28 C
ಪುತ್ತೂರು, ಬೆಳ್ತಂಗಡಿ
September 13, 2026
ತಾಲೂಕು ಸುದ್ದಿಪ್ರಮುಖ ಸುದ್ದಿ

ನವೀಕರಣಗೊಂಡು ಶುಭಾರಂಭಗೊಂಡ ಪಾರಸ್ ಪೃಥ್ವಿ ಜ್ಯುವೆಲ್ಸ್

ಪಾರಸ್ ಪ್ರಥ್ವಿ ಜ್ಯುವೆಲ್ಸ್ ತುಂಬಾ ಚೆನ್ನಾಗಿದೆ: ಡಿವೈಎಸ್ಪಿ ರೋಹಿಣಿ ಸಿ.ಕೆ

ತಾಲೂಕಿನಲ್ಲಿ ಪ್ರಥಮ ಜ್ಯುವೆಲ್ಸ್ ಶೋರೂಂ ಪ್ರಾರಂಭಿಸಿದ್ದು ಪೃಥ್ವಿ ಜ್ಯುವೆಲ್ಸ್: ನ್ಯಾಯವಾದಿ ಭಗೀರಥ.ಜಿ

ಬೆಳ್ತಂಗಡಿ: ಪಟ್ಟಣದ ಸಂತೆಕಟ್ಟೆಯಲ್ಲಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ಮಳಿಗೆ ನವೀಕರಣಗೊಂಡು ಸೆ13ರಂದು ಹೊಸ ರೂಪದಲ್ಲಿ ಶುಭಾರಂಭಗೊಂಡಿದೆ.

ನವೀಕರಣಗೊಂಡು ಆರಂಭವಾಗಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ಮಳಿಗೆಯನ್ನು ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ ಅವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಾರಸ್ ಪೃಥ್ವಿ ಜ್ಯುವೆಲ್ಸ್ ತುಂಬಾ ಚೆನ್ನಾಗಿ ಎಂದು ಶ್ಲಾಘಿಸಿದರು. ಹಿರಿಯ ನ್ಯಾಯವಾದಿ ಭಗೀರಥ ಜಿ. ಮಾತನಾಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ 9ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಸಂಸ್ಥೆಯನ್ನು ನಡೆಸುವುದು ಸುಲಭದ ಕೆಲಸವಲ್ಲ, ಆದರೂ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ತಾಲೂಕಿನಲ್ಲಿ ಪ್ರಥಮವಾಗಿ ಜ್ಯುವೆಲ್ಸ್ ಶೋರೂಂ ಪ್ರಾರಂಭ ಮಾಡಿದ್ದು ಪೃಥ್ವಿ ಜ್ಯುವೆಲ್ಸ್ ನಂತರ ಬೇರೆ ಎಲ್ಲಾ ಶೋ ರೂಂಗಳು ಬಂದವು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸೋಜಾ ಎಲೆಕ್ಟ್ರಾನಿಕ್ಸ್ -ಪರ್ನಿಚರ್ಸ್‌ ಮಾಲಕ ಅಲ್ಪನ್ನೋ ಫ್ರಾಂಕೋ, ನ್ಯಾಯವಾದಿ ಧನಂಜಯ್, ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, ಪಾರಸ್ ಪೃಥ್ವಿ ಜ್ಯುವೆಲ್ಸ್ ಆಡಳಿತ ನಿರ್ದೇಶಕ ಸಮರ್ಥ್, ಬೆಳ್ತಂಗಡಿ ಅನ್ಸ್ ಕ್ಲಬ್ ನ ಅಧ್ಯಕ್ಷೆ ರಾಜಶ್ರೀ ಧನಂಜಯ್, ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕುಮಾ‌ರ್ ಜೈನ್, ಪಾರಸ್ ಪೃಥ್ವಿ ಜ್ಯುವೆಲ್ಸ್ ನ ಗ್ರಾಹಕ ಅರುಣ್ ವಿ ಶೆಟ್ಟಿ, ತಣ್ಣೀರುಪಂತ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೇಶವತಿ, ಉದ್ಯಮಿ ಚಂದ್ರಕಲಾ ಜೈನ್‌ ಉಪಸ್ಥಿತರಿದ್ದರು .

ನಿಸಾರ್ ಕಾರ್ಯಕ್ರಮ ನಿರೂಪಿಸಿದರು. ಕರಾವಳಿ, ಕೊಡಗು, ಮೈಸೂರು ಹಾಗೂ ದಕ್ಷಿಣ ಮತ್ತು ಉತ್ತರ ಭಾರತದ ಪಾರಂಪರಿಕ ಹಾಗೂ ಆಧುನಿಕ ಆಭರಣಗಳ ಅತಿ ದೊಡ್ಡ ಸಂಗ್ರಹ, ಚಿನ್ನ, ಬೆಳ್ಳಿ, ವಜ್ರದ ಆಭರಣಗಳು ಹಾಗೂ ಆಕರ್ಷಕ ವಿನ್ಯಾಸಗಳ ವಿಶಾಲ ಸಂಗ್ರಹದೊಂದಿಗೆ ಗ್ರಾಹಕರನ್ನು ಸೆಳೆಯಲು ಮಳಿಗೆ ಸಜ್ಜಾಗಿದೆ. ನವೀಕರಣದ ಅಂಗವಾಗಿ ಇದುವರೆಗೂ ಯಾರೂ ನೀಡಿರದ ಆಫರ್ ನೀಡಲಾಗುತ್ತಿದ್ದು ಯಾವುದೇ ಚಿನ್ನಾಭರಣಗಳ ಖರೀದಿಯ ಮೇಲೆ ಶೇ.0 ವೇಸ್ಟೇಜ್ ಹಾಗೂ ಕೇವಲ ಶೇ.8.9 ಮೇಕಿಂಗ್ ಚಾರ್ಜ್‌ನಲ್ಲಿ (5 ಗ್ರಾಂ ಮೇಲ್ಪಟ್ಟ ಆಭರಣಗಳ ಖರೀದಿಯ ಮೇಲೆ ನೀಡಲಾಗುತ್ತಿದೆ.)ಈ ವಿಶೇಷ ಆಫರ್ ಸೆ.13ರಿಂದ ಸೆ.30ರವರೆಗೆ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

Related posts

ಬೆಳ್ತಂಗಡಿ ಎಸ್‌.ಐ.ಟಿ ಕಚೇರಿಗೆ ಹಾಜರಾದ ಜಯಂತ್.ಟಿ

Suddi Udaya

ಎನ್.ಸಿ.ಸಿ ರೈಫಲ್ ಫೈಯರಿಂಗ್ ಸ್ಪರ್ಧೆ: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಕಳೆಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಡಂತ್ಯಾರು: ಸಹಕಾರಿ ಸಂಘಕ್ಕೆ ನಕಲಿ ಚಿನ್ನದ ಸರ ಅಡವು ಯತ್ನ; ಪ್ರಕರಣ ದಾಖಲು

Suddi Udaya

ತೆಂಕಕಾರಂದೂರು: ಕಾರು ಹಾಗೂ ಬೈಕ್ ನಡುವೆ ಅಪಘಾತ

Suddi Udaya

ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

Suddi Udaya
error: Content is protected !!