28 C
ಪುತ್ತೂರು, ಬೆಳ್ತಂಗಡಿ
September 13, 2026
Uncategorized

ಲಾಯಿಲ ಗ್ರಾಮದ ಕರಿಯ ಮೊಗೇರ ಕುಟುಂಬಕ್ಕೆ ಸಾಂತ್ವಾನವಾದ “ಹಿದಾಯ ಫೌಂಡೇಶನ್”

ಬೆಳ್ತಂಗಡಿ: ಮನೆ ಮಂದಿಯೆಲ್ಲರೂ ಬೇರೆ ಬೇರೆ ಅನಾರೋಗ್ಯಗಳಿಗೆ ತುತ್ತಾಗಿ ತೀವ್ರ ಸಮಸ್ಯೆ ಎದುರಿಸುತ್ತಿರುವ ಲಾಯಿಲ ಗ್ರಾಮದ ಪ್ರಗತಿನಗರ ನಿವಾಸಿ ಕರಿಯ ಮೊಗೇರ ಅವರ ಬಗ್ಗೆ ವಿಶೇಷ ವರದಿ ವೀಕ್ಷಿಸಿದ ಜಿಲ್ಲೆಯ ಹೆಮ್ಮೆಯ ಸಮಾಜ ಸೇವಾ ಸಂಸ್ಥೆ “ಹಿದಾಯ ಫೌಂಡೇಶನ್” ತಕ್ಷಣಕ್ಕೆ ಆ ಕುಟುಂಬಕ್ಕೆ ಸ್ಪಂದಿಸಿದೆ.

ಸೆ. 13 ರಂದು ಕರಿಯ ಮೊಗೇರರ ಮನೆಗೆ ಭೇಟಿ ನೀಡಿದ ಸಂಸ್ಥೆಯ
ಅಧ್ಯಕ್ಷ ಲ. ಮುಹಮ್ಮದ್ ಹನೀಫ್ ಗೋಳ್ತಮಜಲು ನೇತೃತ್ವದ ನಿಯೋಗ ಕರಿಯ ಮೊಗೇರ ಅವರಿಗೆ ಅಗತ್ಯ ಬೇಕಾದ ಶೌಚಾಲಯವನ್ನು ನಿರ್ಮಿಸಿಕೊಡುವುದಲ್ಲದೆ ಪ್ರತೀ ತಿಂಗಳು ಬೇಕಾದ ದಿನಸಿ ಸಾಮಾಗ್ರಿ ಕೊಡುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಸಂಸ್ಥೆಯ ಟ್ರಸ್ಟಿ ಬಶೀರ್ ಎಂ.ಎಂ., ಆಹಾರ ವಿಭಾಗದ ಆಸಿಫ್ ಇಕ್ಬಾಲ್, ಸಮಿತಿಯ ಇತರ ಪ್ರಮುಖರಾದ ಇಬ್ರಾಹಿಂ ಕುಂಬಡ ಮಜಲು, ಹೈದರ್ ಫರಂಗಿಪೇಟೆ, ರಫೀಕ್ ಕಲ್ಲಡ್ಕ, ಲಾಯಿಲದ ಶ್ರೀ ಗುರು ಎಂಟರ್ ಪ್ರೈಸಸ್ ಮಾಲಿಕ ಅಶೋಕ್ ಶೆಟ್ಟಿ ಇವರು ಉಪಸ್ಥಿತರಿದ್ದರು.

ಕರಿಯ ಮೊಗೇರ ಅವರ ಮನೆಯ ಈ ದಯನೀಯ ಸ್ಥಿತಿಯ ಬಗ್ಗೆ ಸಮಾಜಕ್ಕೆ ತಿಳುವಳಿಕೆ ಮೂಡಿಸಿದ ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಜಿ.ಪಂ ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ ಚಂದ್ರಕಲಾ ಅವರ ಕಾರ್ಯವನ್ನು ಸಂಸ್ಥೆ ಈ ಸಂದರ್ಭ ಸ್ಲಾಘಿಸಿತು.

Related posts

ಎ.16: ವಿವಿಧ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಆ.30: ಅಜಿಲ ಸೀಮೆಯ ಸಾಂಪ್ರದಾಯದಂತೆ‌ಶ್ರೀ ಸೋಮೇಶ್ವರೀ ದೇವರ ಗೆದ್ದಯಲ್ಲಿ ನಾಲ್ಕೇತ್ತು ಕಂಬಳ

Suddi Udaya

ಕೆಪಿಸಿಸಿ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ನೂರುದ್ದೀನ್ ಚಾರ್ಮಾಡಿ ಆಯ್ಕೆ

Suddi Udaya

ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಫನ್ಪಿನಿಟಿ ಚಿಣ್ಣರ ಪ್ಲೇ ಪಾರ್ಕ್ ಉದ್ಘಾಟನೆ, ಪೋಷಕರಿಗೆ ಆಟೋಟ ಸ್ಪರ್ಧೆ

Suddi Udaya

ಪ್ರೇರಣಾ ಹೆಗ್ಗಡೆ ವಾಹಿನಿ ಅಸ್ತಿತ್ವಕ್ಕೆ

Suddi Udaya

ಮದ್ದಡ್ಕತಾಯಿ ಶ್ರೀ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾನದ‌ಲ್ಲಿ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ

Suddi Udaya
error: Content is protected !!