ಇತ್ತೀಚೆಗೆ ಕೊಕ್ರಾಡಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಕಲ್ಮಂಜ 14ರ ಹುಡುಗಿಯರ ವಿಭಾಗದಲ್ಲಿ ಮತ್ತು 17ರ ಹುಡುಗಿಯರ ಮತ್ತು ಹುಡುಗರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಹತ್ತನೆಯ ತರಗತಿಯ ಮನ್ವಿತ, ಶಿವಾನಿ, ವಿಜೇತ, 9ನೇ ತರಗತಿಯ ಹರಿಶ್ಚಂದ್ರ, ಎಂಟನೇ ತರಗತಿಯ ತ್ರಿಶಾ ಹಾಗೂ ಜೀವಿತ, 9ನೇ ತರಗತಿಯ ಆಯುಷ್ ಗೌಡ, ಶಂಕಿತ್, ನಿಶ್ಚಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರಿಗೆ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಲತಾ ತರಬೇತಿ ನೀಡಿದ್ದು ದೈಹಿಕ ಶಿಕ್ಷಣ ಶಿಕ್ಷಕಿ ವಸಂತಿ ಎಂ ಇವರು ಸಹಕಾರ ನೀಡಿರುತ್ತಾರೆ.
ಎಂಟನೆಯ ತರಗತಿಯ ವಿಜಿತಾ ವಿ ಬಂಗೇರ ಮತ್ತು ತ್ರಿಷಾ ವ್ಯೆಯಕ್ತಿಕ ಚಾಂಪಿಯನ್ ಶಿಪ್ ಗಳಿಸಿದ್ದಾರೆ.












