32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿವೃತ್ತ ಶಿಕ್ಷಕ ಶಂಕರ್ ಎನ್. ತಾಮನ್ಕರ್ ಅವರಿಂದ ರೂ.47 ಸಾವಿರ ಧನಸಹಾಯ

ಮುಂಡಾಜೆ: ನಿವೃತ್ತ ಶಿಕ್ಷಕ ಹಾಗೂ ಕವಿ ಶಂಕರ್ ಎನ್. ತಾಮನ್ಕರ್ ಅವರು ತಮ್ಮ ತಂದೆ ದಿ. ನಾರಾಯಣ ತಾಮನ್ಕರ್ ಅವರ ಸ್ಮರಣಾರ್ಥ ಪ್ರತಿವರ್ಷ ನೀಡುವ ಶೈಕ್ಷಣಿಕ ಹಾಗೂ ಆರೋಗ್ಯ ಸಹಾಯದ ಅಂಗವಾಗಿ ಈ ಬಾರಿ ಎಂಟು ಅರ್ಹ ಫಲಾನುಭವಿಗಳಿಗೆ ಒಟ್ಟು ರೂ.47 ಸಾವಿರ ಧನಸಹಾಯವನ್ನು ವಿತರಿಸಿದರು.

ಆ.2ರಂದು ಊರಿನ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ವಿದ್ಯಾರ್ಥಿಗಳಿಗೆ ತಲಾ ರೂ.5 ಸಾವಿರದಂತೆ ಶೈಕ್ಷಣಿಕ ನೆರವು ನೀಡಲಾಯಿತು. ಉಳಿದ ರೂ.17 ಸಾವಿರವನ್ನು ಸಮಾಜ ಸೇವಾ ಸಂಸ್ಥೆಗಳಿಗೆ ಸಹಾಯಧನವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಅರೆಕ್ಕಲ್ ರಾಮಚಂದ್ರ ಭಟ್, ರಾಘವೇಂದ್ರ ತಾಮನ್ಕರ್, ನಾಮದೇವ ರಾವ್ ಸೇರಿದಂತೆ ತಾಮನ್ಕರ್ ಕುಟುಂಬದ ಬಂಧುಗಳು ಉಪಸ್ಥಿತರಿದ್ದರು.

ಶಂಕರ್ ಎನ್. ತಾಮನ್ಕರ್ ಅವರ ಸಮಾಜಮುಖಿ ಹಾಗೂ ಉದಾತ್ತ ಕಾರ್ಯವು ಇತರರಿಗೂ ಮಾದರಿಯಾಗಲಿ ಎಂದು ಗಣ್ಯರು ಹಾರೈಸಿದರು.

Related posts

ಗೇರುಕಟ್ಟೆ: ಸುಣ್ಣಲಡ್ಡದಲ್ಲಿ ತಡರಾತ್ರಿ ಮನೆಗೆ ನುಗ್ಗಿ ನಗದು ಕಳ್ಳತನ: ಬೆಳ್ತಂಗಡಿ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ತನಿಖೆ

Suddi Udaya

ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸೆ.10: ಗುರುವಾಯನಕೆರೆ ಎಕ್ಸೆಲ್ ಪ. ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುನಮನ: ಎಕ್ಸೆಲ್ ನ ವಿದ್ಯಾರ್ಥಿಗಳ ಪಾಲಕರಾದ 272 ಶಿಕ್ಷಕರಿಗೆ ಗೌರವಾರ್ಪಣೆ

Suddi Udaya

ಕುತ್ಲೂರು ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯೆಯರಿಗೆ ಮಲ್ಲಿಗೆಯ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಹರೀಶ್ ಸಾಲ್ಯಾನ್, ಉಪಾಧ್ಯಕ್ಷರಾಗಿ ಆನಂದ ಗೌಡ ಬಿ ಆಯ್ಕೆ

Suddi Udaya

ಬಹುಮುಖ ಪ್ರತಿಭೆ ವಿದುಷಿ ಸಹನಾ ಎಂ. ಶೆಟ್ಟಿ ಭರತನಾಟ್ಯ ರಂಗಪ್ರವೇಶ

Suddi Udaya
error: Content is protected !!