
ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 65ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆಪ್ಟಂಬರ್ 14ರಿಂದ18 ರವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸೆ.14ರಂದು ಮೂರ್ಜೆ ಶಿವಶಂಕರ ಪ್ರಭು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರಘುರಾಮ್ ಶೆಟ್ಟಿ, 65ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋಸ್ಸವ ಸಮಿತಿ
ಅಧ್ಯಕ್ಷರಾದ ಶರತ್ ಕುಮಾರ್ ಶೆಟ್ಟಿ , ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಕನ್ನಾಜೆ, ಕೋಶಾಧಿಕಾರಿಯಾಗಿ ಸಂಕೇತ್ ಶೆಟ್ಟಿ,
ಉಪಾಧ್ಯಕ್ಷರಾದ ನಾಗೇಶ್, ಜೊತೆ ಕಾರ್ಯದರ್ಶಿಯಾದ ಮಂಜುನಾಥ್, ಸಮಿತಿಯ ಗೌರವ ಸಲಹೆಗಾರಾದ ರಾಜೇಶ್ ಪ್ರಭು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜಯಾನಂದ ಗೌಡ, ಗಣೇಶ್ ಕನ್ನಾಜೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ತುಕಾರಾಮ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.












