ಕೆ ಬಂದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಎರಡು ವರ್ಷಗಳ ಹಿಂದೆ ಅಂದರೆ ೨೦೨೪-೨೫ ರಲ್ಲಿ ಪ್ಯಾಕ್ ಮಾಡಲಾದ ಗೋಣಿಯನ್ನು ತೆರೆದು ನೋಡಿದಾಗ ಅಕ್ಕಿ ಸಂಪೂರ್ಣವಾಗಿ ಹಾಳಾಗಿ ಅದರಲ್ಲಿ ಹುಳ ಆಗಿರುವುದು ಕಂಡು ಬಂದಿತ್ತು. ಸ್ಥಳೀಯರು ಹೇಳುವ ಪ್ರಕಾರ ಈ ಅಕ್ಕಿಯನ್ನು ಪ್ರಾಣಿಗಳಿಗೆ ನೀಡಲು ಕೂಡಾ ಯೋಗ್ಯವಾಗಿಲ್ಲ ಅಷ್ಟು ಕೆಟ್ಟು ಹೋಗಿದೆ.

ಈ ಬಗ್ಗೆ ಸ್ಥಳೀಯರೊಬ್ಬರು ಮಾತನಾಡಿದ್ದು, ಅನ್ನಭಾಗ್ಯದ ಅಕ್ಕಿ ಕೆಟ್ಟು ಹೋಗಿದೆ ಇದನ್ನು ನಾವು ಬಡವರು ಹೇಗೆ ಆಹಾರವಾಗಿ ತೆಗೆದುಕೊಳ್ಳುವುದು, ಸಂಬಂಧಪಟ್ಟವರು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ಆಹಾರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿದ್ದು, ಹೊಟೇಲುಗಳಿಗೆ ದಾಳಿ ಮಾಡಿ ಅಲ್ಲಿನ ಆಹಾರದ ಗುಣಮಟ್ಟವನ್ನು ಪರೀಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವುದೇನೋ ನಿಜ, ಆದರೆ ಸರಕಾರದಿಂದ ನೀಡುವ ಅನ್ನಭಾಗ್ಯ ಅಕ್ಕಿ ಎರಡು ವರ್ಷ ಹಳೆಯದಾಗಿ, ಹುಳ, ಹಪ್ಪಟೆ ಹುಟ್ಟಿಕೊಂಡು ಇದನ್ನು ಬಡವರ ಹಸಿವು ನೀಗಿಸಲು ವಿತರಣೆಗೆ ಕಳುಹಿಸಿರುವುದು ದುರಂತವೇ ಸರಿ. ಈ ಬಗ್ಗೆ ಸುದ್ದಿ ಉದಯ ನಿಡ್ಲೆ ಸೊಸೈಟಿಯ ಮ್ಯಾನೇಜರ್‌ರನ್ನು ಸಂಪರ್ಕಿಸಿದಾಗ, ಅಕ್ಕಿ ಬಂದಿರುವುದು ನಿಜ, ಅದನ್ನು ಗಮನಿಸಿ, ಪಡಿತರದಾರರಿಗೆ ವಿತರಣೆ ಮಾಡಿಲ್ಲ. ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಬದಲಿ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆಯಾಗುವ ಆಹಾರ ಸಾಮಾಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಿದರೆ ಬಡವರು ಉತ್ತಮ ಆಹಾರವನ್ನು ಪಡೆದು ನೆಮ್ಮದಿಯ ಬದುಕು ಬದುಕುವಂತಾಗಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Related posts

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ಹೋಟೆಲ್ ಉದ್ಯಮಕ್ಕೆ ಪೆಟ್ಟು ಹಾಸ್ಟೇಲ್, ಕ್ಯಾಂಟಿನ್‌ಗೆ ಸಂಕಷ್ಟ

Suddi Udaya

ವಕ್ಫ್‌ ಕಾಯ್ದೆಯನ್ನು ಶೀಘ್ರವಾಗಿ ತಿದ್ದುಪಡಿ ಮಾಡಬೇಕು ಮತ್ತು ಎಚ್.ಡಿ. ಕುಮಾರಸ್ವಾಮಿಯನ್ನು ವರ್ಣದ ವಿಚಾರವಾಗಿ ನಿಂದಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಕ್ಷಮೆಯಾಚಿಸಬೇಕೆಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಗ್ರಹ

Suddi Udaya

ಜು.1: ಧರ್ಮಸ್ಥಳದಲ್ಲಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ

Suddi Udaya

ಸುಲ್ಕೇರಿ ಶ್ರೀರಾಮ ಶಾಲೆಗೆ ಕೈಗಾರಿಕೋದ್ಯಮಿ ಅಶ್ವಥ್ ಹೆಗ್ಡೆಯವರಿಂದ 650 ಊಟದ ಸ್ಟೀಲ್ ತಟ್ಟೆ ಹಸ್ತಾಂತರ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮಾ.1: ಉಜಿರೆಯಲ್ಲಿ ಅನು ಇಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಶುಭಾರಂಭ

Suddi Udaya
error: Content is protected !!