25.6 C
ಪುತ್ತೂರು, ಬೆಳ್ತಂಗಡಿ
September 12, 2026
ಜಿಲ್ಲಾ ಸುದ್ದಿ

ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರ ಸಂಘ (ನಿ )- ವಾರ್ಷಿಕ ಮಹಾಸಭೆ

ಮಂಗಳೂರು:ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಇದರ ಆರ್ಥಿಕ ವರ್ಷ 2025-26 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ 12 ರಂದು ಶ್ರೀ ರಾಧಾಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.

ಮಹಾಸಭೆಯ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಉಪಾಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿಯವರು ವಹಿಸಿದ್ದರು.ಸದಸ್ಯೆ ಶ್ರೀಮತಿ ಸ್ವಾತಿ ಸತೀಶ್ ಅವರ ಪ್ರಾರ್ಥನೆಯೊಂದಿಗೆ ಆರoಭಗೊಂಡ ಸಹಕಾರಿ ಸಂಘದ ನಿರ್ದೇಶಕರಾದ ಎಂ ಜಯರಾಮ್ ಭಂಡಾರಿಯವರು ಸ್ವಾಗತಿಸಿದರು. ನಿರ್ದೇಶಕರಾದ ಕೊಡಂಗೆ ಬಾಲಕೃಷ್ಣ ನಾಯ್ಕ್ ಅವರು ಸಹಕಾರ ಗೀತೆಯನ್ನು ಹಾಡಿದರು. ವರದಿ ವರ್ಷದಲ್ಲಿ ಮೃತರಾದ ಸದಸ್ಯರಿಗೆ ನಿರ್ದೇಶಕರಾದ ಮಹಾಲಿಂಗೇಶ್ವರ ಭಟ್ ಬಿ ಅವರು ಶೃದ್ದಾoಜಲಿ ಅರ್ಪಿಸಿದರು.ಸಹಕಾರ ಸಂಘದ ಶಾಖಾ ವ್ಯವಸ್ಥಾಪಕಿ ವೀಣಾ ಕುಮಾರಿ ಬಿ ರವರು ಮಹಾಸಭೆಯ ಕಾರ್ಯಸೂಚಿಯನ್ನು ಸಭೆಗೆ ವಾಚಿಸಿದರು.. ಹಿರಿಯ ಗುಮಾಸ್ತೆ ವಂದಿತಾ ಜೆ ಎಂ ಅವರು ಸಹಕಾರ ಸಂಘದ ಕಳೆದ ಆರ್ಥಿಕ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಾಂತ್ ಸಿ ಎಚ್ ಕಳೆದ ಆರ್ಥಿಕ ವರ್ಷದ ಪರಿಶೋದಿತ ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ಸಹಕಾರ ಸಂಘದ ಸಲಹೆಗಾರರಾದ ರಾಮಯ ಶೆಟ್ಟಿಯವರು ಆರ್ಥಿಕ ವರ್ಷ 2025-26 ನೇ ಸಾಲಿನ ಆಯ -ವ್ಯಯದ ವ್ಯತ್ಯಾಸವನ್ನು ಮತ್ತು ಆರ್ಥಿಕ ವರ್ಷ 2026-27 ನೇ ಸಾಲಿನ ಮುಂಗಡ ಪತ್ರವನ್ನು ಸಭೆಯ ಮುಂದಿಟ್ಟರು


ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರಾದ ಸುಧಾಕರ್ ಜೋಗಿ, ವೆಂಕಟರಮಣ ಭಟ್, ಪ್ರಶಾಂತ್ ಕೋಟ್ಯಾನ್ ಗೋಕುಲ್ ದಾಸ್ ಹೆಗ್ಡೆ ಹಾಗೂ ಇನ್ನೂ ಹಲವು ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಆರ್ಥಿಕ ವರ್ಷ 2025-26 ರಲ್ಲಿ ಸಂಘವು ರೂ. 20 ಕೋಟಿಗಳ ವ್ಯವಹಾರ ದಾಖಸಿದ್ದು ರೂ. 7.20 ಲಕ್ಷಗಳ ನಿವ್ವಳ ಲಾಭಾoಶ ಗಳಿಸಿದೆ.ಸಹಕಾರ ಸಂಘದ ಸದಸ್ಯರ ಪಾಲು ಬಂಡವಾಳದ ಮೇಲೆ ಶೇ. 11ರಂತೆ ಡಿವಿಡೆಂಡ್ ಘೋಷಿಸಲಾಯಿತು.ಸಹಕಾರ ಸಂಘದ ನಿರ್ದೇಶಕ ಮಂಡಳಿಯ ಇತರ ಸದಸ್ಯರಾದ ವಿಶ್ವನಾಥ ಗಟ್ಟಿ, ಶ್ರೀ ಕಾಶೀನಾಥ್ ಪುತ್ರನ್ ಶ್ರೀನಿವಾಸ ಕಣ್ವತೀರ್ಥ, ಸ್ಟ್ಯಾನಿ ಡಿಸೋಜ, ಲೀಲಾವತಿ ಕೆ, ಶೀಮತಿ ಮೃಣಾಲಿನಿ, ಕಿಶೋರ್ ಕುಟಿನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಹಕಾರ ಸಂಘದ ಸಿಬ್ಬಂದಿ ರೇಷ್ಮಾ ಸಹಕರಿಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ SSLC ಮತ್ತು PUC ಯಲ್ಲಿ ಉತ್ತಮ ಸಾಧನೆ ದಾಖಲಿಸಿದ ಸಹಕಾರ ಸಂಘದ ಸದಸ್ಯರ 11 ಮಕ್ಕಳಿಗೆ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾದ ದಿವಂಗತ ಪಿ ಜೆ ಸಾಲ್ದಾನ್ಹರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.ಈ ಕಾರ್ಯಕ್ರಮವನ್ನು ನಿರ್ದೇಶಕರಾದ ಎಚ್ ಸುಬ್ರಹ್ಮಣ್ಯ ಭಟ್ ಅವರು ನಿರ್ವಹಿಸಿದರು. ನಿರ್ದೇಶಕಿ ಶ್ರೀಮತಿ ರಾಜೀವಿ ವಿ ಅವರು ವಂದನಾರ್ಪಣೆಗೈದರು..

Related posts

ಅಳದಂಗಡಿ ಪ.ಪೂ. ಕಾಲೇಜಿನಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಕೊಠಡಿ ಮತ್ತು ಇತರ ಮೂಲಭೂತ ಸೌಕರ್ಯಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ ಶ್ರೀ ಧ. ಆಂ.ಮಾ. ಶಾಲೆಗೆ ರಾಷ್ಟ್ರೀಯ ಸಂಸ್ಥೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನಿರ್ದೇಶಕ ಡಾ. ಕೆ. ಶರ್ಮ ಭೇಟಿ

Suddi Udaya

ದಿಡುಪೆ – ಸಂಸೆ ಅರಣ್ಯ ರಸ್ತೆಯೊಳಗೆ ವಿಡಿಯೋ ಮಾಡಿದ ಪ್ರಕರಣ: ಬೆಳ್ತಂಗಡಿ ವನ್ಯಜೀವಿ ಇಲಾಖೆಯಿಂದ ಮೂವರಿಗೆ ದಂಡ

Suddi Udaya

ಮುಂಡಾಜೆ: ಸೈಂಟ್ ಮೇರಿಸ್ ಚರ್ಚ್ ನಲ್ಲಿ ಗುಡ್ ಫ್ರೈಡೆ ಆಚರಣೆ

Suddi Udaya

ಜು.30: ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಕಣಿಯೂರು ಗ್ರಾ. ಪಂ. ನ ಸದಸ್ಯ ಪ್ರವೀಣ್ ಗೌಡ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ನಡೆದ ಹಲ್ಲೆಯನ್ನು ಖಂಡಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಬೃಹತ್ ಪ್ರತಿಭಟನೆ

Suddi Udaya

ಮಚ್ಚಿನ ಉಚಿತ ನೇತ್ರಾ ತಪಾಸಣಾ ಶಿಬಿರ

Suddi Udaya
error: Content is protected !!