33.4 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ಒಂದು ದಿನದ ಪುನರ್ಮನನ ಶಿಬಿರ

ಉಜಿರೆ: ಇಲ್ಲಿನ ಪ್ರತಿಷ್ಠಿತ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿಶೇಷ ಪುನರ್ಮನನ ಶಿಬಿರ ಅತ್ಯಂತ ಯಶಸ್ವಿಯಾಗಿ ಜರುಗಿತು. ವಿದ್ಯಾರ್ಥಿಗಳಲ್ಲಿ ನವಚೈತನ್ಯ ತುಂಬುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಈ ಶಿಬಿರವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಈ ಶಿಬಿರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿ ಹಾಗೂ ಲೀಡರ್ ಟ್ರೈನರ್ ಡಾ. ಪ್ರತಿಮ್ ಕುಮಾರ್ ಕೆ ಎಸ್ ಆಗಮಿಸಿದ್ದರು.
ಶಿಬಿರದ ಆರಂಭದಲ್ಲಿ ಇತ್ತೀಚೆಗೆ ಯುನೈಟೆಡ್ ಸ್ಟೇಟಸ್ ಓಫ್ ಅಮೇರಿಕ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾದ ಪ್ರತಿಮ್ ಕುಮಾರ್ ಕೆ ಎಸ್ ಅವರನ್ನು ಕಾಲೇಜು ಹಾಗೂ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ಸನ್ಮಾಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರತಿಮ್ ಕುಮಾರ್ ಕೆ ಎಸ್. ಈ ಗೌರವು ನನಗೆ ಸೇರಿದ್ದಲ್ಲ ಬದಲಾಗಿ ಸ್ಕೌಟ್ ಮತ್ತು ಗೈಡ್ಸ್ ಗೆ ಸಂದ ಗೌರವ. ಸ್ಕೌಟ್ಸ್ ಮತ್ತು ಗೈಡ್ಸ್ ನ ನಿಯಮಗಳನ್ನು ಯಥಾವತ್ತಾಗಿ ಪಾಲಿಸಿದರೆ ಖಂಡಿತ ಒಬ್ಬ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಲ್ಪಾlಡಬಹುದು ಅಂತಹ ಶಕ್ತಿ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಇದೆ ಎಂದರು.ಕೇವಲ ಔಪಚಾರಿಕವಾಗಿ ಸ್ಕೌಟ್ಸ್ ಗೈಡ್ಸ್ ಗೆ ಸೇರದೇ ಹೃದಯದಿಂದ ಅದರ ತತ್ವಗಳನ್ನು ಪಾಲಿಸಿದರೆ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಆ ನಿಟ್ಟಿನಲ್ಲಿ ಇಂತಹ ಪುನರ್ಮನನ ಶಿಬಿರಗಳು ಸಂಯೋಜಿಸುತ್ತಿರಬೇಕು ಎಂದು ನುಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ ಪ್ರತಿಮ್ ಕುಮಾರ್ ಅವರ ವ್ಯಕ್ತಿತ್ವ, ಸಮಾಜ ಸೇವೆಗೆ ಇಂದು ಗೌರವ ಡಾಕ್ಟರೇಟ್ ಬಂದಿದೆ ಎಂದರೆ ಅವರೊಬ್ಬ ಆದರ್ಶ ವ್ಯಕ್ತಿ. ಅವರ ನಿಸ್ವಾರ್ಥ ಸೇವೆಗೆ ಇನ್ನೂ ಹತ್ತು ಹಲವಾರು ಪ್ರಶಸ್ತಿಗಳು ಬರಲಿ,ಅವರ ಈ ಎಲ್ಲಾ ಸಾಧನೆಗೆ ಅವರು ಚಿಕ್ಕವರಿದ್ದಾಗ ಮತ್ತು ಈಗಲೂ ಪಡೆಯುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಣವೇ ಕಾರಣ, ಅವರ ಶಿಸ್ತು, ಸಮಯ ಪಾಲನೆ ಹಾಗೂ ಸಂಘಟನಾ ಕೌಶಲ್ಯ ಎಲ್ಲರಿಗೂ ಆದರ್ಶಪ್ರಾಯ. ಅವರ ಈ ಶಿಬಿರವು ನಿಮ್ಮಲ್ಲಿಯೂ ಹೊಸ ಹುರುಪು ಹಾಗೂ ನವ ಚೈತನ್ಯ ತುಂಬಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯ ಮೇಲೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಅಧಿಕಾರಿಗಳಾದ ಲಕ್ಷ್ಮೀಶ್ ಭಟ್ ಮತ್ತು ಅಂಕಿತಾ ಎಂ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥ ತಿರುಮಲ ಪ್ರಸಾದ್ ಸಿ ಹೆಚ್ ಉಪಸ್ಥಿತರಿ ದ್ದರು. 50 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದು ಕೊಂಡರು.
ರೋವರ್ ಸ್ಕೌಟ್ ಲೀಡರ್ ಲಕ್ಷ್ಮೀಶ್ ಭಟ್ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಸಭೆಗೆ ಪರಿಚಯಿಸಿದರೆ, ರೋವರ್ ತೇಜಸ್ವಿ ಸರ್ವರನ್ನೂ ವಂದಿಸಿದರೆ , ರೇಂಜರ್ ಕವನ ಕಾರ್ಯಕ್ರಮ ನಿರ್ವಹಿಸಿದರು.

Related posts

ಬೆಳ್ತಂಗಡಿಯ ಮಾಚಾರ್ ನ ಶಿವರಾಮ ಗೌಡ ಪಿ. ರವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಔಟ್ ಸೈಡ್ ವೀಲ್ ಚೇರ್ ವಿತರಣೆ

Suddi Udaya

ನಾವರ: ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಹಾನಿ

Suddi Udaya

ಬೆಳ್ತಂಗಡಿ: ನೇಮಿರಾಜ್ ಬುಣ್ಣು ನಿಧನ

Suddi Udaya

ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯ ಮುಂಜಾಗ್ರತಾ ಕ್ರಮವಾಗಿ ಶಾಸಕ ಹರೀಶ್ ಪೂಂಜರಿಂದ ಅಧಿಕಾರಿಗಳ ಸಭೆ

Suddi Udaya

ಬೆಳ್ತಂಗಡಿ : ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಕಿಶೋರ್ ಪಿ ನೇಮಕ

Suddi Udaya
error: Content is protected !!