September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾಳೆ (ಸೆ.17) ಲಾಯಿಲದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ: ವಿಶ್ವಕರ್ಮ ಟ್ಯಾಲೆಂಟ್ ಶೋ-2026

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ ವತಿಯಿಂದ ಶಿವಪ್ರಸಾದ್ ಪುರೋಹಿತ್ ಸವಣಾಲು ಇವರ ಪೌರೋಹಿತ್ಯದಲ್ಲಿ ಶ್ರೀ ವಿಶ್ವಕರ್ಮಯಜ್ಞ ಮತ್ತು ಪೂಜೆಯು ಸೆ.17ರಂದು ಬೆಳ್ತಂಗಡಿ ಸಂಘದ ಸಭಾಭವನದಲ್ಲಿ ನಡೆಯಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ್ಯಾಲ ವಿಶ್ವಕರ್ಮಾಭ್ಯುದಯ ಸಭಾದ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ವಹಿಸಲಿರುವರು. ಶಿವಪ್ರಸಾದ್ ಮಲೆಬೆಟ್ಟು ಧಾರ್ಮಿಕ ಉಪನ್ಯಾಸವನ್ನು ನೀಡಲಿರುವರು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ, ಪ್ರಸನ್ನ ಯು ಆಚಾರ್ಯ, ಸಹಾಯಕ ಸರ್ಕಾರಿ ಅಭಿಯೋಜಕಿ ಶೋಭಾ ಎಸ್., ಭಾಗವಹಿಸುವರು. ರುಕ್ಮಯ ಆಚಾರ್ಯ ಕನ್ನಾಜೆ, ರಾಧಾಕೃಷ್ಣ ಆಚಾರ್ಯ, ಪುರುಷೋತ್ತಮ ಆಚಾರ್ಯ, ಲಕ್ಷ್ಮೀ ತಾರನಾಥ್, ಉಷಾ ಹರಿಪ್ರಸಾದ್, ರಮೇಶ್ ಆಚಾರ್ಯ, ಸುಬ್ರಹ್ಮಣ್ಯ ಆಚಾರ್,
ಶಿಲ್ಪಿಗಳಾದ ಜಯಚಂದ್ರ ಆಚಾರ್ಯ ನಾಳ, ರಾಜೇಶ್ ಆಚಾರ್ಯ ಗೇರುಕಟ್ಟೆ ಉಪಸ್ಥಿತರಿರುವರು.

ವಿಶ್ವಕರ್ಮ ಟ್ಯಾಲೆಂಟ್ ಶೋ-2026:
ಮಧ್ಯಾಹ್ನ 2 ರಿಂದ “ವಿ.ಎಸ್.ಡಿ ಶೋ ಮಾಸ್ಟರ್ಸ್ ಉಜಿರೆ ಮತ್ತು “ಸ್ವರ ಮಾಧುರ್ಯ ಬೆಳ್ತಂಗಡಿ” ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಶ್ವಕರ್ಮ ಟ್ಯಾಲೆಂಟ್ ಶೋ-2026 ಪಿಲ್ಮಿ ನೃತ್ಯ ಸ್ಪರ್ಧೆ, ಸೋಲೋ ನೃತ್ಯ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ಸ್ಪರ್ಧೆಯ ನಿಯಮಗಳು: ಸ್ಪರ್ಧೆಗೆ ಸೂಕ್ತವಾದ ಹಾಗೂ ಸಭ್ಯವಾದ ವೇಷಭೂಷಣ ಕಡ್ಡಾಯ. ಲಯ, ಭಾವಾಭಿವ್ಯಕ್ತಿ, ನೃತ್ಯ ಸಂಯೋಜನೆ ಮತ್ತು ವೇದಿಕೆ ಪ್ರಸ್ತುತಿ ಆಧಾರದ ಮೇಲೆ ಅಂಕಗಳನ್ನು ನೀಡಲಾಗುವುದು. ಎಲ್ಲಾ ಸ್ಪರ್ಧಿಗಳು ಸ್ಪರ್ಧೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ. ಯಾವುದೇ ವಿವಾದಗಳಿಗೆ ಅವಕಾಶವಿರುವುದಿಲ್ಲ.

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ನೋಟೀಸ್

Suddi Udaya

ಬೆಳ್ತಂಗಡಿ ಲೋಬೊ ಮೋಟಾರ್ಸ್ ನಲ್ಲಿ ಜೂಫಿಟರ್ 113 ಸಿಸಿ ಸ್ಕೂಟಿ, ಮಾರುಕಟ್ಟೆಗೆ ಬಿಡುಗಡೆ

Suddi Udaya

ಕನ್ಯಾಡಿ ಯಕ್ಷಭಾರತಿಯಿಂದ ಮನೆ ಮನೆ ತಾಳಮದ್ದಳೆ ಚಾವಡಿಕೂಟ ಆರಂಭ

Suddi Udaya

ಉಜಿರೆ: ಯು.ಎಸ್. ಆಟೋ ಚಾಲಕ ಮಾಲಕರ ಸಂಘದಿಂದ ಸ್ವಾತಂತ್ರೋತ್ಸವ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಯೋಗ ಮತ್ತು ರಂಗ ತರಬೇತಿಯ ಉದ್ಘಾಟನೆ

Suddi Udaya
error: Content is protected !!