32.5 C
ಪುತ್ತೂರು, ಬೆಳ್ತಂಗಡಿ
October 15, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪುರಸ್ಕೃತ ಶಾಸಕ ಹರೀಶ್‌ ಪೂಂಜರಿಗೆ ತಾಲೂಕು ಒಕ್ಕಲಿಗ ಸಮುದಾಯದಿಂದ ಗೌರವಾರ್ಪಣೆ

ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಸಮಾಜದ ಬಂಧುಗಳಿಂದ ಬೆಸ್ಟ್ ಎಂಎಲ್‌ಎ ಪ್ರಶಸ್ತಿ ಪಡೆದ ಶಾಸಕ ಹರೀಶ್ ಪೂಂಜರನ್ನು ಅವರ ನಿವಾಸಕ್ಕೆ ಭೇಟಿ ನೀಡಿ ಗೌರವಿಸಲಾಯಿತು.

ಕಳೆದ 8 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನವನ್ನು ತಂದು ಸರ್ವರನ್ನು ಒಂದೇ ಭಾವದಿಂದ ನೋಡಿಕೊಂಡು ಪಶ್ಚಿಮ ಮಲೆನಾಡಿನ ಅತಿ ದೊಡ್ಡ ತಾಲೂಕನ್ನು ಮಾದರಿ ಕ್ಷೇತ್ರವಾಗಿ ರೂಪಿಸುವಲ್ಲಿ ಶ್ರಮಿಕಾನಾಗಿ ಕೆಲಸ ಮಾಡುತ್ತಿದ್ದು, ಎಲ್ಲಾ ಸಮುದಾಯದ ಜೊತೆಗೆ ತಾಲೂಕಿನ ಒಕ್ಕಲಿಗ ಸಮಾಜದ ಹಾಗೂ ಸಮುದಾಯದ ಬಂಧುಗಳ ಅಭಿವೃದ್ಧಿಗೆ ಎಕಾ ಮನಸ್ಸಿನಿಂದ ಕೆಲಸಮಾಡುವ ಜೊತೆಗೆ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಶಾಸಕ ಹರೀಶ್ ಪೂಂಜರು ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಸಮುದಾಯವು ಶಾಸಕರ ತಾಲೂಕಿನಾದ್ಯಂತ ನಿರಂತರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕೆಲಸಗಳಿಗೆ ಬೆಂಬಲವನ್ನು ನೀಡುವುದರ ಜೊತೆಗೆ ಮುಂದೆಯೂ ಒಕ್ಕಲಿಗ ಸಮಾಜ ತಮ್ಮ ಜೊತೆಯಲ್ಲಿ ಇದ್ದು ಇನ್ನಷ್ಟು ಅತ್ಯುನ್ನತ ಗೌರವ ಪ್ರಶಸ್ತಿಗಳು ರಾಜಕೀಯ ಜೀವನದಲ್ಲಿ ಇನ್ನಷ್ಟು ಅತ್ಯುನ್ನತ ಗೌರವ ಸಿಗಲಿ ಎಂದು ಶ್ರೀ ಕಾಲಭೈರವೇಶ್ವರ ಸ್ವಾಮಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ತಾಲೂಕಿನ ಸಹಸ್ರಾರು ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದ ಬಂಧುಗಳು ಆಗಮಿಸಿ ಮಾನ್ಯ ಶಾಸಕರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ತಾಲೂಕಿನ ಒಕ್ಕಲಿಗ ಸಮಾಜದ ಪ್ರತಿಯೊಬ್ಬ ಬಂಧುಗಳಿಗೂ ತನ್ನಿಂದ ಯಾವಾಗಲೂ ಸಹಕಾರ ಇರುತ್ತದೆ ಜೊತೆಗೆ ಗೌರವ ಅರ್ಪಣೆ ಸಲ್ಲಿಸಿದ ಎಲ್ಲಾರಿಗೂ ವಂದನೆಗಳನ್ನು ಸಲ್ಲಿಸಿದರು.

Related posts

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

Suddi Udaya

ಬರೆಂಗಾಯ ಶ್ರೀ ವನದುರ್ಗಾ ಮಾತೃ ಮಂಡಳಿ ವತಿಯಿಂದ ವರಮಹಾಲಕ್ಷ್ಮಿ ಪೂಜೆ

Suddi Udaya

ಉಜಿರೆ : ಹಲಕ್ಕೆ ನಿವಾಸಿ ಫ್ಲೋರಿನ್ ರೆಬೆಲ್ಲೋ ನಿಧನ

Suddi Udaya

ಭಾರತೀಯ ಲೆಕ್ಕ ಪರಿಶೋಧಕರ ಸಂಘದಿಂದ ಸಿಎ ಸಾಧಕಿ ನಿರೀಕ್ಷಾ ಎನ್.ನಾವರರಿಗೆ ಗೌರವಾರ್ಪಣೆ

Suddi Udaya

ಮೇಲಂತಬೆಟ್ಟು ಗ್ರಾಮ ಪಂಚಾಯತ್ ಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ರಥ

Suddi Udaya

ಜೂ.30: ಅಳದಂಗಡಿ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಹರೀಶ್ ರೈ ವಯೋನಿವೃತ್ತಿ

Suddi Udaya
error: Content is protected !!