ತೆಕ್ಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಬ್ಧುಲ್ ರಝಾಕ್ ಬಿ. ಅಧ್ಯಕ್ಷತೆಯಲ್ಲಿ ತೆಕ್ಕಾರು ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೆ. 12 ರಂದು ನಡೆಯಿತು.

ಸಂಘದ ಅಧ್ಯಕ್ಷ ಅಬ್ಧುಲ್ ರಝಾಕ್ ಬಿ. ಮಾತನಾಡಿ ಸಮಾನ ಮಾನಷ್ಕರ ನಮ್ಮ ಸಂಘವು 126 ಕೋಟಿ ರೂ. ವ್ಯವಹಾರ ನಡೆಸಿ, ರೂ. 32,59 ಲಕ್ಷ ರೂ. ಲಾಭಗಳಿಸಿ, ಲೆಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದಿದ್ದು ಸದಸ್ಯರಿಗೆ ಶೇ. 7% ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ನಮ್ಮ ಸಂಘದಲ್ಲಿ ವರದಿ ವರ್ಷಕ್ಕೆ 1237 ಜನ ಸದಸ್ಯರಿದ್ದು, ರೂ. 2,07,46,527.00 ಪಾಲು ಬಂಡವಾಳ ಸಂಗ್ರಹವಾಗಿದೆ. ಠೇವಣಾತಿ ಮೊತ್ತವು ರೂ. 12,52,58,840.26 ಆಗಿದ್ದು, ಸದಸ್ಯರ ಹೊರಬಾಕಿ ಸಾಲವು ರೂ. 29,88,57,843.00 ಆಗಿರುತ್ತದೆ. ನಮ್ಮ ಸಂಘದಲ್ಲಿ ಠೇವಣಿ ಇಡುವ ಸದಸ್ಯರ ಭದ್ರತೆಗೋಸ್ಕರ ಸಂಘದ ಲಾಭದಿಂದ ರೂ. 72,136.00 ಕಾದಿರಿಸಿದ್ದು, ಒಟ್ಟು 47,24.317.00 ಬಡ್ಡಿಯನ್ನು ಪ್ರತ್ಯೇಕವಾಗಿ ಕಾದಿರಿಸಿದೆ. ಸಂಘದ ಲಾಭದಲ್ಲಿ ರೂ. 10,36,527.00 ಸವಕಳಿ 2 . 2 ໖ 50,98,235.61 1 2 2 59,24,362.81 ಕ್ಷೇಮ ನಿಧಿಗಳಿವೆ ಎಂದು ತಿಳಿಸಿದರು.
ಉಪಾಧ್ಯಕ್ಷ ಶೇಖರ ಪೂಜಾರಿ, ನಿದೇರ್ಶಕರಾದ ಅಅಬ್ದುಲ್ ರಹಿಮಾನ್, ಅಬ್ದುಲ್ ಮುನೀರ್, ಎಸ್. ಬಿ. ಇಬ್ರಾಹಿಂ, ಕೃಷ್ಣಪ್ಪ ಮೂಲ್ಯ, ರವಿ, ವಸಂತಿ, ರಾಜೇಶ್ವರಿ ರಮೇಶ್, ಜಿನತ್ ಮತ್ತು ವಲಯ ಮೇಲ್ವಿಚಾರಕ ಸಿರಾಜುದ್ದಿನ್ ಉಪಸ್ಥಿತರಿದ್ದರು.
ಐದು ಮಂದಿಗೆ ಸೌಭಾಗ್ಯ ನಿಧಿ ಠೇವಣಿಯನ್ನು ವಿತರಿಸಲಾಯಿತು.ವಿವಿಧ ಕ್ಷೇತ್ರದ ಸಾಧಕರಿಗೆ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿಧನರಾದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಮುಖ್ಯ ಕಾರ್ಯನಿರ್ವಾಹಧಿಕಾರಿ ರಾಘವೇಂದ್ರ ಅಡಪ ವರದಿ ವಾಚಿಸಿ, ನಿರ್ದೇಶಕರಾದ ಇನಾಸ್ ರೋಡ್ರಿಗಸ್ ಸ್ವಾಗತಿಸಿ, ಸತೀಶ್ ಪೂಜಾರಿ ಬಿ. ನಿರೂಪಿಸಿದರು. ಸಿಬ್ಬಂದಿ ನಮಿತಾ ವಂದಿಸಿದರು. ಸಿಬ್ಬಂದಿಗಳಾದ ಪ್ರೇಮಾ, ನವೀಶ, ಶಾಹಿದಾ ಬಾನು, ನಿಕ್ಷಿತ್, ರತ್ನ ಸಹಕರಿಸಿದರು.












