26.5 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ಹಳೆಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಯಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ

ಉಜಿರೆ : ಮುಹಿಯುದ್ದೀನ್ ಜುಮಾ ಮಸ್ಜಿದ್, ಹಳೆಪೇಟೆ- ಉಜಿರೆಯಲ್ಲಿ ಮೂರು ದಿನಗಳ ಸಂಭ್ರಮದ ಈದ್ ಮೀಲಾದ್ ಕಾರ್ಯಕ್ರಮವು ಆಗಸ್ಟ್ 23, 24 ಹಾಗೂ 25ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಆಡಳಿತ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಸುಪ್ರೀಂ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಎಂ.ಜೆ.ಎಂ. ಖತೀಬ್ ಸಫ್ವಾನ್ ಜೌಹರಿ ಅಲ್-ಹಿಕಮಿ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣದೊಂದಿಗೆ ಚಾಲನೆ ನೀಡಲಾಯಿತು. ಸಯ್ಯದ್ ಇಸ್ಮಾಯಿಲ್ ತಂಗಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಆಗಸ್ಟ್ 23ರಂದು ನಡೆದ ಕಾರ್ಯಕ್ರಮದಲ್ಲಿ ಮುತಅಲ್ಲಿಂ ವಿದ್ಯಾರ್ಥಿಗಳಿಂದ ವಿವಿಧ ಪ್ರತಿಭಾ ಕಾರ್ಯಕ್ರಮಗಳು ಹಾಗೂ ಬುರ್ದಾ ಮಜ್ಲಿಸ್ ನಡೆಯಿತು.

ಆಗಸ್ಟ್ 24ರಂದು ಬದರುಲ್ ಹುದಾ ಸೆಕೆಂಡರಿ ಮದರಸ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳು ಹಾಗೂ ಪ್ರತಿಭಾ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಕಲಿಕೆ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಆಗಸ್ಟ್ 25ರಂದು ದರ್ಗಾ ಝಿಯಾರತ್ ನೆರವೇರಿಸುವ ಮೂಲಕ ಮೀಲಾದ್ ಜಾಥಾಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಎಂ.ಜೆ.ಎಂ. ಕಾರ್ಯದರ್ಶಿ ಹಾರಿಸ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಎಂ.ಜೆ.ಎಂ. ಖತೀಬ್ ಸಫ್ವಾನ್ ಜೌಹರಿ ಅಲ್-ಹಿಕಮಿ ಸಂದೇಶ ಭಾಷಣ ಮಾಡಿದರು.

ಬದರುಲ್ ಹುದಾ ಮದರಸ ಸದರ್ ಮುಅಲ್ಲಿಂ ಶಾಕಿರ್ ಉಸ್ತಾದ್, ಅಲ್ ಅಮೀನ್ ಗಲ್ಫ್ ಘಟಕದ ಅಧ್ಯಕ್ಷರಾದ ಸಾಹುಲ್ ಹಮೀದ್, ಮುಅಲ್ಲಿಂ ಇಬ್ರಾಹಿಂ ಉಸ್ತಾದ್ ಹಾಗೂ ಹಿರಿಯರಾದ ಉಮರ್ ಕುಂಞಿ ನಾಡ್ಜೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಬದರುಲ್ ಹುದಾ ಸೆಕೆಂಡರಿ ಮದರಸದ ಉಪನ್ಯಾಸಕರನ್ನು ಹಾಗೂ ಉಜಿರೆ ವ್ಯಾಪ್ತಿಯ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರೇಂಜ್ ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಎಂ.ಜೆ.ಎಂ ಉಪಾಧ್ಯಕ್ಷರಾದ ಹೈದರ್ ಮದನಿ, ಮೊಹಮ್ಮದ್ DFO, ಜೊತೆ ಕಾರ್ಯದರ್ಶಿ ಹಂಝ, ಖಾದರ್ ಎಸ್ಎ, ಮಾಜಿ ಅಧ್ಯಕ್ಷರಾದ ಬಿ.ಎಂ. ಹಮೀದ್, ಅಲ್ ಅಮೀನ್ ಯಂಗ್ ಮೆನ್ಸ್ ಅಧ್ಯಕ್ಷರು, ಎಂ.ಜೆ.ಎಂ ವ್ಯಾಪ್ತಿಯ (5 ಕರಿಯ) ಐದು ಜಮಾಅತ್‌ಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಕುತುಬಿಯತ್ ಕಮಿಟಿ ಅಧ್ಯಕ್ಷರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕೋಶಾಧಿಕಾರಿ ಮೊಹಮ್ಮದ್ ಸಅದಿ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಕ್ ವಿತರಿಸಲಾಯಿತು.

Related posts

ಮಚ್ಚಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿ ತೇಜೋವಧೆ: ಮಾಜಿ ಶಾಸಕ ಕೆ.ವಸಂತ ಬಂಗೇರ ಅಭಿಮಾನಿಗಳಿಂದ ಠಾಣೆಗೆ ದೂರು

Suddi Udaya

ಪುಂಜಾಲಕಟ್ಟೆ ಕೆ ಪಿ ಎಸ್ ಪ್ರೌಢಶಾಲಾ ವಿಭಾಗ ವಿದ್ಯಾರ್ಥಿ ಪರಿಷತ್ ರಚನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ಕಾರ್ಯಾಗಾರ

Suddi Udaya

ಶ್ರೀ ಧ. ಮಂ. ಕಾಲೇಜಿನಲ್ಲಿ ತುಳು ಜಾನಪದ ಮಹಾಕವಿ ಮಾಚಾರ್ ಗೋಪಾಲ ನಾಯ್ಕ ಸಂಸ್ಮರಣೆ ಮತ್ತು ತುಳುವ ಮೌಖಿಕ ಪರಂಪರೆ ವಿಷಯದ ಕುರಿತು ವಿಶೇಷ ಉಪನ್ಯಾಸ

Suddi Udaya

ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಮಲವಂತಿಗೆ ಗ್ರಾಮದ ಯುವಕ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya
error: Content is protected !!