26.5 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಸಭೆ: ರೂ. 655 ಕೋಟಿ ವ್ಯವಹಾರ, ರೂ 5.05 ಕೋಟಿ ನಿವ್ವಳ ಲಾಭ, ಸದಸ್ಯರಿಗೆ ಶೇ 18% ಡಿವಿಡೆಂಟ್

ಗುರುವಾಯನಕರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು, ದ.ಕ. ಹಾಗೂ ಉಡುಪಿ ಜಿಲ್ಲೆಯ ಪತ್ತಿನ ಸಹಕಾರಿ ಸಂಘಗಳ ಮುಂಚೂಣಿಯಲ್ಲಿರುವ ಸಂಘಗಳ ಪೈಕಿ ಒಂದಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ರೂ 655 ಕೋಟಿ ವ್ಯವಹಾರ ನಡೆಸಿ, ರೂ. 5 ಕೋಟಿ ರೂ.ಗಿಂತ ಹೆಚ್ಚಿನ ಲಾಭಗಳಿಸಿದ್ದು ಸದಸ್ಯರಿಗೆ ಶೇ‌18 % ಡಿವಿಡೆಂಟ್ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಹೇಳಿದರು.

ಅವರು ಆ. 26ರಂದು ಗುರುವಾಯನಕೆರೆಯ ಕೇಂದ್ರ ಕಚೇರಿಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಸೊಸೈಟಿಯು ಪ್ರಸ್ತುತ ಸುಮಾರು 36 ಸಾವಿರಕ್ಕೂ ಮಿಕ್ಕಿದ ಸದಸ್ಯರನ್ನು ಹೊಂದಿದೆ. ಎರಡು ತಿಂಗಳಲ್ಲಿ ಎರಡು ಬ್ರಾಂಚ್ ಓಪನಿಂಗ್ ಮಾಡುತ್ತಿದ್ದೇವೆ. ಆರಂಬೋಡಿ, ಸಿದ್ದಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು ಎಂದರು.

ವೇದಿಕೆಯಲ್ಲಿ ನಿರ್ದೇಶಕರಾದ ಎಸ್. ಜಯರಾಮ ಶೆಟ್ಟಿ, ಬಿ.ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಹೆಚ್., ರಘುರಾಮ ಶೆಟ್ಟಿ ಎ., ಕೃಷ್ಣ ರೈ ಟಿ., ಜಯರಾಮ ಭಂಡಾರಿ ಎಂ‌, ಪುರಂದರ ಶೆಟ್ಟಿ,ಮಂಜುನಾಥ ರೈ,ರಾಜು ಶೆಟ್ಟಿ, ಜಯರಾಮ ಶೆಟ್ಟಿ, ಸಾರಿಕಾ ಶೆಟ್ಟಿ, ವಿಜಯಾ ಬಿ‌ ಶೆಟ್ಟಿ, ಖಾಯಂ ಆಹ್ವಾನಿತರಾದ ರಾಜೇಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು.

ಸೊಸೈಟಿ ಸಿಬ್ಬಂದಿಗಳು ಪ್ರಾರ್ಥನೆಗೈದರು.ಉಪಾಧ್ಯಕ್ಷ ಜಯಂತ ಶೆಟ್ಟಿ ಸ್ವಾಗತಿಸಿದರು. ಸಿಇಒ ಸುಜಯ್ ಶೆಟ್ಟಿ ವರದಿ ವಾಚಿಸಿದರು.ನಿರ್ದೇಶಕ ಪುಷ್ಪರಾಜ್ ಶೆಟ್ಟಿ ವಂದಿಸಿದರು. ಸಿಬ್ಬಂದಿಗಳು ಮತ್ತು ಸದಸ್ಯರು ಸಹಕರಿಸಿದರು.

Related posts

ಜಿಲ್ಲೆಯಾಧ್ಯಂತ ಸಂಚರಿಸಲಿರುವ “ವಿಜಯ ಸಂಕಲ್ಪ ಯಾತ್ರೆ” : ಬೆಳ್ತಂಗಡಿ ಶ್ರೀ ಕುತ್ಯಾರು ದೇವಸ್ಥಾನ ಬಳಿಯಿಂದ ಲಾಯಿಲಾದ ವರೆಗೆ ಬೃಹತ್ ರೋಡ್ ಶೋ ಹಾಗೂ ಬೈಕ್ ಜಾಥಾ

Suddi Udaya

ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ ಅತ್ಯಾಚಾರ‌ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಆಗ್ರಹ

Suddi Udaya

ಬಂಗಾಡಿ-ಕೊಲ್ಲಿ ಒಂದು ವಾರದಿಂದ 3 ಫೇಸ್ ವಿದ್ಯುತ್ ಇಲ್ಲದೆ ಕೃಷಿಕರಿಗೆ ಸಂಕಷ್ಟ: ಕೂಡಲೇ ಕ್ರಮ ಕೈಗೊಳ್ಳುವಂತೆ ತಾ.ಪಂ ಮಾಜಿ ಅಧ್ಯಕ್ಷ ಮುಕುಂದ ಸುವರ್ಣ ಆಗ್ರಹ

Suddi Udaya

ಉಜಿರೆ ಎಸ್ ಡಿ ಎಮ್ ಪ. ಪೂ. ಕಾಲೇಜು : ಎನ್ ಎಸ್ ಎಸ್ ಸ್ವಯಂ ಸೇವಕರಿಗೆ ಜಲ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಕನ್ಯಾಡಿ ಸ.ಉ.ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಪೆರಿಂಜೆ ನಿವಾಸಿ ರಾಘು ಪೂಜಾರಿ ನಿಧನ

Suddi Udaya
error: Content is protected !!