25.5 C
ಪುತ್ತೂರು, ಬೆಳ್ತಂಗಡಿ
October 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ರೂ.10.88 ಲಕ್ಷ ಲಾಭ-ಶೇ.68 ಬೋನಸ್, ಶೇ.25 ಡಿವಿಡೆಂಡ್ ಘೋಷಣೆ

ಬೆಳ್ತಂಗಡಿ: ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯು ಆ.29ರಂದು ಸಂಘದ ವಠಾರದಲ್ಲಿ ಅಧ್ಯಕ್ಷ ಬಿ. ನಿರ್ಮಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಬಿ. ನಿರ್ಮಲ್ ಕುಮಾರ್ ಮಾತನಾಡಿ ಹಾಲು ಉತ್ಪಾದಕರು ಸಂಘದ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸುತ್ತಿರುವುದರಿಂದ ಸಂಘ ಉತ್ತಮ ಪ್ರಗತಿ ಸಾಧಿಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘವು ರೂ.10,88,554 ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.68 ಬೋನಸ್ ಹಾಗೂ ಶೇ.25 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಯ ಶ್ರಮದಿಂದ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.

ಹಿರಿಯ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಮಾತನಾಡಿ ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು, ಜಾನುವಾರುಗಳ ಆರೋಗ್ಯ ಮತ್ತು ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ಹಾಲಿನ ಉತ್ಪಾದನೆ ಹೆಚ್ಚಿಸಬಹುದು. ಹೈನುಗಾರಿಕೆ ರೈತರಿಗೆ ನಿರಂತರ ಆದಾಯದ ಮೂಲವಾಗಿದ್ದು, ಸಂಘದ ಮೂಲಕ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಗಣೇಶ್ ಕುಂದರ್, ನಿರ್ದೇಶಕರಾದ ಧರ್ಣಪ್ಪ ಪೂಜಾರಿ, ಸುರೇಶ್ ಶೆಟ್ಟಿ, ಪುರುಷೋತ್ತಮ, ದಯಾನಂದ ದೇವಾಡಿಗ, ದಿನೇಶ್ ಮೂಲ್ಯ, ದಯಾನಂದ ಶೆಟ್ಟಿ, ತಿಮ್ಮಪ್ಪ, ಗುಮ್ಮಣ್ಣ ನಾಯ್ಕ, ದೀಪಾ, ಹೇಮಾವತಿ, ಸಿಇಒ ಧರಣೇಂದ್ರ ಕುಮಾರ್ ಉಪಸ್ಥಿತರಿದ್ದರು.
ಹಾಲು ಪರೀಕ್ಷಕ ಶರತ್, ಬಿಎಂಸಿ ಸಹಾಯಕ ನವೀನ್ ಹೆಗ್ಡೆ ಹಾಗೂ ಸಂಘದ ಸದಸ್ಯರು ಸಹಕರಿಸಿದರು.


ಸದಸ್ಯರ ಸಹಕಾರದಿಂದ ಸಂಘದ ಪ್ರಗತಿ: ನಿರ್ಮಲ್ ಕುಮಾರ್
ಸಂಘದ ಅಭಿವೃದ್ಧಿಯಲ್ಲಿ ಹಾಲು ಉತ್ಪಾದಕರ ಪಾತ್ರ ಮಹತ್ವದ್ದಾಗಿದೆ. ಸದಸ್ಯರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಸದಸ್ಯರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಗುರಿ ಹೊಂದಿದ್ದೇವೆ ಎಂದು ಅಧ್ಯಕ್ಷ ನಿರ್ಮಲ್ ಕುಮಾರ್ ಹೇಳಿದರು.


ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ: ಧರಣೇಂದ್ರ ಕುಮಾರ್
ಹೈನುಗಾರಿಕೆಯನ್ನು ಲಾಭದಾಯಕವಾಗಿಸಲು ಜಾನುವಾರುಗಳ ಉತ್ತಮ ನಿರ್ವಹಣೆ, ಗುಣಮಟ್ಟದ ಮೇವು ಹಾಗೂ ಸಮಯಕ್ಕೆ ಸರಿಯಾಗಿ ಪಶುವೈದ್ಯಕೀಯ ಆರೈಕೆ ಅಗತ್ಯ. ಹಾಲಿನ ಗುಣಮಟ್ಟ ಕಾಪಾಡುವುದರೊಂದಿಗೆ ಸಂಘದ ಸೌಲಭ್ಯಗಳನ್ನು ಸದಸ್ಯರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಿಇಓ ಧರಣೇಂದ್ರ ಕುಮಾರ್ ಹೇಳಿದರು.

Related posts

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಆಟಿಡೊಂಜಿ ದಿನಾಚರಣೆ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು ಪದವಿ ವಿಭಾಗದಲ್ಲಿ ನಶಾಮುಕ್ತ ಭಾರತ ಅಭಿಯಾನ ಕುರಿತು ಪ್ರತಿಜ್ಞಾವಿಧಿ ಸ್ವೀಕಾರ

Suddi Udaya

ಜನಸ್ನೇಹಿ ಅಧಿಕಾರಿ ಜುಬಿನ್ ಮೊಹಾಪಾತ್ರ ದಿಢೀರ್ ವಗಾವಣೆ

Suddi Udaya

ಬೆಳ್ತಂಗಡಿ: ಗಾಳಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಅಳದಂಗಡಿಯಲ್ಲಿ ತೃಷಾ ಮೆಡಿಕಲ್ ಶುಭಾರಂಭ

Suddi Udaya

ನೀರಚಿಲುಮೆ-ನಾರ್ಯ ಸಂಪರ್ಕಿಸುವ ರಸ್ತೆಯಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆಯಿಲ್ಲದೆ ಧರೆ ಕುಸಿತ, ಶೀಘ್ರ ದುರಸ್ಥಿಗೆ ಆಗ್ರಹ

Suddi Udaya
error: Content is protected !!