August 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಪಂಚದುರ್ಗಾ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟದ ಮಹಾಸಭೆ

ಕೊಯ್ಯೂರು: ಪಂಚದುರ್ಗಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೊಯ್ಯೂರು ಇದರ ವಾರ್ಷಿಕ ಮಹಾಸಭೆಯನ್ನು ಅಶ್ವಿನಿ ರವರ ಅಧ್ಯಕ್ಷತೆಯಲ್ಲಿ ಸ.ಹಿ.ಪ್ರಾ ಶಾಲೆ ಆದೂರುಪೆರಾಲ್ ಕೊಯ್ಯೂರಿನಲ್ಲಿ ನಡೆಸಲಾಯಿತು.

ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಾಲೂಕು‌ ಕಾರ್ಯಕ್ರಮ‌ ವ್ಯವಸ್ಥಾಪಕರಾದ ಶ್ರೀಮತಿ ಪ್ರತಿಮಾ‌ ಸಂಜೀವಿನಿ‌ ಯೋಜನೆಯ ಬಗ್ಗೆ ಸದಸ್ಯರಿಗೆ ಸಿಗುವಂತಹ ಸಾಲ ಸೌಲಭ್ಯಗಳು , ಸಂಜೀವೀನಿ ಯೋಜನೆಯ ಪ್ರಮುಖ ಉದ್ದೇಶದ ಬಗ್ಗೆ, ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣದ ಬಗ್ಗೆ‌ ಸಂಪೂರ್ಣ ಮಾಹಿತಿ ನೀಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸ್ತನ್ಯಪಾನ ಮತ್ತು ಮಾದಕ ವ್ಯಸನದ ಬಗ್ಗೆ ಮಾಹಿತಿಯನ್ನು ಸಿಹೆಚ್ ಒ ಗೀತಾರವರು ನೀಡಿದರು. ನಂತರ ತಲಾ 5 ವಾರ್ಡ್ಗಳಿಂದ ಒಬ್ಬ ಸದಸ್ಯರ ಹಾಗೆ 5 ಜನ ಸದಸ್ಯರು ಸಂಜೀವಿನಿ ಯೋಜನೆಗೆ‌ ಸೇರಿದ ನಂತರ ಸಂಜೀವಿನಿ ಯೋಜನೆಯಿಂದ ತಮಗೆ ಸಿಕ್ಕ‌ ಸೌಲಭ್ಯಗಳಿಂದ ತಮ್ಮಲ್ಲಿ ತಾವು ಕಂಡುಕೊಂಡ ಆರ್ಥಿಕ ಬದಲಾವಣೆ, ಯೋಜನೆಯ‌ ಕಡಿಮೆ ಬಡ್ಡಿ ದರದ‌ ಬಗ್ಗೆ ಹಾಗೂ ಒಕ್ಕೂಟ ಹಾಗೂ‌ ಸಿಬ್ಬಂದಿಗಳ ಮಾರ್ಗದರ್ಶನವನ್ನು ತಮ್ಮ ಅನಿಸಿಕೆ‌ ರೂಪದಲ್ಲಿ‌ ವ್ಯಕ್ತಪಡಿಸಿದರು. ಸದಸ್ಯರಿಗೆ‌ ಸಂಜೀವಿನಿ ‌ಯೋಜನೆಗೆ‌ ಸಂಬಂಧಿಸಿದಂತೆ ರಸಪ್ರಶ್ನೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ‌ ನೀಡಿ ಗೌರವಿಸಲಾಯಿತು.


ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರಾದ ಜಯಾನಂದ‌ ನಡೆಸಿಕೊಟ್ಟರು.
ನಿರ್ಗಮಿತ ಪದಾಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ಮಾತೃಶ್ರೀ ಸಂಘದ‌ ಸದಸ್ಯೆ ನಾಟಿ ವೈದೈ ಅಪ್ಸಾ ಹಾಗೂ ರಾಷ್ಟ್ರೀಯ ‌ಸರಸ್ ಮೇಳದಲ್ಲಿ ಭಾಗವಹಿಸಿದ ವಿಜಯ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಆರ್ಥಿಕ ಸಾಕ್ಷರತಾ ಸಮಾಲೋಚಕಿ ಉಷಾ ಕಾಮತ್ ವಿಮಾ‌ ಯೋಜನೆಗಳ ಬಗ್ಗೆ, ಪಿಂಚಣಿ ಬಗ್ಗೆ ,ಕೆನಾರ ಏಂಜಲ್ ಅಕೌಂಟ್ ನ ಮಹತ್ವ ಹಾಗೂ ಇತ್ತೀಚಿನ ದಿನಗಳಲ್ಲಿ ನಡೆಯುವ ಸೈಬರ್ ಕ್ರೈಮ್ ನ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟ ಅಧ್ಯಕ್ಷರಾದ ಅಶ್ವಿನಿ ಮಾತಾನಾಡಿ‌ ನೂತನ‌ ಅಧ್ಯಕ್ಷರ ಮತ್ತು‌ಸದಸ್ಯರ‌ ಜವಬ್ದಾರಿ ಕರ್ತವ್ಯದ ಬಗ್ಗೆ ಹಾಗೂ‌ ನೂತನ‌ ಪದಾದಿಕಾರಿಗಳು ಒಕ್ಕೂಟವನ್ನು ಇನ್ನೂ ಒಳ್ಳೆಯ ರೀತಿಯಲ್ಲಿ ಮುಂದುವರೆಸುವಂತೆ ಸಂಘದ‌ ಸದಸ್ಯರ‌ ಸಹಕಾರವನ್ನು ಬಯಸಿದರು.


BRP- EP. ತಾರಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. Lcrp ಪೂರ್ಣಿಮಾ ಸ್ವಾಗತಿಸಿ, ಒಕ್ಕೂಟದ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನೆ ವರದಿಯನ್ನು ಶುಭಲಕ್ಷ್ಮಿ ಸಭೆಯಲ್ಲಿ ಮಂಡಿಸಿದರು ಸಭೆಯಿಂದ ಅನುಮೋದನೆ ಪಡೆಯಲಾಯಿತು. ಕಾರ್ಯಕ್ರಮವನ್ನು‌ ಸಂಘದ ಸದಸ್ಯೆ‌ ಗೀತಾ‌‌ ನಿರೂಪಿಸಿ ,ಕೃಷಿ ಸಖಿ‌ ದಿವ್ಯಾ ಧನ್ಯವಾದ ನೀಡಿದರು. ಸದಸ್ಯರ ಬಿಪಿ ಶುಗರ್ ಪರೀಕ್ಷೆಯನ್ನು CHO ಹಾಗೂ ಆಶಾ ಕಾರ್ಯಕರ್ತೆ ನೇರವೇರಿಸಿ ಕೊಟ್ಟರು.

Related posts

ಸುಲ್ಕೇರಿ ಕುಲಾಲ ಕುಂಭಶ್ರೀ ಸಂಘದ ಅಧ್ಯಕ್ಷರಾಗಿ ಜಯ ಮೂಲ್ಯ , ಕಾರ್ಯದರ್ಶಿಯಾಗಿ ರಾಕೇಶ್ ಕುಲಾಲ್ ಆಯ್ಕೆ

Suddi Udaya

ಶಿಲಾ೯ಲು : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಣಿಯೂರು ವಲಯದ ಮೈರೋಲ್ತಡ್ಕ, ಮೊಗ್ರು, ಬಂದಾರು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಶುಭರಾಜ್ ಬಂಧನ

Suddi Udaya

ದಾರುಸ್ಸಲಾಂ ಕ್ಯಾಂಪಸ್ಸ್ ನಲ್ಲಿ ಲೈಬ್ರರಿ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

Suddi Udaya

ಓಡಿಲ್ನಾಳ ಸ.ಉ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!