33.4 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಹನಾಶ್ರೀ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಗಡಿಯಾರ ವಿತರಣೆ

ಬೆಳ್ತಂಗಡಿ: ವಿದ್ಯಾರ್ಥಿಗಳು ಸಮಯದ ಮೌಲ್ಯವನ್ನು ಅರಿತು ಶಿಸ್ತುಬದ್ಧವಾಗಿ ವಿದ್ಯಾಭ್ಯಾಸದತ್ತ ಗಮನ ಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಮಯಪಾಲನೆ ಹಾಗೂ ಶಿಸ್ತು ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಹನಾಶ್ರೀ ಫೌಂಡೇಶನ್ (ರಿ) ಅಧ್ಯಕ್ಷ ರಾಜೇಶ್ ಪುದುಶೇರಿ ಹೇಳಿದರು.

ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು, ಬೆದ್ರಬೆಟ್ಟು ಹಾಗೂ ಎರ್ಮಲ ಮದರಸ ವಿದ್ಯಾರ್ಥಿಗಳಿಗೆ ಸಹನಾಶ್ರೀ ಫೌಂಡೇಶನ್ (ರಿ) ವತಿಯಿಂದ ಗಡಿಯಾರಗಳನ್ನು ವಿತರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಶಿಕ್ಷಣ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಹನಾಶ್ರೀ ಫೌಂಡೇಶನ್ ನಿರಂತರವಾಗಿ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಂದರ್ಭದಲ್ಲಿ ನೆರವು ನೀಡುವುದು ಹಾಗೂ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಸಂಸ್ಥೆಯ ಪ್ರಮುಖ ಆಶಯವಾಗಿದೆ ಎಂದು ರಾಜೇಶ್ ಪುದುಶೇರಿ ತಿಳಿಸಿದರು.

ಈ ಸಂದರ್ಭದಲ್ಲಿ ಹಸನ್ ಎರ್ಮಲ, ಮೊಹಮ್ಮದ್ ಎರ್ಮಲ, ನವೀನ್ ಕುಮಾರ್ ಬಂಗಾಡಿ, ಪ್ರದೀಪ್ ಬಂಗಾಡಿ ಹಾಗೂ ಪುನೀತ್ ಬಂಗಾಡಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಗಡಿಯಾರಗಳನ್ನು ವಿತರಿಸುವ ಮೂಲಕ ಸಮಯಪಾಲನೆಯ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಿರುವ ಸಹನಾಶ್ರೀ ಫೌಂಡೇಶನ್‌ನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Related posts

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಬಿಜೆಪಿ ಬೆಳ್ತಂಗಡಿ ಮಂಡಲ

Suddi Udaya

ಸೋಣಂದೂರು ಸೇತುವೆ ಶಿಥಿಲಾವಸ್ಥೆಗೆ: ಘನ ವಾಹನಗಳ ಸಂಚಾರ ನಿಷೇಧ

Suddi Udaya

ಎರಡನೇ ವಾತಿಕಾನ್ ಮಹಾಸಮ್ಮೇಳನದ ಸಂವಿಧಾನಿಕ ದಾಖಲೆಗಳ ಕುರಿತು ವಿಶೇಷ ಕಲಿಕಾ ಶಿಬಿರ

Suddi Udaya

ಶಿಶಿಲ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

Suddi Udaya

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಇವರ 549 ಸೇವಾ ಯೋಜನೆ :15 ಜನ ಅಂದಕಲಾವಿದರಿಗೆರೂ.15 ಸಾವಿರ ರೂ. ನೆರವು

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಪುನರಾಯ್ಕೆ

Suddi Udaya
error: Content is protected !!