September 13, 2026
ಧಾರ್ಮಿಕ

ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಉದ್ಘಾಟನೆ.


ವೇಣೂರು :ಕರಿಮಣೇಲು ಬೋಳೂರು ಶ್ರೀ ಮಹಮ್ಮಾಯಿ ದೇವಸ್ಥಾನ ಉತ್ತೂರ್ಲೊಟ್ಟುವಿನಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಗುರುವಾಯನಕೆರೆ ಸಹಯೋಗದೊಂದಿಗೆ ಭಜನಾ ಮಂಡಳಿ ಉದ್ಘಾಟನೆ,ಭಜನಾ ಮಾಹಿತಿ, ತಾಳ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಭಜನಾ ಗುರುಗಳಾದ ಸಂದೇಶ್ ಮದ್ದಡ್ಕ ರವರು ದೀಪ ಬೆಳಗಿಸಿ ಉದ್ಘಾಟಿಸಿ ಹಳ್ಳಿಗಳಲ್ಲಿ ಭಜನಾ ಕಾರ್ಯಕ್ರಮಗಳು ಇಡೀ ಊರಿನ ಜನರನ್ನು ಒಂದೆಡೆ ಸೇರಿಸುತ್ತವೆ. ಇದು ಗ್ರಾಮಸ್ಥರಲ್ಲಿ ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನ ಭಾವನೆಯನ್ನು ಹೆಚ್ಚಿಸುತ್ತದೆ ಎಂದರು.


ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ರವರು ಭಜನೆಯು ಕೇವಲ ಭಕ್ತಿ ಮಾರ್ಗ ಅಥವಾ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಅದು ಸಮಾಜದ ದೊಡ್ಡ ಪರಿವರ್ತನೆಗೆ ಶಕ್ತಿಶಾಲಿ ಮಾಧ್ಯಮವಾಗಿದೆ. ಇತಿಹಾಸದಲ್ಲಿ ಪುರಂದರದಾಸರು, ಕನಕದಾಸರು, ಮತ್ತು ಬಸವಣ್ಣನವರಂತಹ ಶರಣರು, ಸಂತರು ಭಜನೆ ಮತ್ತು ಕೀರ್ತನೆಗಳ ಮೂಲಕವೇ ಸಮಾಜದಲ್ಲಿದ್ದ ಮೂಢನಂಬಿಕೆ ಮತ್ತು ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು.ಭಜನೆಗಳ ಸಾಹಿತ್ಯದಲ್ಲಿ ಕೇವಲ ದೇವರ ನಾಮ ಇರುವುದಿಲ್ಲ. ಬದಲಿಗೆ ಸತ್ಯ, ಪ್ರಾಮಾಣಿಕತೆ, ದುಶ್ಚಟಗಳಿಂದ ದೂರವಿರುವುದು, ಮತ್ತು ನೈತಿಕ ಮೌಲ್ಯಗಳ ಬಗ್ಗೆ ಸಂದೇಶಗಳಿರುತ್ತವೆ. ಇದು ಜನರ ಆಲೋಚನಾ ಶೈಲಿಯನ್ನು ಉತ್ತಮ ಪಥದತ್ತ ಬದಲಾಯಿಸುತ್ತದೆ. ದುರ್ಗಾಂಬಿಕಾ ಭಜನಾ ಮಂಡಳಿ ಮೂಲಕ ಸಮಾಜದಲ್ಲಿ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳು ನಡೆಯಲಿ ಎಂದರು.


ವೇದಿಯಲ್ಲಿ ಮಂಡಳಿಯ ಪ್ರಮುಖರಾದ ಕರ್ಣ,ರಾಘು ನಾಯ್ಕ್, ಪ್ರವೀಣ್ ಪಡ್ಲಾ, ದೋಗು ನಾಯ್ಕ್, ಜಾರಪ್ಪ ಪೂಜಾರಿ, ಭಾಸ್ಕರ ಪೂಜಾರಿ, ಹರಿಶ್ಚಂದ್ರ ನಾಯ್ಕ,ಸುಮ ಅಶೋಕ ನಾಯ್ಕ ಉಪಸ್ಥಿತರಿದ್ದರು. ಕುಮಾರಿ ಸುಪ್ರೀಯ ರವರು ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸ್ಥರು, ಭಜನಾ ಮಂಡಳಿ ಸದಸ್ಯರು, ಪೊಷಕರು ಭಾಗವಹಿಸಿದ್ದರು.

Related posts

ಕೊಕ್ಕಡ ಗ್ರಾಮದ ರೈತರ ವತಿಯಿಂದ ಶ್ರೀ ಸೌತಡ್ಕ ಮಹಾಗಣಪತಿ ದೇವರಿಗೆ 24 ಅಗೇಲು ರಂಗ ಪೂಜೆ

Suddi Udaya

ಮನೋಜವಂ ಮಾರುತ ತುಲ್ಯವೇಗಂ; ಅಳದಂಗಡಿಯಲ್ಲಿ ಹನುಮ ನಾಮ ಸ್ಮರಣೆ ಹನುಮೋತ್ಸವ-2025, : ಹನುಮ ಯಾಗಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ

Suddi Udaya

ಮಾ 31-ಎ 4: ತುಳುನಾಡಿನ ಸತ್ಯನಾಪುರದ ಸತ್ಯೋದ ಸಿರಿಯ ಮೂಲ ಆಲಡೆ ಕ್ಷೇತ್ರ ಕಾರಣಿಕದ ಮಣ್ಣು ಲೋಕನಾಡು ಶ್ರೀ ಲೋಕನಾಥೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಸಿರಿ ಜಾತ್ರೆ

Suddi Udaya

ಉಜಿರೆ ಬ್ರಹ್ಮಶ್ರೀ ಗುರುನಾರಾಯಣ ಮಂದಿರದಲ್ಲಿ ಗುರುನಮನ ಮತ್ತು ರಕ್ಷಾ ಬಂಧನ ಕಾರ್ಯಕ್ರಮ

Suddi Udaya
error: Content is protected !!