ಬೆಳ್ತಂಗಡಿ; ಕೃಷಿಕ ಯುವಕ ಮಂಡಲ ರಿ.ಮೇಲಂತಬೆಟ್ಟು ಇದರ ವತಿಯಿಂದ ಮೇಲಂತಬೆಟ್ಟು, ಮುಂಡೂರು, ಸವಣಾಲು, ಮತ್ತು ಲಾಯಿಲ ಗ್ರಾಮಸ್ತರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 4 ನೇ ವರ್ಷದ ಮೊಸರು ಕುಡಿಕೆ ಉತ್ಸವ ಮತ್ತು ವಿವಿಧ ಸ್ಪರ್ಧೆಗಳನ್ನು ಸೆ.7 ರಂದು ಆಯೋಜಿಸಲಾಗಿತ್ತು.
ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳು ಮಡಂತ್ಯಾರು ಉದ್ಘಾಟನೆ ನೆರವೇರಿಸಿದರು.
ಅಧ್ಯಕ್ಚತೆಯನ್ನು ಮೇಲಂತಬೆಟ್ಟು ಸರಕಾರಿ ಶಾಲಾ ಮುಖ್ಯ ಶಿಕ್ಷಕಿ ರೂಪಾ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮೇಲಂತಬೆಟ್ಟು ಗ್ರಾ.ಪಂ ಆಡಳಿತಾಧಿಕಾರಿ ರಾಜೇಂದ್ರಕೃಷ್ಣ, ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್ ಕುರ್ತೋಡಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್ ನೂಜೋಡಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಸವಿತಾ, ಕೃಷಿಕ ಯುವಕ ಮಂಡಲದ ಗೌರವಾಧ್ಯಕ್ಷ ಧರ್ಣಪ್ಪ ಸಪಲ್ಯ ನೂಜೇಲು ಶುಭ ಕೋರಿದರು.
ಗ್ರಾ. ಯೋಜನೆಯ ಕೃಷಿ ವಿಭಾಗದ ಮೇಲ್ವಿಚಾರಕ ರಾಮ್ ಕುಮಾರ್, ಚಾರ್ಟರ್ಡ್ ಎಕೌಂಟೆಂಟ್ ಯೋಗೀಶ್ ಪೂಜಾರಿ, ಶ್ರೀ ದೇವಿ ಭಗವತಿ ದೇವಸ್ಥಾನ ಮೇಲಂತಬೆಟ್ಟು ಇಲ್ಲಿದ ಧರ್ಮದರ್ಶಿ ಯೋಗೀಶ್ ಪೂಜಾರಿ, ಲಕ್ಷ್ಮೀ ಕಾಂತ್ ಬೇಕಲ್, ಗಿರೀಶ್ ಕುಮಾರ್ ಒಡ್ಯಾನೆ, ದಮಯಂತಿ ಪಾಲೆತ್ತಾಡಿಗುತ್ತು ಮೊದಲಾದವರು ಗೌರವ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಸೂರಜ್ ಸ್ವಾಗತಿಸಿದರು.
ಕೋಶಾಧಿಕಾರಿ ಹರ್ಷ ಧನ್ಯವಾದ ಸಲ್ಲಿಸಿದರು. ಕೃಷಿಕ ಯುವಕ ಮಂಡಲದ ಅಧ್ಯಕ್ಷ ಜಗದೀಶ್ ಬರಮೇಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಿರೀಶ್ ಮಾಪಲಾಡಿ ವಂದಿಸಿದರು.












