24.9 C
ಪುತ್ತೂರು, ಬೆಳ್ತಂಗಡಿ
October 9, 2026
ಅಭಿನಂದನೆತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಸ್ಟ್ ಎಂಎಲ್ಎ ಅವಾರ್ಡ್ ಹಾಗೂ ಪರಿಮಳ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್ ಪೂಂಜರಿಗೆ ವಿಶ್ವಬ್ರಾಹ್ಮಣ ಸಮಾಜದ ಸಂಘಟನೆಗಳ ವತಿಯಿಂದ ಅಭಿನಂದನೆ

ಬೆಳ್ತಂಗಡಿ: ರಾಜ್ಯದ ಪ್ರತಿಷ್ಠಿತ ವಾರ್ತಾ ವಾಹಿನಿಗಳಲ್ಲಿ ಒಂದಾದ ಕರ್ನಾಟಕ ಟಿವಿ ಅವರಿಂದ ಕರಾವಳಿ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದ ಬೆಸ್ಟ್ ಎಂಎಲ್ಎ ಅವಾರ್ಡ್ ಗೌರವ ಪಡೆದ ಹಾಗೂ ಮಂತ್ರಾಲಯ ಕ್ಷೇತ್ರದ ಅನುಗ್ರಹ ಪ್ರಶಸ್ತಿಯಾದ ಪರಿಮಳ ಪ್ರಶಸ್ತಿ ಪಡೆದ ಶಾಸಕರಾದ ಹರೀಶ್ ಪೂಂಜರವರನ್ನು ಅವರ ಸ್ವಗೃಹ ಮಿಥಿಲಾದಲ್ಲಿ ಬೆಳ್ತಂಗಡಿ ತಾಲೂಕಿನ ಎಲ್ಲಾ ವಿಶ್ವಬ್ರಾಹ್ಮಣ ಸಮಾಜದ ಸಂಘಟನೆಗಳ ಉಪಸ್ಥಿತಿಯಲ್ಲಿ ಸಮಾಜದ ಹಿರಿಯರಾದ ಬಿ.ಯೋಗೀಶ ಆಚಾರ್ಯ ಗುರುವಾಯನಕೆರೆ, ಖಂಡಿಗ ಶ್ರೀಧರ ಆಚಾರ್ಯ ವೇಣೂರು, ಸುಂದರಾಚಾರ್ಯ ಕುದ್ಯಾಡಿ, ಡಿ.ಭಾಸ್ಕರಾಚಾರ್ಯ ಅಂಡಿಂಜೆ, ರಮೇಶ ಆಚಾರ್ಯ ಮದ್ದಡ್ಕ, ಆನಂದಾಚಾರ್ಯ ಮಾಪಲಾಡಿ, ಉಮೇಶ ಆಚಾರ್ಯ ಕಾನರ್ಪ, ಹರಿಶ್ಚಂದ್ರ ಆಚಾರ್ಯ ವೇಣೂರು, ವಿಠಲಾಚಾರ್ಯ ಸೋಣಂದೂರು, ದಿನೇಶ ಆಚಾರ್ಯ ನೆರಿಯ, ಶ್ರೀನಿವಾಸ ಆಚಾರ್ಯ ನೆಲ್ಲಿಗುಡ್ಡೆ, ಆನಂದಾಚಾರ್ಯ ಕೆದ್ದು, ಪುರುಷೋತ್ತಮಾಚಾರ್ಯ ಕನ್ನಾಜೆ, ಅಶೋಕ ಆಚಾರ್ಯ ಪುಣ್ಯ ಸ್ಟುಡಿಯೋ, ಅಂಡಿಂಜೆ ಪ್ರಭಾಕರ ಆಚಾರ್ಯ ಮೊದಲಾದವರ ಮೂಲಕ ಅಭಿನಂದಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ರವೀಂದ್ರ ಆಚಾರ್ಯ ಇಳಂತಿಲ ಅಭಿನಂದನಾ ಮಾತುಗಳನ್ನಾಡಿದರು. ಈ ಸಂದರ್ಭ ಗೌರವ ಸ್ವೀಕರಿಸಿ ಮಾತನಾಡಿದ ಮಾನ್ಯ ಶಾಸಕರು ವಿಶ್ವಬ್ರಾಹಣ ಸಮಾಜ ಹಿಂದುತ್ವದ ಪರವಿರುವ ಸಂಘಟಿತ ಸಮಾಜ, ಈ ಸಮಾಜದ ಆಶೋತ್ತರಗಳಿಗೆ ನಾನು ಶಕ್ತಿ ಮೀರಿ ಸ್ಪಂದನ ಮಾಡಿ ನಿಮ್ಮ ಜೊತೆ ಸದಾ ಇರುತ್ತೇನೆಂದು ವಿಶ್ವಬ್ರಾಹ್ಮಣ ಸಮಾಜದ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದರು.

