26.5 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ 517 ಕೋಟಿ ವ್ಯವಹಾರ,ರೂ 2.12 ಕೋಟಿ ನಿವ್ವಳ ಲಾಭ, ಸದಸ್ಯರಿಗೆ ಶೇ 13 ಡಿವಿಡೆಂಟ್

ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಳದಂಗಡಿ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಇವರ ಅಧ್ಯಕ್ಷತೆಯಲ್ಲಿ ನಮನ ಸಭಾಭವನದಲ್ಲಿ ಆ 27 ರಂದು ನಡೆಯಿತು.

ಬಳಿಕ ರಾಕೇಶ್ ಹೆಗ್ಡೆ ಅವರು ಮಾತನಾಡಿ ಆರ್ಥಿಕ ವರ್ಷದಲ್ಲಿ ಸಂಘವು ರೂ 517 ಕೋಟಿ ವ್ಯವಹಾರ ನಡೆಸಿ,ರೂ 2.12 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 13 ಡಿವಿಡೆಂಟ್ ನೀಡಲಾಗುವುದು.ಸಹಕಾರವೇ ಶಕ್ತಿ,ಸದಸ್ಯರ ವಿಶ್ವಾಸವೇ ಸಂಘದ ಯಶಸ್ಸು ಎಂದರು.

ಸೊಸೈಟಿಯು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು,ಎಲ್ಲರ ಸಹಕಾರ ಮುಖ್ಯವಾಗಿದೆ. ಸುವರ್ಣ ಸಂಭ್ರಮದ ಪ್ರಯುಕ್ತ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಉಪಾಧ್ಯಕ್ಷ ಜನಾರ್ಧನ,ನಿರ್ದೇಶಕರಾದ ಗುರುಪ್ರಸಾದ್ ,ವಿಶ್ವನಾಥ ಹೊಳ್ಳ,ಹೇಮಂತ್, ದೇವಿಪ್ರಸಾದ್ ಶೆಟ್ಟಿ, ದಿನೇಶ್ ಪಿಕೆ,ದೇಜಪ್ಪ ಪೂಜಾರಿ, ಕೊರಗಪ್ಪ, ಸುಂದರಿ, ಮಮತಾ, ಧರ್ಣಪ್ಪ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು.

ಅಧ್ಯಕ್ಷ ರಾಕೇಶ್ ಹೆಗ್ಡೆ ಸ್ವಾಗತಿಸಿದರು. ಸಿಇಓ ಮೀರಾ ವರದಿ ವಾಚಿಸಿದರು.ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಕೆ, ಸಿಬ್ಬಂದಿಗಳಾದ ಪ್ರಶಾಂತ್ ಎಸ್, ಭರತ್ ರಾಜ್,ಎನ್.ಜಗದೀಶ್ ಶೆಟ್ಟಿ, ಮಮತಾ, ಸಂತೋಷ ಎ, ಹರೀಶ ನಾಯ್ಕ, ಯತೀಶ, ದಿನೇಶ್ ಬಿ, ಪ್ರವೀಣ, ಶ್ರೀದೇವಿ, ಸುಮಲತಾ ಹಾಗೂ ಸದಸ್ಯರು ಸಹಕರಿಸಿದರು.

Related posts

ಬೆನಕ ಆಸ್ಪತ್ರೆಯಲ್ಲಿ ‘ಡಿ ‘ಲೆವೆಲ್‌ ಐಸಿಯು ಸೌಲಭ್ಯ ಮತ್ತು ಸಂಪೂರ್ಣ ಶೈತ್ಯಾಗಾರವಿರುವ ಆಂಬುಲೆನ್ಸ್‌ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ

Suddi Udaya

ಕೇಂದ್ರದಲ್ಲಿ ಎನ್ ಡಿ ಎ ಬಿಜೆಪಿ ಮೋದಿ ಸರಕಾರ 10ನೇ ವರ್ಷಕ್ಕೆ ಪಾದಾರ್ಪಣೆ :ಪ್ರತಾಪಸಿಂಹ ನಾಯಕ್

Suddi Udaya

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮುಂಡಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನ ನೀಡಿದ ಮಂಜೂರಾತಿ ಪತ್ರ ವಿತರಣೆ

Suddi Udaya

ಸಬ್ ಸ್ಟೇಷನ್ಗಳನ್ನು ನಿರ್ಮಿಸಿ ಬೆಳ್ತಂಗಡಿ ತಾಲೂಕಿನ ಜನರಿಗೆ ನಿರಂತರವಾಗಿ ವಿದ್ಯುತ್ ಪೂರೈಸಲು ಸಮಸ್ಯೆಯಾಗದಂತೆ ಅಭಿವೃದ್ದಿ ಪಡಿಸಬೇಕೆಂದು ಶಾಸಕ ಹರೀಶ್ ಪೂಂಜರಿಂದ ಇಂಧನ ಸಚಿವರಿಗೆ ಮನವಿ

Suddi Udaya
error: Content is protected !!