33.4 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಎರಡೂ ಜನರೇಟರ್ ಇದ್ದೂ ಯಾವುದೇ ಪ್ರಯೋಜನಕ್ಕಿಲ್ಲ: ಜನರು ಅಗತ್ಯ ಕೆಲಸಕ್ಕಾಗಿ ಕಾದು ವಾಪಸ್ ಹೋಗಬೇಕಾದ ಪರಿಸ್ಥಿತಿ

ಬೆಳ್ತಂಗಡಿ ತಾಲೂಕು ಕಚೇರಿ ದಿನನಿತ್ಯ ಜನರಿಂದ ತುಂಬಿ ತುಳುಕುತ್ತದೆ. ಆದರೆ ಇಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡರೆ ಪರ್ಯಾಯ ವ್ಯವಸ್ಥೆ ಇಲ್ಲ. ಇರುವ ಎರಡೂ ಜನರೇಟರ್ ಯಾವುದೇ ಪ್ರಯೋಜನಕ್ಕಿಲ್ಲ. ಜನರು ತಮ್ಮ ಅಗತ್ಯ ಕೆಲಸಕ್ಕಾಗಿ ಕಾದು ಕಾದು ವಾಪಸ್ ಹೋಗಬೇಕಾದ ಪರಿಸ್ಥಿತಿ ಇದೆ.

ಬೆಳ್ತಂಗಡಿ ತಾಲೂಕು ಕಚೇರಿಯ ನೂತನ ಕಟ್ಟಡ 2018 ರಲ್ಲಿ ಉದ್ಘಾಟನೆಗೊಂಡು ಕೇವಲ 8 ವರ್ಷಗಳಾಯಿತು ಅಷ್ಟೇ. ಉದ್ಘಾಟನಾ ಸಂದರ್ಭದಲ್ಲಿ ಎರಡು ಜನರೇಟರ್ ಗಳಿತ್ತು. ಈಗಲೂ ಇದೆಯಾದರೂ ಎರಡೂ ಜನರೇಟರ್ ಗಳು ಯಾವುದೇ ಉಪಯೋಗಕ್ಕೆ ಬಾರದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ವಿದ್ಯುತ್ ಕೈಕೊಟ್ಟರೆ ಕಂಪ್ಯೂಟರ್ ಗಳು ಸಂಪೂರ್ಣ ಬಂದ್ ಆಗುತ್ತದೆ. ಪರ್ಯಾಯ ವ್ಯವಸ್ಥೆಯಂತೂ ಯಾವುದೂ ಇಲ್ಲ. ಸಿಬ್ಬಂದಿಗಳು ಜನರಿಂದ ಬೈಸಿಕೊಂಡು ಸುಮ್ಮನೆ ಇರಬೇಕಾಷ್ಟೇ. ಕಚೇರಿ ವೆಚ್ಚದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸರ್ಕಾರ ಬಿಡುಗಡೆಗೊಳಿಸಿದರೂ ಪ್ರಯೋಜನವಿಲ್ಲ.

ಐದಾರು ವರ್ಷಗಳಿಂದ ಸತತವಾಗಿ ಜನರೇಟರ್ ಗಾಳಿ , ಮಳೆ , ಬಿಸಿಲಿಗೆ ಮೈಯೊಡ್ಡಿ ತಾಲೂಕು ಕಚೇರಿಯ ಬದಿಯಲ್ಲಿದ್ದರೂ ಇಲ್ಲಿನ ತಹಶೀಲ್ದಾರರುಗಳು ಮಾತ್ರ ತಮಗೂ , ಜನರೇಟರ್ ಗೂ ಯಾವುದೇ ರೀತಿಯ ಸಂಬಂಧ ಇಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಇನ್ನಾದರೂ ಲಕ್ಷಾಂತರ ರೂಪಾಯಿ ಮೌಲ್ಯದ ಎರಡೂ ಜನರೇಟರ್ ಗಳು ಜನರ ಉಪಯೋಗಕ್ಕೆ ಲಭ್ಯವಾಗಲಿ , ಅಥವಾ ಎರಡೂ ಜನರೇಟರ್ ಗಳು ತುಕ್ಕು ಹಿಡಿದು ಗುಜರಿ ಅಂಗಡಿ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.

Related posts

ಮೂಡಬಿದ್ರಿ ಕೋಟೆಬಾಗಿಲು ದ ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಜಡಿಮಳೆಗೆ ಕೊಯ್ಯೂರು ಮಾಧವ ಶೆಟ್ಟಿಗಾರ್ ಅವರ ಮನೆ ಬಳಿ ಗುಡ್ಡ ಕುಸಿತ: ಆತಂಕದಲ್ಲಿ ಕುಟುಂಬ -ಸ್ಥಳಕ್ಕೆ ಗ್ರಾ.ಪಂ ಪಿಡಿಒ ಭೇಟಿ ಪರಿಶೀಲನೆ

Suddi Udaya

ಬಳಂಜ ಗ್ರಾ.ಪಂ. ಸದಸ್ಯರ ಸಹಕಾರದಿಂದ ಕಾಪಿನಡ್ಕದಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬ ಸರಿಪಡಿಸಿದ ಮೆಸ್ಕಾಂ ಇಲಾಖೆ, ಗ್ರಾಮಸ್ಥರಿಂದ ಶ್ಲಾಘನೆ

Suddi Udaya

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ಶ್ರೀ ಭಾರತೀ ಆಂ.ಮಾ.ಪ್ರೌ. ಶಾಲೆಯ ಬಾಲಕರ ತಂಡ ದ್ವಿತೀಯ ಸ್ಥಾನ

Suddi Udaya

ಬೆಳಾಲು ಶ್ರೀ ಧ. ಮಂ. ಅ. ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಮತ್ತು ವಿದ್ಯಾರ್ಥಿಗಳಿಗೆ ಶಾಲಾ ಸೌಲಭ್ಯಗಳ ವಿತರಣೆ

Suddi Udaya
error: Content is protected !!