September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೋಜಾ ಸಂಸ್ಥೆಯ ಸೇವೆ ಹಾಗೂ ಸಮಾಜಮುಖಿ ಕಾರ್ಯ ಶ್ಲಾಘನೀಯ: ಎಂ.ಎಸ್. ಭಟ್

ಬೆಳ್ತಂಗಡಿ: ನಿವೃತ್ತ ಸರಕಾರಿ ವೈದ್ಯರಾಗಿದ್ದು, ಪ್ರಸ್ತುತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಂ.ಎಸ್. ಭಟ್ ಅವರು, ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಯ ಸೇವಾ ಚಟುವಟಿಕೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿ ಹರ್ಷ ವ್ಯಕ್ತಪಡಿಸಿದರು.

ಸೋಜಾ ಸಂಸ್ಥೆಯೊಂದಿಗೆ ಸುಮಾರು 40 ವರ್ಷಗಳಿಂದಲೂ ವಿಶ್ವಾಸದ ಬಾಂಧವ್ಯ ಹೊಂದಿದ್ದು, ಸಂಸ್ಥೆಯ ಗ್ರಾಹಕರಾಗಿದ್ದೇನೆ. ಯಾವುದೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಸಂದರ್ಭ ಬಂದಾಗ ನನ್ನ ಮೊದಲ ಆಯ್ಕೆ ಸೋಜಾ ಸಂಸ್ಥೆಯೇ ಆಗಿದೆ. ಸಂಸ್ಥೆಯ ಗುಣಮಟ್ಟದ ಉತ್ಪನ್ನಗಳು, ಉತ್ತಮ ಸೇವೆ ಹಾಗೂ ಗ್ರಾಹಕರೊಂದಿಗಿನ ವಿಶ್ವಾಸದ ಸಂಬಂಧ ಮೆಚ್ಚುವಂತದ್ದು ಎಂದರು.

ಮುಂದೆಯೂ ಸೋಜಾ ಸಂಸ್ಥೆಯೊಂದಿಗಿನ ತಮ್ಮ ಸಂಬಂಧವನ್ನು ಮುಂದುವರಿಸುವುದಾಗಿ ತಿಳಿಸಿದ ಅವರು, ತಮ್ಮ ಅಗತ್ಯಕ್ಕೆ ಅನುಗುಣವಾಗಿ ವಾಷಿಂಗ್ ಮಷಿನ್‌ನ್ನು ಸೋಜಾ ಸಂಸ್ಥೆಯಿಂದಲೇ ಖರೀದಿಸುವುದಾಗಿ ತಿಳಿಸಿ ಸಂಸ್ಥೆಗೆ ಶುಭ ಹಾರೈಸಿದರು.

Related posts

ಬೆಳ್ತಂಗಡಿ: ನವೋದಯ ವಿದ್ಯಾಲಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರವೇಶ ಪರೀಕ್ಷೆಯ ತರಬೇತಿ ಪ್ರಾರಂಭ

Suddi Udaya

ಸರ್ಕಾರಿ ಪ್ರೌಢಶಾಲೆ ವೇಣೂರುನಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ: ಪುಷ್ಪಾರ್ಚನೆ ಹಾಗೂ ಮೆರವಣಿಗೆ ಮೂಲಕ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

Suddi Udaya

ಧರ್ಮಸ್ಥಳ ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಬೆಂಗಳೂರು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪೆನಿ ವತಿಯಿಂದ ನಾಳ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ ವಿತರಣೆ

Suddi Udaya

ಡಿ.12: ಹಳೆ ಕಟ್ಟಡ ಕಲ್ಲೇರಿಯಲ್ಲಿ “ಕಲ್ಲೇರಿ ವೆಲ್‌ನೆಸ್ ಸೆಂಟರ್‌”ನ ಶುಭಾರಂಭ

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಪದಗ್ರಹಣ

Suddi Udaya
error: Content is protected !!