30.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಶಿವಂಶಾಗೆ ಹಲವು ಪ್ರಶಸ್ತಿ: ಲಾಯಿಲದಲ್ಲಿ ಪ್ರಥಮ, ಮಹಿಳಾ ವೃಂದದಲ್ಲಿ ತೃತೀಯ, ಎಕ್ಸೆಲ್‌ನಲ್ಲಿ ಆರನೇ ಸ್ಥಾನ

ಬೆಳ್ತಂಗಡಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲೂಕಿನ ವಿವಿಧೆಡೆ ನಡೆದ ಮುದ್ದುಕೃಷ್ಣ ಸ್ಪರ್ಧೆಗಳಲ್ಲಿ ಬೆಳ್ತಂಗಡಿಯ ಒಂದು ವರ್ಷದ ಪುಟಾಣಿ ಶಿವಂಶಾ ಹಲವು ಪ್ರಶಸ್ತಿಗಳನ್ನು ಪಡೆದು ಗಮನ ಸೆಳೆದಿದ್ದಾರೆ.

ಲಾಯಿಲದಲ್ಲಿ ನಡೆದ ಮೊಸರು ಕುಡಿಕೆ ಉತ್ಸವದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಶಿವಂಶಾ ಪ್ರಥಮ ಸ್ಥಾನ ಗಳಿಸಿದ್ದಾರೆ. ಎಕ್ಸೆಲ್ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ಆರನೇ ಸ್ಥಾನ ಹಾಗೂ ಮಹಿಳಾ ವೃಂದದ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಶ್ರೀ ಕೃಷ್ಣನ ವೇಷದಲ್ಲಿ ಮುದ್ದಾಗಿ ಕಂಗೊಳಿಸಿದ ಶಿವಂಶಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಬಂಧುಗಳಲ್ಲಿ ಸಂತಸ ಮೂಡಿಸಿದೆ.

ಶಿವಂಶಾ ಅವರು ಬೆಳ್ತಂಗಡಿ ಸಂತೆಕಟ್ಟೆ ನಿವಾಸಿಗಳಾದ ಸ್ವಾತಿ ಮತ್ತು ಸುಶಾಂತ್ ದಂಪತಿಯ ಪುತ್ರ.

Related posts

ಬೆಳ್ತಂಗಡಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿಯಿಂದ ವಾರ್ಷಿಕ ಮಹಾಸಭೆ: ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ನೂತನ ಅಧ್ಯಕ್ಷರಾಗಿ ಜನಾರ್ಧನ ಗೌಡ ಕುಳಾಯಿ ಕಾರ್ಯದರ್ಶಿಯಾಗಿ ಸುಂದರ್ ನಾಯ್ಕ್ ಕುಳಾಯಿ ಆಯ್ಕೆ

Suddi Udaya

ಶುಭವಿವಾಹ ಐಶ್ವರ್ಯ-ಸ್ಕಂದ

Suddi Udaya

ಕಳೆ ತೆಗೆಯುವ ಯಂತ್ರಕ್ಕೆ ಸಿಲುಕಿ ಎದೆಗೆ ಬಡಿದ ರಬ್ಬರ್ ಕಪ್‌ನ ಸರಿಗೆ: ಕಾಯರ್ತಡ್ಕ ನಿವಾಸಿ ಕೊರಗಪ್ಪ ಗೌಡ ಸಾವು

Suddi Udaya

ಕಾಯರ್ತಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಅರಿವು ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಟಿವಿಎಸ್ ಲೋಬೋ ಮೋಟಾರ್ಸ್ ನಲ್ಲಿ ಕ್ರಿಸ್ಮಸ್ ಆಚರಣೆ

Suddi Udaya
error: Content is protected !!