ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರದ ಭ| ಅನಂತನಾಥ ಸ್ವಾಮಿ ಬಸದಿಯ ಪೂಜಾ ವಿಧಿ ವಿಧಾನವನ್ನು ಹಲವಾರು ವರ್ಷಗಳ ಕಾಲ ನೆರವೇರಿಸಿರುವ ಅರ್ಚಕರಾದ ಜೀವಂಧರ್ ಕುಮಾರ್ ಇಂದ್ರ( 74 ವರ್ಷ ) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
ಇವರು ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಪುತ್ರಿಯನ್ನು ಮತ್ತು ಅಳಿಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ದೇಹ ದಹನಕ್ರಿಯೆಯನ್ನು ಬೆಳ್ತಂಗಡಿಯ ಶ್ರೀ ರತ್ನತ್ರಯ ಬಸದಿ ವ್ಯಾಪ್ತಿಯಲ್ಲಿರುವ ಚಿತಾಗಾರದಲ್ಲಿ ನಾಳೆ (10-09-2026 ನೇ ಗುರುವಾರ,) ಬೆಳಗ್ಗೆ 9 ಗಂಟೆಗೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ












