23.7 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ  ಪದ್ಮುಂಜ ಸಹಕಾರಿ ಸಂಘ: ಮಹಾಸಭೆಯಲ್ಲಿ ಶೇ. 12 ಡಿವಿಡೆಂಡ್ ಘೋಷಿಸಿದ ಸಂಘದ ಅಧ್ಯಕ್ಷ  ರಕ್ಷಿತ್ ಪಣೆಕ್ಕರ

ಪದ್ಮುಂಜ: ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 50ನೇ ವರ್ಷದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಅಧ್ಯಕ್ಷತೆಯಲ್ಲಿ ಆ.26 ರಂದು ಸಂಘದ ರೈತ ಸಭಾಭವನದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಮಾತನಾಡಿ ನಮ್ಮ ಸಂಘವು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಕಳೆದ 50 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನಮ್ಮ ಸಂಘವು ಇಂದಿನ ಸ್ಪರ್ಧಾತ್ಮಕ ಪೈಪೋಟಿಯನ್ನು ಇತರ ಬ್ಯಾಂಕುಗಳೊಂದಿಗೆ ಮಾಡಿ ಉತ್ತಮ ಪ್ರಗತಿ ಹೊಂದಿದೆ. ಮೊಗ್ರು ಗ್ರಾಮದ ಮುರದಲ್ಲಿ ಸಂಘದ ಶಾಖೆ ತೆರೆಯುವ ಚಿಂತನೆ ಹಾಗೂ ಸುವರ್ಣ ಮಹೋತ್ಸವ ಅಂಗವಾಗಿ ಕಟ್ಟಡ ರಚನೆಗೊಳಿಸುವ ಉದ್ದೇಶ ಇರಿಸಲಾಗಿದೆ ಎಂದರು.

ವಾರ್ಷಿಕ ವಾಹಿವಾಟು:
ವರ್ಷಾಂತ್ಯದಲ್ಲಿ ಸಂಘವು ರೂ. 5.80 ಕೋಟಿ ಪಾಲು ಬಂಡವಾಳ, ರೂ 46.58 ಕೋಟಿ ಠೇವಣಿ ಹೊಂದಿರುತ್ತದೆ. ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ರೂ. 84.09 ಕೋಟಿ ಹೊರ ಬಾಕಿ ಸಾಲವಿದ್ದು, ವಾರ್ಷಿಕ ರೂ 485.02 ಕೋಟಿ ವ್ಯವಹಾರ ಮಾಡಿ, ವರದಿ ವರ್ಷ ರೂ 2.39 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 12% ಲಾಭಾಂಶ ನೀಡಲಾಗುವುದು ಎಂದು ತಿಳಿಸಿದ ಅವರು ಅಲ್ಲದೇ ಸತತ 34 ವರ್ಷಗಳಿಂದ ಲಾಭ ಪಡೆಯುತ್ತಿದ್ದು ಲೆಕ್ಕಪರಿಶೋಧನೆಯಲ್ಲಿ “ಎ” ಗ್ರೇಡ್ ಪಡೆದಿದೆ. ಈ ಸಾಧನೆಗೆ ಉಪಾಧ್ಯಕ್ಷರ ಹಾಗೂ ನಿರ್ದೇಶಕರುಗಳ ಮಾರ್ಗದರ್ಶನ, ಮುಖ್ಯ ಕಾರ್ಯನಿರ್ವಾ ಅಧಿಕಾರಿಗಳ ಹಾಗೂ ಸಿಬಂದಿಗಳ ಸಹಕಾರದಿಂದ ಸಹಕಾರಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸನ್ಮಾನ: ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಸನ್ಮಾನಿಸಲಾಯಿತು. ನಿಧನರಾದ ಸಿಬ್ಬಂದಿ ಚಿದಾನಂದ ಗೌಡ ಹಾಗೂ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಉಪಾಧ್ಯಕ್ಷ ಅಶೋಕ್‌ ಪಿ., ನಿರ್ದೇಶಕರಾದ ನಾರಾಯಣ ಗೌಡ, ಉದಯ ಬಿ.ಕೆ., ಶೀಲಾವತಿ, ಡೀಕಯ್ಯ ಗೌಡ, ದಿನೇಶ್ ನಾಕ್, ಶಾರದಾ ಆರ್. ರೖ.ಪ್ರಭಾಕರ ಗೌಡ, ಪ್ರಸಾದ್ ಎ., ಚಂದನ್ ಕುಮಾರ್ ಎ, ಮತ್ತು ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು. ನಿರ್ದೇಶಕರಾದ ಶೀಲಾವತಿ ಮಹಾಸಭೆ ತಿಳುವಳಿಕೆ ಪತ್ರ ವಾಚಿಸಿ, ಸಿಬಂದಿ ಪ್ರೀತಮ್ ಸಾಲಿಯಾನ್ ವಾರ್ಷಿಕ ವರದಿ ವಾಚಿಸಿ,  ಉದಯ ಭಟ್ ಕೆ. ಸ್ವಾಗತಿಸಿ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ ಬಿ. ನಿರೂಪಿಸಿದರು.

ಸಿಬ್ಬಂದಿಗಳಾದ , ವಿಠಲ ನೈಕ್ , ಜ್ಯೋತಿ, ಮಧುಶ್ರೀ, ಪ್ರೇಕ್ಷಿತ್ ಹೆಚ್ ಯು., ಸ್ಪಂದನ್ ಬಿ., ರಾಜವರ್ಮ ಇಂದ್ರ, ಗಣೇಶ್ ಹೆಚ್,  ರಕ್ಷಿತ್ ಆರ್.ಎಸ್. ಹಾಗೂ ವೀರಪ್ಪ ಸಹಕರಿಸಿದರು.

Related posts

ಗುರುವಾಯನಕೆರೆ: ಎಕ್ಸೆಲ್ ಕಾಲೇಜು ನೀಟ್ ಟಾಪರ್ ಮೌರ್ಯ ವೈ.ಡಿ.ಗೆ ಅದ್ಧೂರಿ ಸನ್ಮಾನ

Suddi Udaya

ಉಜಿರೆ: ಗುರಿಪಳ್ಳ ಅಂಬಡೆಬೆಟ್ಟು ನೂತನ ಸೇತುವೆ ಸಂಚಾರಕ್ಕೆ ಮುಕ್ತ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ

Suddi Udaya

ಮುಂಡಾಜೆ: ಚರಂಡಿಗೆ ಜಾರಿದ ಆಹಾರ ಉತ್ಪನ್ನಗಳ ಸಾಗಾಟದ ವಾಹನ

Suddi Udaya

ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಜ. 8ರಂದು ನಡೆಯುವ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ : ಮಾಜಿ ಶಾಸಕ
ವಸಂತ ಬಂಗೇರ

Suddi Udaya

ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು

Suddi Udaya
error: Content is protected !!