23.7 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರತ್ನಮಾನಸ ವಿದ್ಯಾರ್ಥಿ ನಿಲಯಕ್ಕೆ ತಾಲೂಕು ಆರೋಗ್ಯ ಅಧಿಕಾರಿಗಳೊಂದಿಗೆ ಸರಕಾರಿ ವೈದ್ಯಾಧಿಕಾರಿಗಳು ಭೇಟಿ

ಉಜಿರೆ: ಇಲ್ಲಿಯ ರತ್ನಮಾನಸ ವಿದ್ಯಾರ್ಥಿ ನಿಲಯಕ್ಕೆ ತಾಲೂಕು ಆರೋಗ್ಯಾಧಿಕಾರಿ ಸಂಜತ್ ವೈದ್ಯ ಅಧಿಕಾರಿ ಡಾ. ವೆಂಕಟಸ್ವಾಮಿ ( ಸ್ತ್ರೀ ರೋಗ ತಜ್ಞರು) ಹಾಗೂ ಡಾ.ರಾಘವೇಂದ್ರ ಶಸ್ತ್ರಚಿಕಿತ್ಸೆ ತಜ್ಞರು ಭೇಟಿ ನೀಡಿದರು.

ಸ್ತ್ರೀ ರೋಗ ತಜ್ಞರಾದ ಡಾ.ವೆಂಕಟ ಸ್ವಾಮಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಣವನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿ ಮಾರ್ಗದರ್ಶನವನ್ನು ನೀಡಬೇಕು . ಅವರು ತನ್ನ ಬಾಲ್ಯದ ಹಾಸ್ಟೆಲ್ ಜೀವನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ತಾಲೂಕು ಅಧಿಕಾರಿಯಾದ ಸಂಜಾತ ಮಾತನಾಡಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆಯ ಪ್ರಾತ್ಯಕ್ಷಿಕೆಯನ್ನು ನೀಡಿ ಆರೋಗ್ಯ ಸಂರಕ್ಷಣೆ ಬಗ್ಗೆ ತಿಳಿಸಿದರು

ರತ್ನಮಾನಸ ನಿಲಯದ ಪಾಲಕರಾದ ಯತೀಶ್ ಕೆ ಬಳಂಜ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು . ವೇದಿಕೆಯಲ್ಲಿ ಭಜನ ತರಬೇತುದಾರರಾದ ನಾಗೇಶ್ ನೇರಿಯ ಹಾಗೂ ರತ್ನಮಾನಸದ ಅಧ್ಯಾಪಕರಾದ ರವಿಚಂದ್ರ ಹಾಗೂ ಉದಯರಾಜ್ ,ದೀಪಕ್ ಹಾಗೂ ರತ್ನಮಾನಸ ದ ಹಿರಿಯ ವಿಧ್ಯಾರ್ಥಿ ಗಣೇಶ್ ಉಪಸ್ಥಿತರಿದ್ದರು . ರತ್ನ ಮಾನಸದ ವಿದ್ಯಾರ್ಥಿಗಳ ಜೀವನ ಶಿಕ್ಷಣಗಳ ಬಗ್ಗೆ ತಿಳಿದು ಶ್ಲಾಘನೆ ವ್ಯಕ್ತಪಡಿಸಿದರು.

Related posts

ಗೃಹಲಕ್ಷ್ಮೀ ಯೋಜನೆ: ಬ್ಯಾಂಕ್‌ಖಾತೆಗೆ ಆಧಾರ್ ಜೋಡಣೆ ಪರಿಶೀಲನೆ ; ಕೊಕ್ಕಡ ಗ್ರಾ.ಪಂದಲ್ಲಿ ನಡೆದ ಕಾರ್ಯಕ್ರಮದ ಮಾಹಿತಿ ನೀಡದಿರುವುದನ್ನು ವಿರೋಧಿಸಿ, ಪಂಚಾಯತು ಎದುರು ಅಧ್ಯಕ್ಷ-ಉಪಾಧ್ಯಕ್ಷ ಸದಸ್ಯರ ಪ್ರತಿಭಟನೆ

Suddi Udaya

ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಕುತ್ಲೂರು ಸ.ಉ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ

Suddi Udaya

ಬೆಳ್ತಂಗಡಿ ಪ.ಪಂ. ನಾಲ್ಕನೇ ವಾರ್ಡಿನ ಹಿಂದೂ ರುದ್ರ ಭೂಮಿಗೆ ರೂ 40 ಲಕ್ಷ ವೆಚ್ಚದಲ್ಲಿ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಚಾರ್ಮಾಡಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಾತೃ ಮಂಡಳಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆಳ್ತಂಗಡಿಯಲ್ಲಿ ಹೊಸ ಪ್ರಯತ್ನವೊಂದಕ್ಕೆ ಹೆಜ್ಜೆ, ಬೆಳ್ತಂಗಡಿ ನೈಟ್ಸ್ – 2025 , ಫುಡ್ ಫೆಸ್ಟಿವಲ್ ಮತ್ತು ಮ್ಯೂಸಿಕಲ್ ನೈಟ್

Suddi Udaya
error: Content is protected !!