ಶಶಿಧರ ಆಚಾರ್ಯ ನವಜ್ಯೋತಿ ಗೋಲ್ಡ್ ಇವರ ಪರಿಕಲ್ಪನೆಯಲ್ಲಿ ಮೂಡಿದ ಮರದ ವಿಶ್ವಕರ್ಮ ಮೂರ್ತಿಯನ್ನು ಅಭಿನಂದನೆಯ ಸಂದರ್ಭ ಶಾಸಕರಿಗೆ ಕೊಡಲಾಯಿತು. ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿತ್ ಸೊಸೈಟಿಯ ನಿರ್ದೇಶಕ ಅಳದಂಗಡಿ ಮಂಜುನಾಥ ಆಚಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆನೆಗುಂದಿ ಗುರುಸೇವಾ ಪರಿಷತ್, ಬೆಳ್ತಂಗಡಿ ತಾಲೂಕು, ಶ್ರೀ ವಿಶ್ವಕರ್ಮಾಭ್ಯುದಯ ಸಭಾ (ರಿ) ಬೆಳ್ತಂಗಡಿ, ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಮಡಂತ್ಯಾರು, ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಉಪ್ಪಿನಂಗಡಿ, ಗಾಯತ್ರೀ ವಿಶ್ವಕರ್ಮ ಸಂಘಟನಾ ಸಂಘ (ರಿ) ಅಳದಂಗಡಿ, ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಅಂಡಿಂಜೆ, ಶ್ರೀ ಈಶ್ವರ ಕಾಳಿಕಾಂಬಾ ದೇವಸ್ಥಾನ ವಿಶ್ವಾನಂದಪುರ ನೆಕ್ಕರೆ ನೆರಿಯ, ಶ್ರೀವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ವೇಣೂರು, ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ ನಾರಾವಿ-ಕುತ್ಲೂರು, ವಿಶ್ವಕರ್ಮ ಸಮಾಜ ಸೇವಾ ಸಂಘ ಮುಂಡೂರು, ವಿಶ್ವಕರ್ಮ ಸಮಾಜ ಸೇವಾ ಸಂಘ ಬೆಳಾಲು, ಚಿನ್ನಾಭರಣ ಮೌಲ್ಯಮಾಪಕರು ಮತ್ತು ವಿಕಾಸ ಸಮಿತಿ ಬೆಳ್ತಂಗಡಿ, ಕಮ್ಮಾರರು ಮತ್ತು ಗುಡಿ ಕೈಗಾರಿಕಾ ಸಂಘ ಬೆಳ್ತಂಗಡಿ,ತಾಲೂಕಿನ ಮೊದಲಾದ ಸಂಘಟನೆಗಳ 150 ಕ್ಕೂ ಮಿಕ್ಕಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Related posts

ಲಾಯಿಲ: ಕನ್ನಾಜೆ ಅಂಗನವಾಡಿ ಕೇಂದ್ರದಲ್ಲಿ ಹಣ್ಣಿನ ಗಿಡಗಳ ನಾಟಿ ಹಾಗೂ ಶಾಲಾ ಕೈತೋಟ ರಚನೆ

Suddi Udaya

ಸುಲ್ಕೇರಿ ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಮಿತಿಯಿಂದ ಶ್ರೀ ಗುರುಪೂಜೆ: ಮಾತೃ ಸಂಘದಿಂದ ಮಂಜೂರಾದ 2 ಅಶಕ್ತ ಕುಟುಂಬಗಳಿಗೆ ಸಹಾಯಧನ ವಿತರಣೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ: ರೂ.4.09 ಕೋಟಿ ನಿವ್ವಳ ಲಾಭ, ಶೇ.15 ಡಿವಿಡೆಂಟ್ ಘೋಷಣೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Suddi Udaya

ಸಿಎಸ್ಇಇಟಿ ಪರೀಕ್ಷೆ: ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಸಾಧನೆ

Suddi Udaya

ನಾರಾವಿ ಸಂತ ಅಂತೋಣಿ ಪ.ಪೂ ಕಾಲೇಜು ಶೇ.98 ಫಲಿತಾಂಶ

Suddi Udaya
error: Content is protected !!