
ಲಾಯಿಲ: 38 ನೇ ಸಾರ್ವಜನಿಕ ಗಣೇಶೋತ್ಸವವನ್ನು ಶ್ರೀ ಚಿತ್ತರಂಜನ್ ಹೆಗ್ಡೆ ಲಾಯಿಲ ಗುತ್ತು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅರುಣ್ ಕುಮಾರ್ ದಿಶಾ ಸಮೂಹ ಸಂಸ್ಥೆ ಉಜಿರೆ, ಹೇಮಾಶಂಕರ ಶೆಟ್ಟಿ, ಸ್ವಸ್ತಿಕ್ ಕ್ಯಾಷ್ಯೂ ಇಂಡಸ್ಟ್ರೀಸ್ ಲಾಯಿಲ, ಬೆಳ್ತಂಗಡಿ, ಪ್ರವೀಣ್ ಶೆಟ್ಟಿ ಉದ್ಯಮಿಗಳು ಉಜಿರೆ ಮತ್ತು ಸೀತಾರಾಮ ಆರ್ ಅಧ್ಯಕ್ಷರು, ಪ್ರಗತಿಬಂಧು ಒಕ್ಕೂಟ ಕೇಂದ್ರ ಸಮಿತಿ ಬೆಳ್ತಂಗಡಿ ಇವರು ಭಾಗವಹಿಸಿದರು.
ಸಮಿತಿಯ ಕಾರ್ಯದರ್ಶಿ ಅರವಿಂದ್ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ್ ಬಿಎಲ್ ಧನ್ಯವಾದಗೈದರು. ಪ್ರಧಾನ ಕಾರ್ಯದರ್ಶಿ ರುಕ್ಮಯ ಕನ್ನಾಜೆ ಕಾರ್ಯಕ್ರಮ ನಿರೂಪಿಸಿದರು.












