34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವದ ಪೂರ್ವಭಾವಿ ಸಭೆ

ಬೆಳ್ತಂಗಡಿ : ಆ.29 ರಿಂದ ಆ.31 ರವರೆಗೆ ಬೆಳ್ತಂಗಡಿ ಲಾಯಿಲದಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯುವ ಆರಾಧನ ಮಹೋತ್ಸವದ ಪೂರ್ವಭಾವಿ ಸಭೆ ರಾಯರ ಮಠದಲ್ಲಿ ಆ.25ರಂದು ಶ್ರೀ ಪೀತಾಂಬರ ಹೇರಾಜೆಯವರ ಅಧ್ಯಕ್ಷತೆಯಲ್ಲಿ ಜರಗಿತು.

ಅವರು ಮಾತನಾಡುತ್ತಾ ಊರ ಪರ ಊರಿನಿಂದ ಹೆಚ್ಚಿನ ಭಕ್ತರು ದಕ್ಷಿಣದ ಕಿರು ಮಂತ್ರಾಲಯ ಎಂಬ ಹೆಗ್ಗಳಿಕೆಗೆ ಪಾತ್ರ ವಾದ ರಾಯರ ಮಠಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು. ಆ.30 ರಂದು ಮಧ್ಯಾಹ್ನ 11 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿರುವುದಾಗಿ ಅವರು ತಿಳಿಸಿದರು.


2026 ನೇ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದೆಂದು ಪ್ರೊ. ಡಾ ಬಿ ಎ ಕುಮಾರ ಹೆಗ್ಡೆ ಮತ್ತು ಪ್ರೊ. ಎ ಕೃಷ್ಣಪ್ಪ ಪೂಜಾರಿಯವರು ತಿಳಿಸಿದರು.


ಕಾರ್ಯದರ್ಶಿ ವಸಂತ ಸುವರ್ಣ ಪ್ರಸ್ತಾವಿಸಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿ ಸೋಮೇಗೌಡ, ಶ್ರೀಮತಿ ಉಮಾ ರಾವ್, ಶ್ರೀಮತಿ ಸುಶೀಲಾ ಹೆಗ್ಡೆ, ಮಂಜುನಾಥ ರೈ, ಕೃಷ್ಣ ಶೆಟ್ಟಿ, ಜಯಂತ ರಾಘವೇಂದ್ರ ನಗರ, ಶ್ರೀಮತಿ ಸುಧಾಮಣಿ ರಮಾನಂದ, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕೋಶಾಧಿಕಾರಿ ಶ್ರವಣ್ ರಾಜ್ ವಂದಿಸಿದರು.

Related posts

ಜು.29ರಿಂದ ಸೆ.14ರವರೆಗೆ ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆ: ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತಾಚರಣೆ: ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆಟೋ ಚಾಲಕ- ಮಾಲಕ ಸಂಘದ ಮಾಜಿ ಅಧ್ಯಕ್ಷ ಶಿವಯ್ಯ ಪೂಜಾರಿ ನಿಧನ

Suddi Udaya

ಉಜಿರೆ ರತ್ನಮಾನಸದಲ್ಲಿ “ಆಟಿದ ಅಟಿಲ್ ” ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ

Suddi Udaya

ಬೆಳ್ತಂಗಡಿ : ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

Suddi Udaya

ನಡ ಗ್ರಾಮ ಪಂಚಾಯಿತಿಯ ಮಕ್ಕಳ ವಿಶೇಷ ಗ್ರಾಮ ಸಭೆ

Suddi Udaya
error: Content is protected !!