ಧರ್ಮಸ್ಥಳ: ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಅಕ್ಟೋಬರ್ 25 ರಂದು ವಿಶ್ವಶಾಂತಿಗಾಗಿ ಸಿದ್ಧನವಗ್ರಹ ತೀರ್ಥಂಕರರ ಮಹಾಆರಾಧನೆ ಮತ್ತು ಶ್ರೀ ಮುನಿಸುವ್ರತ ಭಗವಾನ್ ವಿಶೇಷ ಆರಾಧನೆ ನಡೆಯಲಿದ್ದು ಆಮಂತ್ರಣಪತ್ರವನ್ನು ಸೆ.16 ರಂದು ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಆಚಾರ್ಯ ಶ್ರೀ 108 ಅನೇಕಾಂತ ಸಾಗರ ಮುನಿಮಹಾರಾಜರು ಹಾಗೂ ನಾಡಿನ ಎಲ್ಲಾ ಜೈನಮಠಗಳ ಭಟ್ಟಾರಕರುಗಳು ಉಪಸ್ಥಿತರಿದ್ದು, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮಾರಂಭದಲ್ಲಿ ಭಾಗವಹಿಸುವರು. ಬೆಂಗಳೂರಿನ ತ್ಯಾಗಿ ಸೇವಾ ಸಮಿತಿ ಟ್ರಸ್ಟ್, ಚಕ್ರೇಶ್ವರಿ ಮಹಿಳಾ ಸಮಾಜ, ಕರ್ನಾಟಕ ಜೈನ್ ಅಸೋಸಿಯೇಶನ್, ಭಾರತೀಯ ಜೈನ್‌ಮಿಲನ್, ವಲಯ-8 ಮತ್ತು ಸಕಲ ದಿಗಂಬರ ಜೈನ ಸಮಾಜ ಬಾಂಧವರು ಆಯೋಜಕರಾಗಿ ಸಹಕರಿಸುವರು.

ಧರ್ಮಸ್ಥಳದಲ್ಲಿ ಬುಧವಾರ ನಡೆದ ಆಮಂತ್ರಣ ಪತ್ರ ಬಿಡುಗಡೆ ಸಂದರ್ಭದಲ್ಲಿ ಭಾರತೀಯ ಜೈನ್‌ಮಿಲನ್, ಮಂಗಳೂರು ವಲಯ-8 ರ ಉಪಾಧ್ಯಕ್ಷ ಸುದರ್ಶನ್ ಜೈನ್, ಎಂ. ಸುಭಾಶ್ಚಂದ್ರ ಜೈನ್, ಉಜಿರೆಯ ಬಿ. ಪ್ರಮೋದ್ ಕುಮಾರ್, ಬಿ. ಸೋಮಶೇಖರ ಶೆಟ್ಟಿ, ಬಿ. ಭುಜಬಲಿ, ಧರ್ಮಸ್ಥಳ, ಬೆಳ್ತಂಗಡಿ ಜೈನ್‌ಮಿಲನ್ ಅಧ್ಯಕ್ಷ ಸನ್ಮತಿಕುಮಾರ್, ಸುಮನ್ ಕುಮಾರ್, ಜ್ಯೋತಿ ಕುಮಾರಿ, ಅರ್ಪಣಾ ಜೈನ್ ಮತ್ತು ವಿವೇಕ ಜೈನ್, ಮೂಡಬಿದ್ರೆ ಉಪಸ್ಥಿತರಿದ್ದರು.
ಹೇಮಾವತಿ ವಿ. ಹೆಗ್ಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರ್ ಅವರಿಗೂ ಆಮಂತ್ರಣ ಪತ್ರ ನೀಡಲಾಯಿತು.











